ದಿವ್ಯಾಂಗರು ಚೇತನ ಮಕ್ಕಳ ವಸತಿ ಶಾಲೆಯೊಂದರಲ್ಲಿ 49 ಮಕ್ಕಳ ಬಳಕೆಗೆ ಒಂದೇ ಟೂತ್ ಬ್ರಷ್ ಒಂದು ಟೂತ್ ಪೇಸ್ಟ್

0
2212

ದಿವ್ಯಾಂಗರು ಚೇತನ ಮಕ್ಕಳಿಗಾಗಿ ಸರ್ಕಾರದ ಅನುದಾನದಡಿ ನಡೆಯುತ್ತಿದ್ದ ವಸತಿ ಶಾಲೆಯೊಂದರಲ್ಲಿ 49 ಮಕ್ಕಳ ಬಳಕೆಗೆ ಒಂದೇ ಟೂತ್ ಬ್ರಷ್ ನೀಡಿದ್ದ ಶಾಕಿಂಗ್ ಘಟನೆ ಬೆಳಕಿಗೆ ಬಂದಿದೆ. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ, ಹೆಚ್.ಎಲ್. ದತ್ತು ಸ್ವತಃ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ.

ಸಮಾರಂಭವೊಂದರಲ್ಲಿ ಮಾತನಾಡುವ ವೇಳೆ ವಿಷಯವನ್ನು ಪ್ರಸ್ತಾಪಿಸಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳೂ ಆಗಿದ್ದ ಹೆಚ್.ಎಲ್. ದತ್ತು, ಯಾವ ರಾಜ್ಯದಲ್ಲಿ ಘಟನೆ ನಡೆದಿದೆ ಎಂಬುದು ಮುಖ್ಯವಲ್ಲ. ತಾವು ಶಾಲೆಗೆ ಭೇಟಿ ನೀಡಿದ್ದ ವೇಳೆ 49 ಮಕ್ಕಳ ಬಳಕೆಗಾಗಿ ಒಂದು ಟೂತ್ ಬ್ರಶ್ ಹಾಗೂ ಒಂದು ಟೂತ್ ಪೇಸ್ಟ್ ಇಟ್ಟಿರುವುದು ಕಂಡು ಆಘಾತವಾಯಿತು ಎಂದಿದ್ದಾರೆ.

ಬಹುತೇಕ ಎಲ್ಲ ರಾಜ್ಯಗಳಲ್ಲಿಯೂ ಇದೇ ಪರಿಸ್ಥಿತಿ ಇದ್ದು, ಮಕ್ಕಳು ಹಲವು ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಸರ್ಕಾರಿ ಅಧಿಕಾರಿಗಳ ನಿರ್ಲಕ್ಷ್ಯ ಇದಕ್ಕೆ ಕಾರಣವಾಗಿದ್ದು, ವಿಶೇಷ ಚೇತನ ಮಕ್ಕಳ ಬಗ್ಗೆ ಕಾಳಜಿ ವಹಿಸಬೇಕಾದ ಅಗತ್ಯವಿದೆ ಎಂದಿದ್ದಾರೆ.