ತಿರುಪತಿಯ ಲಡ್ಡುವಿನಲ್ಲಿ ‘ನಟ್’, ‘ಬೋಲ್ಟ್’, ‘ಪಾನ್ ಪರಾಗ್ ಕವರ್’ ಮತ್ತು ಕೀ ಚೈನ್ಗಳು?

0
930

ತಿರುಪತಿ ತಿಮ್ಮಪ್ಪನ ಪ್ರಸಾದವೆಂದರೆ ಯಾರಿಗಿಷ್ಟವಿಲ್ಲ ಹೇಳಿ? ತಿಮ್ಮಪ್ಪನ ಪ್ರಸಾದವೆಂದರೆ ಎಲ್ಲರಿಗು ಅಚ್ಚು ಮೆಚ್ಚು. ಘಮ ಘಮಿಸುವ ವಾಸನೆ, ಗೋಡಂಬಿ, ದ್ರಾಕ್ಷಿ ಸವಿಯೋದು ಅದ್ಭುತವಾದ ಅನುಭವ. ಆದರೆ, ಟಿ. ನರಸಿಂಹ ಮೂರ್ತಿ ಎಂಬುವವರು ಲಡ್ಡು ತಯಾರು ಮಾಡುವಾಗ ಆಗುವ ಕಾರ್ಯವಿಧಾನವನ್ನು ತಿಳಿಸಿದರೆ ನೀವು ದಂಗಾಗುತ್ತೀರಿ ! ಏನದು ಅಂತ ಕೇಳ್ತೀರಾ?

ಟಿ. ನರಸಿಂಹ ಮೂರ್ತಿ ಯವರು Food Safety and Standards Authority of India ಎಂಬ ಆಹಾರ ಗುಣಮಟ್ಟ ಮತ್ತು ಕಾರ್ಯಭಾರ ನಿರ್ವಹಿಸುವ ಸಂಸ್ಥೆಗೆ ತಾವು ಪಡೆದ ತಿರುಪತಿಯ ಪ್ರಸಾದದಲ್ಲಿ ಮತ್ತು ಪಾಕಶಾಲೆಗೆ ಖುದ್ದು ಭೇಟಿ ನೀಡಿದಾಗ ಲಡ್ಡುವಿನಲ್ಲಿ “ನಟ್, ಬೋಲ್ಟ್, ಪಾನ್ ಪರಾಗ್ ಕವರ್, ಕೀ ಚೈನ್ ಸಿಕ್ಕಿರುವ ಬಗ್ಗೆ ದೂರಿದ್ದಾರೆ”

ದೂರು ಸ್ವೀಕರಿಸಿರುವ FSSAI ರವರು – ಆಹಾರ ಸುರಕ್ಷತಾ ಆಯುಕ್ತರಿಗೆ ಪತ್ರ ಬರೆದು, ತನಿಖೆ ಕೈಗೊಳ್ಳುವ ಕುರಿತಾಗಿ ಆದೇಶಿಸಿದ್ದಾರೆ. ಲಡ್ಡುಗಳನ್ನು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ [Food Safety and Standards Act, 2006 Act ]ರ ಅನ್ವಯ ಲಡ್ಡುಗಳ ಗುಣಮಟ್ಟ ಮತ್ತು ಸ್ವೀಕರಿಸಲು ಯೋಗ್ಯವ ಅಥವಾ ಇಲ್ಲವಾ ಎಂದು ಪ್ರಮಾಣೀಕರಣ [certification] ನೀಡಲಾಗುವುದು.

ತಿರುಮಲ ತಿರುಪತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೂ ಮತ್ತು ಆಂಧ್ರ ಪ್ರದೇಶದ ಆಹಾರ ಸುರಕ್ಷತಾ ಆಯುಕ್ತರಿಗೂ ಬರೆದಿರುವ ಆಗಸ್ಟ್ಪ ೧ ರ FSSAI ಪತ್ರದಲ್ಲಿ:

“ಮಾನ್ಯರೇ, ಶ್ರೀ ಟಿ.ನರಸಿಂಹ ಮೂರ್ತಿ ಎಂಬುವವರು ಬರೆದಿರುವ ಪತ್ರವನ್ನು ಲಗತ್ತಿಸಿರುತ್ತೇನೆ. ತಿರುಪತಿ ತಿರುಮಲ ದೇವಸ್ಥಾನದಲ್ಲಿ ಪ್ರಸಾದ ತಯಾರಿಕೆಯಲ್ಲಾಗಿರುವ ಹಲವು ಲೋಪ ದೋಷಗಳನ್ನು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಶ್ರೀಯುತರು ನೀಡಿದ ದೂರು ಸ್ವಯಂ ಸ್ಪಷ್ಟೀಕೃತವಾಗಿದೆ [self explanatory]. ನೀವು ನೀಡಿರುವ ಮಾಹಿತಿಯನ್ನು ಗಣನೆಗೆ ತೆಗೆದುಕೊಂಡು, ಪ್ರಸಾದ ತಯಾರಿಕೆಯಲ್ಲಾಗುತ್ತಿರುವ ಲೋಪ ದೋಷಗಳನ್ನು ಮತ್ತು ಸುರಕ್ಷಾ ನಿಯಮವಾಳಿಗಳನ್ನು ಉಲ್ಲಂಘಿಸಿರುವ ಕುರಿತು ತನಿಖೆ ನಡೆಸಬೇಕಾಗಿ ಕೋರಲಾಗಿದೆ”

