ಜ್ಯೋತಿಷಿ ಭವಿಷ್ಯ ಕೇಳಿ ತುಂಬು ಗರ್ಭಿಣಿಯನ್ನು ಜೀವಂತವಾಗಿ ಸುಟ್ಟರು

0
755

ನೆಲ್ಲೂರು:ಆಂಧ್ರದಲ್ಲಿ ನಡೆದ ಅಂತ್ಯಂತ ಕ್ರೂರ ಹಾಗೂ ಕಳವಳಕಾರಿ ಘಟನೆಯಲ್ಲಿ  ತುಂಬು ಗರ್ಭಿಣಿಯೊಬ್ಬಳನ್ನು ಜೀವಂತವಾಗಿ ಸುಟ್ಟು ಕೊಲೆಗೈಯಲಾಗಿದೆ.

ಹೆಣ್ಣು ಹೆರುತ್ತಾಳೆ ಎಂದು ಜ್ಯೋತಿಷಿಯ ಭವಿಷ್ಯ ನುಡಿದ ಬಳಿಕ ಮನೆಗೆ ಮರಳಿದ ಅತ್ತೆ ಮಾವ ಸೊಸೆಯ ಮೇಲೆ ಸೀಮೆ ಎಣ್ಣೆ ಸುರಿದು ಜೀವಂತವಾಗಿ ಸುಟ್ಟು ಕೊಲೆಗೈದಿರುವ ಕುರಿತು ಪ್ರಕರಣ ದಾಖಲಾಗಿದೆ.

ಮೃತ ಮಹಿಳೆಯ ಗಂಡನ ಮನೆಯವರು ಕೃತ್ಯದ ಬಳಿಕ ನಾಪತ್ತೆಯಾಗಿದ್ದು ,ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಹೆಣ್ಣು ಹುಟ್ಟುತ್ತೆ ಎಂಬ ಭವಿಷ್ಯ ಮುಳುವಾಯ್ತು: ಈ ಮಧ್ಯೆ ಗಿರಿಜಾ ಮತ್ತೆ ಗರ್ಭಿಣಿಯಾದಳು. ಆಗ ಮತ್ತಷ್ಟು ರೊಚ್ಚಿಗೆದ್ದ ಲಕ್ಷ್ಮೀಕಾಂತಮ್ಮ ಹಾಗೂ ಸುಭಾಷಿಣಿ ಇನ್ನೂ ಹೆಚ್ಚಿನ ಹಿಂಸೆ ಕೊಡೋಕೆ ಶುರು ಮಾಡಿದರು. ಇದೇ ವೇಳೆ ಮನೆಯ ಹಿರಿಯರೆಲ್ಲ ಸೇರಿ ಮುಂದೆ ಹುಟ್ಟಲಿರುವ ಮಗುವಿನ ಲಿಂಗ ಪತ್ತೆ ಹಚ್ಚಲು ಅದೇ ಊರಿನ ಸ್ಥಳೀಯ ಜ್ಯೋತಿಷಿ ಮೊರೆ ಹೋದರು. ಕೂಡಿ ಕಳೆದು ಲೆಕ್ಕಾಚಾರ ಹಾಕಿದ ಜ್ಯೋತಿಷಿ ಗಿರಿಜಾಗೆ ಹೆಣ್ಣು ಮಗು ಹುಟ್ಟಲಿದೆ ಎಂದು ಭವಿಷ್ಯ ನುಡಿಯುತ್ತಾನೆ. ಜ್ಯೋತಿಷಿ ಜೊತೆಯಲ್ಲಿದ್ದಾಗ ಶಾಂತವಾಗಿದ್ದ ಇಬ್ಬರೂ ಮನೆಗೆ ವಾಪಸ್ ಬಂದ ನಂತರ ಆಕ್ರೋಶವನ್ನು ಗಿರಿಜಾ ಮೇಲೆ ತೋರಿಸಲು ಆರಂಭಿಸುತ್ತಾರೆ. ನಮಗೆ ಇನ್ನೊಂದು ಹೆಣ್ಣು ಮಗುವಿನ ಅವಶ್ಯಕತೆಯಿಲ್ಲ ಎಂದು ಗರ್ಭಪಾತ ಮಾಡುವಂತೆ ಒತ್ತಾಯಿಸುತ್ತಾರೆ. ಮನೆಗೆ ಮತ್ತೊಬ್ಬಳು ಮಹಾಲಕ್ಷ್ಮಿ ಬರುವುದು ಬೇಡವೆಂದು ಅತ್ತೆ ಲಕ್ಷ್ಮೀಕಾಂತಮ್ಮ ಮನೆಯಲ್ಲೇ ಸುಭಾಷಿಣಿ ಜೊತೆ ಸೇರಿ ಎಲ್ಲಾ ಪ್ಲ್ಯಾನ್ ಮಾಡುತ್ತಾರೆ.

ಮೊನ್ನೆ ರಾತ್ರಿ ಗಿರಿಜಾ ಮನೆಯಲ್ಲಿ ಗಾಢ ನಿದ್ದೆಯಲ್ಲಿದ್ದಾಗ ಅಲ್ಲಿಗೆ ಬಂದವರು ಹೊಟ್ಟೆಯ ಮೇಲೆ ಆಸಿಡ್ ಹಾಕುತ್ತಾಳೆ. ಯಾವಾಗ ಹೊಟ್ಟೆ ಮೇಲೆ ಆಸಿಡ್ ಬಿತ್ತೋ ಗಿರಿಜಾ ಉರಿಯಿಂದ ಕಿರುಚಾಡಲು ಆರಂಭಿಸುತ್ತಾಳೆ. ಈ ವೇಳೆ ಲಕ್ಷೀಕಾಂತಮ್ಮ ಗಿರಿಜಾಗೆ ಬೆಂಕಿ ಹಚ್ಚಿದ್ದಾಳೆ.

ಗಿರಿಜಾ ಆರ್ತನಾದ ಕೇಳಿ ಅಕ್ಕಪಕ್ಕದ ಮನೆಯವರು ಬಂದಾಗ ಪರಿಸ್ಥಿತಿ ಕೈ ಮೀರಿ ಹೋಗಿತ್ತು. ಆದರೆ ಘಟನೆ ವೇಳೆ ಗಿರಿಜಾಳ ಪತಿ ಶ್ರೀನಿವಾಸುಲು ಮನೆಯಲ್ಲಿರಲಿಲ್ಲ ಎಂದು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಮುತ್ತುಕರ್ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ಬೆಂಕಿ ಹಚ್ಚಿದ ಬಳಿಕ ಇಬ್ಬರು ಕಿಲಾಡಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಪೊಲೀಸರು ಇವರಿಬ್ಬರ ಬಂಧನಕ್ಕೆ ತಂಡ ರೂಪಿಸಿದ್ದಾರೆ.