ದೀಪಾವಳಿ ರಜೆಗೆ ಮನೆಗೆ ಹೋಗುವುದು ದುಬಾರಿ !

0
577

ಖಾಸಗಿ ಬಸ್ ಆಪರೇಟರ್ಗಳಿಗೆ ‘ಲಕ್ಷ್ಮಿ ಕಟಾಕ್ಷ’, ಪ್ರಯಾಣಿಕರಿಗೆ ದುಪ್ಪಟ್ಟು ಬರೆ !

ಬೆಂಗಳೂರು(ಅ. 26): ಜನರ ನೋವಿಗೆ ಕಿವಿಗೊಡದ ಸರ್ಕಾರ ಒಂದು ಕಡೆ ಯಾದರೆ, ಖಾಸಗಿ ಬಸ್ ಕಂಪನಿಗಳ ದರ್ಬಾರ್ ಇನ್ನೊಂದು ಕಡೆ. ದೀಪಾವಳಿ ಹಬ್ಬ ಸಮೀಪಿಸುತ್ತಿದ್ದಂತೆ ರೈಲುಗಳಲ್ಲಿ ಪ್ರಯಾಣಿಕರು ತುಂಬಿ ತುಳುಕುತ್ತಿದ್ದಾರೆ. ರಜೆಯಲ್ಲಿ ಊರಿಗೆ, ಪ್ರವಾಸಕ್ಕೆಂದು ಹೋಗುವವರ ಸಂಖ್ಯೆ ಹೆಚ್ಚಾಗಿರುವಾಗ ಅದರ ಲಾಭವನ್ನು ಖಾಸಗಿ ಬಸ್ಸುಗಳ ನಿರ್ವಾಹಕರು ಮಾಡಿಕೊಳ್ಳುತ್ತಿದ್ದಾರೆ. ಪ್ರತಿವರ್ಷವೂ ಇದೇ ಕಥೆ.

ಬೆಂಗಳೂರಿನಲ್ಲಿ ಸಾಮಾನ್ಯವಾಗಿ ವಲಸಿಗರೇ ಜಾಸ್ತಿ. ಹಬ್ಬದ ಸಾಲು ಸಾಲು ರಜೆ ಹಿನ್ನೆಲೆಯಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ದೀಪಾವಳಿ ಹಬ್ಬದ ಪ್ರಯುಕ್ತ ನಗರದಲ್ಲಿ ಖಾಸಗಿ ಬಸ್ ಮಾಲೀಕರು ಮನಬಂದಂತೆ ವಸೂಲಿ ಮಾಡುತ್ತಿದ್ದಾರೆ. ಸಾಮಾನ್ಯ ದಿನಗಳಲ್ಲಿ ಇದ್ದ ದರಕ್ಕಿಂತ ಎರಡು ಪಟ್ಟು ದರದಲ್ಲಿ ಹೆಚ್ಚಾಗಿದೆ.

ಖಾಸಗಿ ಬಸ್ ದರಗಳ ವಿವರಣೆ ಇಲ್ಲಿದೆ ನೋಡಿ

  • ಬೆಂಗಳೂರುನಿಂದ ಹುಬ್ಬಳ್ಳಿಗೆ ನಿತ್ಯದ ದರ 450 ರೂ. ಇದ್ದಲ್ಲಿ 900ರೂ ರಿಂದ 1200ರೂ.
  • ಬೆಂಗಳೂರಿನಿಂದ ಮಂಗಳೂರಿಗೆ ನಿತ್ಯದ ದರ 550ರೂ. ಇದ್ದಲ್ಲಿ ಈಗ 1200ರೂ.
  • ಬೆಂಗಳೂರುನಿಂದ ಹೈದರಾಬಾದ್ ಗೆ ನಿತ್ಯದ ದರ 900ರೂ. ಇದ್ದಲ್ಲಿ 2200ರೂ.,
  • ಬೆಂಗಳೂರುನಿಂದ ಬೀದರ್ ಗೆ ನಿತ್ಯದ ದರ 1000ರೂ. ಇದ್ದಲ್ಲಿ 2000ರೂ.,
  • ಬೆಂಗಳೂರುನಿಂದ ಶಿವಮೊಗ್ಗಗೆ ನಿತ್ಯದ ದರ 350ರೂ.ಇದ್ದಲ್ಲಿ 700 ರಿಂದ 800ರೂ.,
  • ಬೆಂಗಳೂರುನಿಂದ ವಿಜಯಪುರಗೆ ನಿತ್ಯದ ಬೆಲೆ 650ರೂ. ಇದ್ದಲ್ಲಿ 1200ರೂ. ರಿಂದ 1400ರೂ., ಗಳನ್ನು ವಸೂಲಿ ಮಾಡುತ್ತಿದ್ದಾರೆ.

ಇದೇ ವೇಳೆ, ಈ ಬಾರಿ ಕೆಎಸ್ಸಾರ್ಟಿಸಿ ನಿಗಮವು ಹಬ್ಬದ ಪ್ರಯುಕ್ತ 1500 ವಿಶೇಷ ಬಸ್’ಗಳನ್ನ ಬಿಟ್ಟಿದ್ದಾರೆ. ಇವು ಪ್ರಯಾಣಿಕರ ನೆರವಿಗೆ ಬರಬಲ್ಲದಾ ಎಂಬುದನ್ನು ಕಾದುನೋಡಬೇಕು.