ಘನ ತ್ಯಾಜ್ಯ ವಿಲೇವಾರಿ ಸಮಸ್ಯೆಗೆ ಶಾಶ್ವತ ಪರಿಹಾರ

0
1707

ನಮ್ಮ ಸೌರವ್ಯೂಹದಲ್ಲಿ ಜೀವಸೆಲೆ ಹೊಂದಿರುವ ಏಕೈಕ ಗ್ರಹ ಭೂಮಿ. ಭೂಮಿಯನ್ನು ಈ 21ನೇ ಶತಮಾನದಲ್ಲಿ ಕಾಡುತ್ತಿರುವ ಸಮಸ್ಯೆಗಳಲ್ಲಿ ಇದು ಒಂದು ಪ್ರಮುಖವಾದದ್ದು. ಮನುಷ್ಯನ ಅಭಿವೃದ್ದಿ ಎಂಬ ಸ್ವಾರ್ಥ ಭಾವನೆಯಿಂದ ತ್ಯಾಜ್ಯ ಅಥವಾ ಘನತ್ಯಾಜ್ಯದ ಸಮಸ್ಯೆ ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತಿದೆ.

ಕೈಗಾರಿಕೆಗಳಿಂದ ಬರುವ ತ್ಯಾಜ್ಯಗಳು ಇತ್ಯಾದೆ. ಇಂತಹ ತ್ಯಾಜ್ಯದ ಸಮಸ್ಯೆಯನ್ನು ಪ್ರಪಂಚದ ಮುಂದುವರೆದ ದೇಶಗಳಲ್ಲಿನ ನಗರಗಳಲ್ಲಿ ಸರ್ವೆಸಾಮಾನ್ಯವಾಗಿ ಕಾಣಬಹುದು. ಉದಾಹರಣೆಗೆ ಬರ್ಲಿನ್, ಪ್ಯಾರೀಸ್, ಲಕ್ಸಂಬರ್ಗ್, ಭಾರತದ ದೆಹಲಿ, ಮುಂಬೈ, ಬೆಂಗಳೂರು, ಹೈದರಾಬಾದ್, ಇತ್ಯಾದೆ ನಗರಗಳಲ್ಲಿ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.

ಸೂಕ್ತ ವಿಲೇವಾರಿ ಕ್ರಮ
1. ದಹನ ಕ್ರಿಯೆ: ಕೆಲವು ಸೋಂಕು ತ್ಯಾಜ್ಯಗಳು ಪ್ಲಾಸ್ಟಿಕ್ ಉತ್ಪನ್ನಗಳು, ಪೇಪರ್ ಗಳನ್ನು ಈ ಕ್ರಿಯೆಯ ಮೂಲಕ ದಹಿಸಿ ತ್ಯಾಜ್ಯದ ಪ್ರಮಾಣಗಳನ್ನು ತಗ್ಗಿಸಬಹುದು.
2. ಕೊಳೆಯಿಸುವುದು ಮತ್ತು ಎರೆಹುಳು ಬೇಸಾಯ
3. ತ್ಯಾಜ್ಯ ಹೊಂಡಗಳ್ಲಿ ಮುಚ್ಚುವುದು
4. ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆ ಸಾಧ್ಯ
5. ಸರ್ಕಾರದ ನೀತಿಗಳು ಮತ್ತು ಸಾರ್ವಜನಿಕ ಜಾಗೃತಿ

ರಾಜ್ಯ ಸರ್ಕಾರಗಳು ಜನರಲ್ಲಿ ಜಾಗೃತಿ ಮೂಡಿಸಿ ಹೊಸನೀತಿಗಳನ್ನು ರೂಪಿಸುವುದು ಅಗತ್ಯ.

