ದೇವರಿಗೆ ಹುಷಾರಿಲ್ಲದೆ ವಿಶ್ರಾಂತಿ, ಭಕ್ತರಿಗೆ ಈಗ ದರ್ಶನವಿಲ್ಲ..!

0
1108

ಉದಯಪುರ: ಓರಿಸ್ಸಾದ ಪ್ರಸಿದ್ಧ ಪುರಿ ಜಗನ್ನಾಥ ದೇವಾಲಯದ ಸೆಕ್ಟರ್-7 ರಲ್ಲಿರುವ ದ್ವಾರವನ್ನು ದೇವರಿಗೆ ಹುಷಾರಿಲ್ಲದ ಕಾರಣ ಮುಚ್ಚಲಾಗಿದೆ. ಭಕ್ತರಿಗೆ ದೇವರ ದರ್ಶನವಿಲ್ಲ, ದೇವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ದೇವಸ್ಥಾನದ ಮುಖ್ಯ ಅರ್ಚಕ ಹೇಳುತ್ತಿದ್ದಾರೆ.

ಹೌದು, ಪುರಿಯಲ್ಲಿ ಇಂತಹ ಸಂಪ್ರದಾಯವೊಂದು ಜಾರಿಯಲ್ಲಿದೆ. ಜಗನ್ನಾಥನ ದರ್ಶನಕ್ಕೆ ಹರಿದು ಬರುವ ಜನಸಾಗರ ನಿಯಂತ್ರಣ ಎಲ್ಲರಿಂದಲೂ ಕಷ್ಟಸಾಧ್ಯ. ಮನುಜರ ಕಷ್ಟ, ನೋವು ನಿವಾರಣೆ ಮಾಡುವ ಜಗನ್ನಾಥನಿಗೆ ಪ್ರತಿವರ್ಷ ಜೂನ್ ಮೂರನೇ ಭಾನುವಾರದಂದು ‘ಜೇಷ್ಠ ಪೂರ್ಣಿಮೆ’ ದಿನ 35 ಚಿನ್ನದ ಕುಡಿಕೆಗಳಲ್ಲಿ ಮಜ್ಜನ ಮಾಡಿಸಿ ಸ್ವರ್ಣ ಸಿಂಹಾಸನದ ಮೇಲೆ ಪೀಠಾರೋಹಣ ಮಾಡಿಸಿ ಮಾವಿನ ಹಣ್ಣಿನ ರಸದಿಂದ ಅಭಿಷೇಕ ಮಾಡಿಸಲಾಗುತ್ತದೆ. ಇದನ್ನು ಕುಡಿದ ದೇವರು ಕೆಲ ದಿನಗಳವರೆಗೆ ಹುಷಾರು ತಪ್ಪುತ್ತಾರೆ ಈ ಸಮಯದಲ್ಲಿ ದೇವರು ಯಾರಿಗೂ ದರ್ಶನ ನೀಡದೆ ಆಯುರ್ವೆದ ಚಿಕಿತ್ಸೆ ಪಡೆಯುತ್ತಾರೆ. ಹೀಗಾಗಿ ಭಕ್ತರಿಗೆ ದೇವರ ದರ್ಶನವಿಲ್ಲ ಎಂಬ ನಂಬಿಕೆ ಇದೆ.

ಜೇಷ್ಠ ಸ್ನಾನದ ನಂತರ ಚಿಕಿತ್ಸೆ ಪಡೆದು ಗುಣಮುಖನಾಗುವ ಜಗನ್ನಾಥ ಭಕ್ತರಿಗೆ ಬಹಿರಂಗವಾಗಿ ದರ್ಶನ ನೀಡುತ್ತಾನೆ. ಇದಕ್ಕಾಗಿಯೇ ಜುಲೈ 5 ರಂದು ಮಹಾ ರಥೋತ್ಸವ ಜರುಗಿಸಲಾಗುವುದು.

Source: vijayavani