ಇಲ್ಲಿದೆ ನೋಡಿ ಅಪರೂಪದ ದುಡ್ಡಿನ ಮರ..!

0
2439

 

ಸ್ಕಾಟಿಶ್ ಹೈಲ್ಯಾಂಡ್ಸ್ ನ ಪೀಕ್ ಡಿಸ್ಟ್ರಿಕ್ಟ್ ಅರಣ್ಯದಲ್ಲಿ ದುಡ್ಡಿನ ಮರವಿದೆ. ಹಿಂದೆ ದಾರಿಹೋಕರು ತಮ್ಮ ಆಯುಷ್ಯ ಹೆಚ್ಚಲೆಂದೋ ಅಥವಾ ರೋಗ ಗುಣವಾಗಲೆಂದೋ ನಾಣ್ಯಗಳನ್ನು ಮರಗಳಿಗೆ ಜೋಡಿಸುತ್ತಿದ್ದರು. ಅನೇಕ ವರ್ಷಗಳಿಂದ ಇದೇ ಪದ್ಧತಿ ಬೆಳೆದುಬಂದ ಕಾರಣ ಪೀಕ್ ಅರಣ್ಯದಲ್ಲಿನ ಮರಗಳು ಅನೇಕ ದೇಶಗಳ ನಾಣ್ಯಗಳಿಂದ ತುಂಬಿಹೋಗಿವೆ.

ಅಗಿನಕಾಲದ ಜನರೇ ಹಾಗೆ ಮೂಢನಂಬಿಕೆಯ ದಾಸರಾಗಿದ್ದರು. ಸರಿಯಾಗಿ ಗಮನಿಸಿದರೆ ನಂಬಿಕೊಂ­ಡದ್ದು ಮತ್ತು ಮೂಢರಾಗಿ ಒಪ್ಪಿಕೊಂ­ಡದ್ದು ಬೇರೆ ಬೇರೆಯಾಗಿಯೇ ಕಾಣಿಸು­ತ್ತವೆ. ತಿಳಿದವರು ತಿಳಿಸಿದರೆ ಬಲವಾಗಿ ನಂಬಿಕೊಂಡ ನಂಬಿಕೆಯೂ ಸುಳ್ಳಾಗುತ್ತದೆ… ಆದರು ಅದರಲ್ಲಿ ಸತ್ಯತೆ ತುಂಬಿರುತ್ತದೆ ಅದಕ್ಕೆ ಉದಾಹರಣೆ ನಂಬಿಕೆ ಅಷ್ಟೆ ಅದಕ್ಕೆ ಸಾಕ್ಷಿ ಈ ದುಡ್ಡಿನ ಮರವಾಗಿದೆ.

ಈ ಮರದ ತುಂಬ 1700 ರ ಕಾಲದ ಬ್ರಿಟಿಷ್ ನಾಣ್ಯಗಳಿವೆ. ಮರದ ತುಂಬ ಎಲ್ಲೆಂದರಲ್ಲಿ ತುಂಬಿರುವ ಬ್ರಿಟಿಷ್ ನಾಣ್ಯಗಳು ಅದ್ಭುತ ಮತ್ತು ಅಪರೂಪವಾಗಿ ಕಾಣಿಸುತ್ತದೆ.

ಈಗಲೂ ಅನೇಕ ಮಂದಿ ಈ ಮರಗಳಿಗೆ ನಾಣ್ಯ ಜೋಡಿಸಲೆಂದು ದೂರ ದೂರದಿಂದ ಬರುತ್ತಾರೆ. ಹೀಗೆ ಮಾಡುವುದರಿಂದ ಜೀವನದಲ್ಲಿ ಏಳ್ಗೆಯುಂಟಾಗುತ್ತದೆ ಎಂಬ ನಂಬಿಕೆ ಇದೆ.