ಜೂನ್ 2016 ರಲ್ಲಿ ನರಸಿಂಹ ಮೂರ್ತಿಯವರು ತಿರುಪತಿ ತಿರುಮಲ ದೇವಸ್ಥಾನಕ್ಕೆ ನೀಡಿದ್ದ ದೂರಿನಲ್ಲಿ ಪ್ರಸಾದ ತಯಾರಿಕೆಯಲ್ಲಿದ್ದ ದೋಷಗಳನ್ನು; ಅಶುದ್ಧ ವಾತಾವರಣವನ್ನು; ಮತ್ತು ಪ್ರಸಾದ ತಯಾರಿಕೆಯಲ್ಲಿ, ಅಂದರೆ ಉತ್ಪಾದನೆ [manufacturing ]; ಶೇಖರಣೆ [storage ]; ವಿತರಣೆ [distribution]; ಮತ್ತು ಮಾರಾಟದಲ್ಲಾಗುವ [sale] ದೋಷಗಳನ್ನು ಪಟ್ಟಿ ಮಾಡಿ ಟಿ.ಟಿ.ಡಿ ಗೆ ದೂರು ನೀಡಿದ್ದರು.

ಅಷ್ಟೇ ಅಲ್ಲದೆ, ಪ್ರಸಾದ ತಯಾರಿಕೆಯಲ್ಲಿ ನಿರತವಾದ ಸಿಬ್ಬಂದಿ ಸುರಕ್ಷತಾ ಕಯ್ಗವುಸು, [safety gloves], ಮುಂಗವಚ [Apron] ಹಾಕಿಕೊಳ್ಳದೆ ಕೆಲಸ ಮಾಡುತ್ತಿರುವುದಾಗಿ ಹೇಳಿದ್ದರು. ಪ್ರಸಾದ ತಯಾರಿಕೆಯಲ್ಲಿ ಕೆಲಸ ಮಾಡುವ ಸಿಬ್ಬಂದಿ ಪಾಕಶಾಲೆಯಲ್ಲಿರುವ ಕಾವು ಮತ್ತು ಧಗೆಯಿಂದ ಬೆವರುತ್ತಿದ್ದರು ಎಂದು ದೂರಿದ್ದರು. ಪಾಕಶಾಲೆಯ ಶುದ್ಧತೆಯನ್ನು ಅಥವಾ ವಯಕ್ತಿಕ ಶುದ್ಧತೆ [personal hygiene] ಕಾಪಾಡುವ ಯಾವುದೇ ರೀತಿಯಾದ ಮುಂಜಾಗ್ರಾತ ಕ್ರಮವನ್ನು ಸಿಬ್ಬಂದಿಯಾಗಲಿ ಅವರ ಮೇಲ್ವಿಚಾರಕರಾಗಲಿ ವಹಿಸಿರಲಿಲ್ಲ ಎಂದು ದೂರಿದ್ದರು.

ಫುಡ್ ಸೇಫ್ಟಿ ಅಂಡ್ ಸ್ಟ್ಯಾಂಡರ್ಡ್ಸ್ ಆಕ್ಟ್ ನ ಯಾವುದೇ ನಿಯಮವನ್ನು ಟಿ.ಟಿ.ಡಿ ಪಾಲಿಸಿರುವುದಿಲ್ಲ ಎಂದು ಮೂರ್ತಿಗಳು ತಮ್ಮ ದೂರಿನಲ್ಲಿ ಹೇಳಿದ್ದಾರೆ.

ತನಿಖೆಯೇ ಆಗಿಲ್ಲ !