ಘನ ತ್ಯಾಜ್ಯ ವಿಲೇವಾರಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮೂಲದಲ್ಲಿಯೇ ಕಸ ವಿಂಗಡಣೆ ಕಡ್ಡಾಯ ಜಾರಿಗೆ ಬಿಬಿಎಂಪಿ ಮುಂದಾಗಿದೆ. ಇದರ ಸಿದ್ಧತೆಗಾಗಿ ಮೂಲದಲ್ಲಿಯೇ ಕಸ ವಿಂಗಡಣೆ ಮಾಡದ ಸಾರ್ವಜನಿಕರು ಹಾಗೂ ವಾಣಿಜ್ಯ ಉದ್ದಿಮೆಗಳ ಮಾಲೀಕರಿಗೆ ದಂಡ ವಿಧಿಸುವ ಬಗ್ಗೆ ಜಾಗೃತಿ ಮೂಡಿಸಲು ಮುಂದಾಗಿದೆ. ಮೂಲದಲ್ಲಿಯೇ ಕಸ ವಿಲೇವಾರಿ ಮಾಡದ ಪ್ರತಿ ಮನೆಗೆ ಮೊದಲ ಬಾರಿಗೆ 100 ರೂ. ಹಾಗೂ 2ನೇ ಬಾರಿಗೆ 200 ರೂ. ದಂಡ ವಿಧಿಸಲು ಸರ್ಕಾರ ಈ ಮೊದಲೇ ಅನುಮೋದನೆ ನೀಡಿದೆ.

ಇದರ ಜತೆಗೆ, ವಾಣಿಜ್ಯ ಉದ್ದಿಮೆಗಳಿಗೆ ಮೊದಲ ಬಾರಿಗೆ 500 ರೂ. ಹಾಗೂ 2ನೇ ಬಾರಿಗೆ 1,000 ರೂ. ದಂಡ ವಿಧಿಸಲು ಅವಕಾಶ ನೀಡಿತ್ತು. ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರ ವಿಸರ್ಜನೆ, ಉಗುಳುವುದು, ಸಾಕು ಪ್ರಾಣಿಗಳಿಂದ ಗಲೀಜು ಮಾಡಿಸುವುದು ಸೇರಿದಂತೆ ಸ್ವತ್ಛತೆ ಕಾಪಾಡದ ಪ್ರತಿಯೊಂದು ಪ್ರಕರಣದಲ್ಲೂ ದಂಡ ವಿಧಿಸಲು ಅವಕಾಶವಿದೆ. ಇವೆಲ್ಲಾ ನಿಯಮ ಬಳಸಿಕೊಂಡು ದಂಡ ಪ್ರಯೋಗಕ್ಕೆ ಬಿಬಿಎಂಪಿ ಸಿದ್ಧತೆ ನಡೆಸಿದೆ.

ಈ ಬಗ್ಗೆ ಪ್ರಕಟಣೆಯಲ್ಲಿ ತಿಳಿಸಿರುವ ಬಿಬಿಎಂಪಿ ಆಯುಕ್ತ ಜಿ. ಕುಮಾರನಾಯಕ್‌, ನಗರ ಪಾಲಿಕೆ ಘನ ತ್ಯಾಜ್ಯ ವಿಲೇವಾರಿ ನಿರ್ವಹಣೆ ನಿಯಮ-2000 ರ ಪ್ರಕಾರ ಪ್ರತಿಯೊಬ್ಬ ಸಾರ್ವಜನಿಕರೂ ಮೂಲದಲ್ಲಿಯೇ ಕಸ ವಿಂಗಡಣೆ ಮಾಡುವುದು ಕಡ್ಡಾಯ. ತಪ್ಪಿದರೆ ಅವರಿಗೆ ದಂಡ ವಿಧಿಸಲು ಕಾನೂನಿನಲ್ಲಿ ಸರ್ಕಾರ 2012ರಲ್ಲಿ ಅವಕಾಶ ಮಾಡಿಕೊಟ್ಟಿದೆ. ಹೀಗಾಗಿ ಪ್ರತಿಯೊಬ್ಬರೂ ಮೂಲದಲ್ಲಿಯೇ ಕಸ ವಿಂಗಡಣೆ ಮಾಡುವಂತೆ ಮನವಿ ಮಾಡಿದ್ದಾರೆ.

