ಶಿಫಾರಸ್ಸುಗಳನ್ನು ಜಾರಿಗೆ ತರದೇ ನಿರ್ಲಕ್ಷ್ಯ ವಹಿಸಿರುವ ಬಿಸಿಸಿಐಗೆ ಸುಪ್ರೀಂ ಎಚ್ಚರಿಕೆ

0
588

ನವದೆಹಲಿ: ತಮ್ಮ ಶಿಫಾರಸ್ಸುಗಳನ್ನು ಜಾರಿಗೆ ತರದೇ ನಿರ್ಲಕ್ಷ್ಯ ವಹಿಸಿರುವ ಬಿಸಿಸಿಐಗೆ ಶಿಕ್ಷೆ ವಿಧಿಸಬೇಕು ಎಂದು ಲೋಧಾ ಸಮಿತಿ ಸುಪ್ರೀಂಕೋರ್ಟ್ ಗೆ ವರದಿ ನೀಡಿದೆ.

ಬುಧವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಟಿ.ಎಸ್. ಠಾಕೂರ್, ವಿಚಾರಣೆಯನ್ನು ಅ.೬ ಕ್ಕೆ ಮುಂದೂಡಿದರು. ಇದಕ್ಕೂ ಮುನ್ನ ದಾರಿಗೆ ಬನ್ನಿ. ಇದೇ ರೀತಿ ಹಠ ಹಿಡಿದು ಕೂತರೆ ಕಠಿಣ ಆದೇಶ ನೀಡಬೇಕಾಗುತ್ತದೆ ಎಂದು ಎಚ್ಚರಿಸಿದೆ.

ಸುಪ್ರೀಂಕೋರ್ಟ್ ನಿಯೋಜಿತ ನ್ಯಾಯಮೂರ್ತಿ ಲೋಧಾ ನೇತೃತ್ವದ ಸಮಿತಿ, ಆಡಳಿತದಲ್ಲಿ ಸುಧಾರಣೆ ತರಲು ನೀಡಿರುವ ಶಿಫಾರಸು ಜಾರಿಗೆ ತರಲು ಕ್ರಮ ಕೈಗೊಳ್ಳಲಾಗಿಲ್ಲ. ಬಿಸಿಸಿಐಗೆ ಆಡಳಿತಾಧಿಕಾರಿ ನೇಮಿಸಿ ಎಂದು ಸಲಹೆ ನೀಡಿದೆ.

anuragthakur-1462953756

ಲೋಧಾ ಸಮಿತಿ ಸದಸ್ಯರೂ ಅಗಿರುವ ಠಾಕೂರ್, ಸುಪ್ರೀಂಕೋರ್ಟ್ ನಿಯೋಜಿತ ಸಮಿತಿ ಕಡೆಗಣಿಸಿ ತಾವೇ ಕಾನೂನು ರೂಪಿಸಿಕೊಳ್ಳುತ್ತೇವೆ ಎಂದು ನೀವು ಭಾವಿಸಿದ್ದರೆ ಅದುದೊಡ್ಡ ತಪ್ಪು ಎಂದು ಠಾಕೂರು ಹೇಳಿದ್ದಾರೆ.