ತಂಬಾಕು, ಮದ್ಯ ಸೇವನೆ ಸಂತಾನ ಶಕ್ತಿಗೆ ತೊಂದರೆ

0
2236

ಜೀವನಶೈಲಿ ಬದಲಾವಣೆಗಳು ದೇಹದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿವೆ. ಯುವ ಜನಾಂಗ ಐಷಾರಾಮಿ ಜೀವನಶೈಲಿಗೆ ಮಾರು ಹೋಗಿ ಧೂಮಪಾನ, ಮದ್ಯಸೇವನೆಯ ದಾಸರಾಗುತ್ತಿದ್ದಾರೆ. ತಂಬಾಕು ಹಾಗೂ ಮದ್ಯ ಸೇವನೆಯಿಂದ ಸಂತಾನ ಹೀನತೆಗೆ ಕಾರಣವಾಗುವುದು ಬೆಳಕಿಗೆ ಬಂದಿದೆ. ತಂಬಾಕು ಹಾಗೂ ಮದ್ಯ ಸೇವನೆಯಿಂದ ಹಲವು ರೋಗಗಳು ಕಟ್ಟಿಟ್ಟ ಬುತ್ತಿ. ಇದರ ಜೊತೆಗೆ ಸಂತಾನಹೀನತೆಗೂ ಇದು ಕಾರಣವಾಗುತ್ತಿದೆ. ಜೀವನಶೈಲಿ ಬದಲಾವಣೆ ಸಂತಾನ ಹೀನತೆಗೆ ಕಾರಣವಾಗಿದೆ.

ತಂಬಾಕು ಬಳಕೆ ಅಥವಾ ಧೂಮಪಾನ ಮಾಡುವುದರಿಂದ ಪುರುಷರ ವೀರ್ಯ ಉತ್ಪಾದನಾ ಕಣಗಳ ಅಭಿವೃದ್ಧಿಗೆ ಧಕ್ಕೆಯಾಗುತ್ತದೆ. ತಂಬಾಕು ಸೇವನೆ ವೀರ್ಯ ಉತ್ಪಾದನೆ ಕಡಿಮೆ ಮಾಡುತ್ತದೆ. ಇದು ಪುರುಷರಲ್ಲಿ ಹಾರ್ಮೋನುಗಳು ಏರುಪೇರು ಆಗಲು ಕಾರಣ.

ಮಹಿಳೆಯರು ಧೂಮಪಾನಿಗಳಾಗಿದ್ದರೂ ಅವರ ಋತುಚಕ್ರದ ಏರುಪೇರಿಗೂ ತಂಬಾಕು ಸೇವನೆ ಕಾರಣವಾಗುತ್ತದೆ. ವಿಶ್ವ ಆರೋಗ್ಯ ಸಂಘಟನೆಯ ಅಧ್ಯಯನದ ಪ್ರಕಾರ ಧೂಮಪಾನ ಬಳಕೆಯ ಭಾರತದಲ್ಲಿ ಶೇಕಡ 17 ರಷ್ಟು ಇದೆ.

ಸಂತಾನಹೀನತೆ ಸಮಸ್ಯೆಯಿಂದ ಮುಕ್ತಿ ಪಡೆಯಬೇಕೇ?

ಮದ್ಯಪಾನ ಸೇವನೆ ಸಹ ಸಂತಾನಹೀನತೆಗೆ ಕಾರಣವಾಗುತ್ತಿದೆ.  ಮದ್ಯಪಾನ ಪುರುಷರಲ್ಲಿ ವೀರ್ಯದ ಗುಣಮಟ್ಟದ ಮೇಲೆ ಪ್ರಭಾವ ಬೀರುತ್ತದೆ.

ವಿಳಂಬ ಗರ್ಭಧಾರಣೆಯ ಸಂತಾನ ಹೀನತೆಗೆ ಕಾರಣವಾಗುತ್ತದೆ. ವಿವಿಧ ಕಾರಣಗಳಿಂದ ಮಹಿಳೆಯರು ಇತ್ತೀಚಿನ ದಿನಗಳಲ್ಲಿ ಗರ್ಭಧಾರಣೆಗೆ ವಿಳಂಬ ಮಾಡುತ್ತಾರೆ. ಇದು ಕೂಡ ಸಂತಾನಹೀನತೆ ಕಾರಣವಾಗುತ್ತದೆ. ಮಹಿಳೆಯರಲ್ಲಿ 35 ವರ್ಷ ವಯಸ್ಸಿನ ನಂತರ ಅಂಡಾಣುವಿನ ಗುಣಮಟ್ಟ ಕಡಿಮೆಯಾಗುತ್ತದೆ. ಹಾಗಾಗಿ ಬೇಗ ಗರ್ಭಧರಿಸಿದರೆ ಈ ಸಮಸ್ಯೆಯಿಂದ ಪಾರಾಗಬಹುದು. ಬೊಜ್ಜು ಸಹ ಸಂತಾನಹೀನತೆ ಕಾರಣವಾಗುತ್ತದೆ. ಬೊಜ್ಜು ಹಾರ್ಮೋನುಗಳ ಏರುಪೇರು ಋತುಸ್ರಾವ ಸಮಸ್ಯೆಗೆ ಕಾರಣವಾಗುತ್ತದೆ.

ಹಾಗಾಗಿ ಜೀವನಶೈಲಿ ಬದಲಾವಣೆಯಿಂದ ಸಂತಾನಹೀನತೆ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಮುಖ್ಯವಾಗಿ ಯುವತಿಯರು ಆರೋಗ್ಯಕರ ಜೀವನಶೈಲಿ ಅನುಸರಿಸುವುದು ಅಗತ್ಯ. ಇದರ ಜೊತೆಗೆ ವ್ಯಾಯಾಮ ಮತ್ತೆ ಉತ್ತಮ ಆಹಾರ ಸೇವನೆ ಅಭ್ಯಾಸ ರೂಢಿಸಿಕೊಳ್ಳುಬೇಕು. ಅನಿಯಮಿತ ಋತುಚಕ್ರದ ಸಮಸ್ಯೆ ಇದ್ದಲ್ಲಿ ವೈದ್ಯರನ್ನು ಸಂಪರ್ಕಿಸುವುದು ಅತಿ ಅವಶ್ಯ. ಮದುವೆಯ ಒಂದು ವರ್ಷದ ನಂತರ ಗರ್ಭಧರಿಸಿದ ಪ್ರಕರಣಗಳಲ್ಲಿ ಒಮ್ಮೆ ಸಂತಾನಶಕ್ತಿ ಕುರಿತು ಋತು ಪರೀಕ್ಷೆಗೆ ಒಳಪಡುವುದು ಅಗತ್ಯ. ಇಂದು ಸಂತಾನ ಹೀನತೆಗೆ ವಿವಿಧ ರೀತಿಯ ಅತ್ಯಾಧುನಿಕ ಚಿಕಿತ್ಸೆ ಭಾರತದಲ್ಲಿ ಲಭ್ಯವಿದೆ. ಬಹುತೇಕ ಶೇಕಡ 70 ಪ್ರಕರಣಗಳಲ್ಲಿ ಕನಿಷ್ಠ ಮಟ್ಟದ ಚಿಕಿತ್ಸೆ ಸಾಕು.