ದೂರಿನ ಪ್ರಗತಿಯ ಕುರಿತು ಮೂರ್ತಿಗಳು ವಿಚಾರಿಸಿದಾಗ – ಜಂಟಿ ಆಯುಕ್ತರು, ಆಹಾರಾ ಸುರಕ್ಷತೆ ಇಲಾಖೆಯಿಂದ ಹಾರಿಕೆಯ ಉತ್ತರ ಬಂದಿದೆ. “ನಮಗೆ ಟಿ.ಟಿ.ಡಿ ಯಾಗಲಿ ಅಥವಾ ಆಂಧ್ರ ಪ್ರದೇಶದ ಆಹಾರಾ ಭದ್ರತೆಯ ಆಯುಕ್ತರಿಂದಾಗಲಿ ಮಾಹಿತಿ ಬಂದಿಲ್ಲವೆಂದು ಲಿಖಿತ ರೂಪದಲ್ಲಿ ಹೇಳಿದ್ದಾರೆ”

ತಿರುಪತಿ ಲಡ್ಡು

೩೦೦ ವರ್ಷದ ಭವ್ಯ ಇತಿಹಾಸವಿರುವ ತಿರುಪತಿ ಲಡ್ಡು ಉತ್ಪಾದನೆಯಲ್ಲಿ ಈ ರೀತಿಯಾದ ಅಶುದ್ಧ ತಯಾರಿಕೆ ಕಂಡಿರುವುದು ಭಕ್ತಾದಿಗಳಿಗೆ ಬೇಸರ ತಂದಿದೆ. ತಿರುಪತಿಯಲ್ಲಿ ಅಸ್ಥಾನಂ ಲಡ್ಡು, (ಹಬ್ಬಗಳಲ್ಲಿ ತಯಾರಿಸುವ ಲಡ್ಡು), ಕಲ್ಯಾಣೋತ್ಸವ ಲಡ್ಡು (ಕಲ್ಯಾಣೋತ್ಸವದಲ್ಲಿ ತಯಾರಿಸುವ ಲಡ್ಡು) ಮತ್ತು ಪ್ರೋಕ್ತಮ್ ಲಡ್ಡು (ಭಕ್ತಾದಿಗಳಿಗೆ ಹಂಚುವ ಲಡ್ಡು) ಎಂದು ವಿಂಗಡಿಸಲಾಗಿದೆ. ಲಡ್ಡುವನ್ನು ವಡೆಯೊಂದಿಗೆ ಭಕ್ತಾದಿಗಳಿಗೆ ಕೊಡಲಾಗುತ್ತದೆ; ಇದನ್ನು ಶ್ರೀ ವಾರಿ ಪ್ರಸಾದಂ ಎಂದು ಕರೆಯಲಾಗುತ್ತದೆ.

ಫುಡ್ ಸೇಫ್ಟಿ ಅಂಡ್ ಸ್ಟ್ಯಾಂಡರ್ಡ್ಸ್ ಆಕ್ಟ್ ಅನ್ನು ಉಲ್ಲಂಘಿಸುವವರು ಅಥವಾ ಪರವಾನಗಿ ರಹಿತವಾಗಿ ಮಾರಾಟ ಮಾಡುವವರು ೬ ತಿಂಗಳು ಜೈಲು ಶಿಕ್ಷ್ ಮತ್ತು ೫ ಲಕ್ಷ ದಂಡ ನೀಡಬೇಕಾಗುವುದು.

ಶುಚಿಯಾದ ಪಾತ್ರೆಗಳಲ್ಲಿ, ಅಥವಾ ಗಾಜಿನಿಂದ ಮಾಡಿರುವ ಪಾತ್ರೆಗಳಲ್ಲಿ ಇದನ್ನು ಶೇಖರಿಸಬೇಕು ಮತ್ತು ಕೈಗವಸನ್ನು ಬಳಸದೆ ‘ಬರಿ ಕೈಯಲ್ಲೇ’ ಮುಟ್ಟಬಾರದೆಂದು ಕಾಯ್ದೆ ಹೇಳುತ್ತದೆ. ಕ್ರಿಮಿ ಕೀಟಗಳು, (ನೊಣ ಇತ್ಯಾದಿ) ಬರದಿರುವ ಹಾಗೆ ವ್ಯವಸ್ಥೆ ಮಾಡ್ಬೇಕು ಮತ್ತು ಶುದ್ದೀಕರಿಸದ ಸ್ಪೂನ್ ಗಳಿಂದ ಇದನ್ನು ನೀಡಬೇಕು ಎಂದು ಕಾಯ್ದೆ ತಿಳಿಸುತ್ತದೆ. ಆದರೆ, ಟಿ.ಟಿ.ಡಿ ಪಾಕಶಾಲೆಗಳು ಯಾವುದೇ ನಿಯಮಾವಳಿಗಳನ್ನು ಪಾಲಿಸುತ್ತಿಲ್ಲ. ಮದ್ರಾಸ್ ಸರ್ಕಾರ ಇದನ್ನು ಮೊದಲಾಗಿ ‘ ಬೂನ್ದೀ ಕಾಳಾಗಿ’ ಹಂಚುತ್ತಿದ್ದರು; ಕ್ರಮೇಣ ಇದರ ಬೇಡಿಕೆ ಹೆಚ್ಚಾದಾಗ ೧೯೪೦ ರಿಂದ ಲಡ್ಡು ತಯಾರಿಕೆಗೆ ಚಾಲನೆ ನೀಡಲಾಯಿತು.