ದರ್ಶನ್ ಮತ್ತು ಎಸ್.ಎಸ್. ಆಸ್ಪತ್ರೆಗೆ ಸ್ವಯಂ ತೆರವುಗೊಳಿಸಲು 7 ದಿನಗಳ ಕಾಲಾವಕಾಶ ನೀಡಿದ ಜಿಲ್ಲಾಡಳಿತ

0
846

ಬೆಂಗಳೂರು: ದರ್ಶನ್ ಮತ್ತು ಎಸ್.ಎಸ್. ಆಸ್ಪತ್ರೆಗೆ ಸ್ವಯಂ ತೆರವುಗೊಳಿಸುವಂತೆ 7 ದಿನಗಳ ಕಾಲಾವಕಾಶ ಕೊಡುತ್ತೇವೆ. ಒತ್ತುವರಿ ಪ್ರದೇಶವನ್ನು ಸರ್ಕಾರ ವಶಕ್ಕೆ ಪಡೆಯಲಾಗುವುದು. ಮುಂದಿನ ಕ್ರಮ ಸರ್ಕಾರಕ್ಕೆ ಬಿಟ್ಟಿದ್ದು ಎಂದು ಡಿಸಿ ಶಂಕರ್ ತಿಳಿಸಿದ್ದಾರೆ.

ರಾಜಧಾನಿಯಲ್ಲಿ ರಾಜಕಾಲುವೆ ಒತ್ತುವರಿ ತೆರುವು ಕಾರ್ಯಚರಣೆ ಕೈಗೊಂಡಿರುವ ಬಿಬಿಎಂಪಿ, ಪ್ರತಿಷ್ಟಿತರು ಮತ್ತು ಪ್ರಭಾಗಳ ಒಡೆತನದ ಕಟ್ಟಡಗಳ ತಟರವಿಗೆ ಹಿಂಜರಿದಿತ್ತು. ಹಾಗಾಗಿಯೇ ನಟ ದರ್ಶನ್ ಮನೆ ಮತ್ತು ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಅವರ ಆಸ್ಪತ್ರೆಯನ್ನು ವಶಕ್ಕೆ ಪಡೆಯುವ ಹೊಣೆಯನ್ನು ಜಿಲ್ಲಾಡಳೀತ ಈ ಕಟ್ಟಡ ತೆರವು ಹೊಳಿಸಲು 7 ದಿನಗಳಕಾಲ ಕಾಲಾವಕಾಶ ನೀಡಲಾದಿದೆ ಎಂದು ಜಿಲ್ಲಾಧಿಕಾರಿ ಡಿಸಿ ಶಂಕರ್ ತಿಳಿಸಿದ್ದಾರೆ.

ದರ್ಶನ್ ಮತ್ತು ಎಸ್.ಎಸ್. ಆಸ್ಪತ್ರೆಗೆ ಸ್ವಯಂ ತೆರವುಗೊಳಿಸುವಂತೆ 7 ದಿನಗಳ ಕಾಲಾವಕಾಶ ಕೊಡುತ್ತೇವೆ. ಒತ್ತುವರಿ ಪ್ರದೇಶವನ್ನು ಸರ್ಕಾರ ವಶಕ್ಕೆ ಪಡೆಯಲಾಗುವುದು ಎಂದು ಡಿಸಿ ತಿಳಿಸಿದ್ದಾರೆ.

ನಟ ದರ್ಶನ್ ಮನೆ, ಎಸ್ಎಸ್ ಆಸ್ಪತ್ರೆಯಿಂದ ಸರ್ಕಾರಿ ಜಾಗ ಒತ್ತುವರಿಯಾಗಿರುವುದು ಖಾತ್ರಿಯಾಗಿದೆ ಎಂದು ಬೆಂಗಳೂರಿನ ಜಿಲ್ಲಾಧಿಕಾರಿ ವಿ.ಶಂಕರ್ ಸ್ಪಷ್ಟಪಡಿಸಿದ್ದಾರೆ.