ಇದರಿಂದ ಬಹುತೇಕ ಘನ ತ್ಯಾಜ್ಯ ಮರುಬಳಕೆಗೆ ಅನುವಾಗುತ್ತದೆ. ಉಳಿದ ಅಲ್ಪ ಪ್ರಮಾಣದ ತ್ಯಾಜ್ಯವನ್ನು ಲ್ಯಾಂಡ್‌ಫಿಲ್‌ಗ‌ಳಲ್ಲಿ ವೈಜ್ಞಾನಿಕವಾಗಿ ವಿಲೇವಾರಿ ಮಾಡಬಹುದು. ಇದರಿಂದ ಬೆಂಗಳೂರು ತ್ಯಾಜ್ಯ ಸಮಸ್ಯೆ ಪರಿಹಾರಕ್ಕೆ ಸಾರ್ವಜನಿಕರೂ ಕೊಡುಗಡೆ ನೀಡಿದಂತಾಗುತ್ತದೆ. ಇಲ್ಲದಿದ್ದರೆ ಬಿಬಿಎಂಪಿ ವತಿಯಿಂದ ದಂಡ ಪ್ರಯೋಗ ಪುನಃ ಆರಂಭಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.

ಖಾಲಿ ನಿವೇಶನಗಳಿಗೆ ನೋಟಿಸ್‌:

ಅಲ್ಲದೇ, ಕಸ, ಕಟ್ಟಡ ತ್ಯಾಜ್ಯ ಹಾಗೂ ಗಿಡಗಂಟೆ ತುಂಬಿಕೊಂಡಿರುವ ಖಾಲಿ ನಿವೇಶನಗಳ ಮಾಲೀಕರಿಗೆ ಮೂರು ದಿನದಲ್ಲಿ ಸ್ವತ್ಛಗೊಳಿಸುವಂತೆ ಸೂಚಿಸಿ ನೋಟಿಸ್‌ ನೀಡುವಂತೆ ವಲಯ ಜಂಟಿ ಆಯುಕ್ತರುಗಳಿಗೆ ಸೂಚಿಸಲಾಗಿದೆ.

ಮಾಲೀಕರು ಸ್ವತ್ಛಗೊಳಿಸದಿದ್ದರೆ ಸ್ಥಳೀಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ಗಳು ಕಸ ವಿಲೇವಾರಿ ಗುತ್ತಿಗೆದಾರರ ನೆರವಿನಿಂದ ಸ್ವತ್ಛ ಮಾಡಬೇಕು. ಬಳಿಕ ಪ್ರತಿ ಚದರಡಿಗೆ ಎರಡು ರೂ.ಗಳಂತೆ ದಂಡದ ರೂಪದ ಹಣವನ್ನು ಆಸ್ತಿ ತೆರಿಗೆಯೊಂದಿಗೆ ವಸೂಲಿ ಮಾಡಬೇಕು ಎಂದು ಬಿಬಿಎಂಪಿ ಆಯುಕ್ತರು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

ಉಲ್ಲಂಘನೆ-ದಂಡ ಮೊತ್ತ(ಮೊದಲು)-2ನೇ ಬಾರಿಗೆ
ಉಗುಳುವುದು, ಮೂತ್ರ ವಿಸರ್ಜನೆ-100 ರೂ.-200 ರೂ.
ಮೂಲದಲ್ಲೇ ಕಸ ಬೇರ್ಪಡಿಸದಿದ್ದರೆ-
ನಿವಾಸಿಗಳಿಗೆ- 100 ರೂ.-200 ರೂ.
ವಾಣಿಜ್ಯ ಕಟ್ಟಡಗಳಿಗೆ-500 ರೂ.-1,000 ರೂ.
ಉದ್ಯಾನ, ಕಟ್ಟಡ, ಸ್ಯಾನಿಟರಿ ತ್ಯಾಜ್ಯ-500 ರೂ.-1,000 ರೂ.
-ಸಾಕು ಪ್ರಾಣಿಗಳಿಂದ ಗಲೀಜು-1,00 ರೂ.-200 ರೂ