ದೊಡ್ಮನೆ ದರ್ಬಾರ್…

0
1512

ಮುಂದಿನ ಶುಕ್ರವಾರ ಬಿಡುಗಡೆ ಆಗುವ ‘ದೊಡ್ಮನೆ ಹುಡ್ಗ’ ಚಿತ್ರ ಈಗಾಗಲೇ ‘ಬುಕ್ ಮೈ ಶೋ’ ವೆಬ್ ತಾಣದಲ್ಲಿ ಟ್ರೆಂಡಿಂಗ್ ಆಗಿದೆ ಅಂದ್ರೆ ನೀವೇ ಊಹಿಸಿಕೊಳ್ಳಿ, ಚಿತ್ರಕ್ಕೆ ಕ್ರೇಜ್ ಎಷ್ಟಿದೆ ಅಂತ. ಈಗಾಗಲೇ ‘ದೊಡ್ಮನೆ ಹುಡ್ಗ’ ಚಿತ್ರದ ಫಸ್ಟ್ ಡೇ, ಫಸ್ಟ್ ಶೋ ಕಣ್ತುಂಬಿಕೊಳ್ಳಲು ಪುನೀತ್ ರಾಜ್ ಕುಮಾರ್ ಅಭಿಮಾನಿಗಳಂತೂ ತುದಿಗಾಲಲ್ಲಿ ನಿಂತಿದ್ದಾರೆ. ಅಭಿಮಾನಿಗಳ ಒತ್ತಾಯದ ಮೇರೆಗೆ ವಾರಕ್ಕೂ ಮೊದಲೇ ಬುಕ್ಕಿಂಗ್ ಓಪನ್ ಮಾಡಲಾಗಿದೆ.

rajkumar

ಭಾರಿ ನಿರೀಕ್ಷೆ ಹುಟ್ಟು ಹಾಕಿರುವ ಈ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಅವರು ಬಿರಿಯಾನಿ ಮಾರುವ ಹುಡುಗ ಆಗಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಟೈಟಲ್ ‘ದೊಡ್ಮನೆ ಹುಡ್ಗ’ ಅಂತಿದೆ, ಆದ್ರೆ ಪುನೀತ್ ಅವರು ರಸ್ತೆ ಬದಿಯಲ್ಲಿ ತಳ್ಳು ಗಾಡಿ ಅಂಗಡಿ ಹಾಕಿ, ಬಿರಿಯಾನಿ ಮಾರ್ತರಂತೆ, ಏನಿದು?, ದುನಿಯಾ ಸೂರಿ ಅವರ ಮರ್ಮ ಅಂತ ಹಲವರು ತಲೆ ಚಚ್ಚಿಕೊಳ್ಳುತ್ತಿದ್ದಾರೆ.

untitled-1

ಅಚ್ಚರಿ ಅಂದ್ರೆ ಇದೇ ನೋಡಿ…’ಮುಂಗಾರು ಮಳೆ-2′ ಚಿತ್ರಕ್ಕೆ 68% ಲೈಕ್ಸ್ ಇದ್ರೆ, ಇನ್ನೂ ಬಿಡುಗಡೆ ಆಗದ ‘ದೊಡ್ಮನೆ ಹುಡ್ಗ’ ಚಿತ್ರ ‘ಬುಕ್ ಮೈ ಶೋ’ನಲ್ಲಿ 79% ಲೈಕ್ಸ್ ಪಡೆದುಕೊಂಡಿದೆ.ಬಾಲಿವುಡ್ ನ ‘ಪಿಂಕ್’, ಕನ್ನಡದ ‘ಮುಂಗಾರು ಮಳೆ-2’ ಹಾಗೂ ‘ನೀರ್ ದೋಸೆ’ ಚಿತ್ರಗಳ ಜೊತೆ ‘ಬುಕ್ ಮೈ ಶೋ’ ವೆಬ್ ತಾಣದ ಟಾಪ್ 10 ಚಿತ್ರಗಳ ಪಟ್ಟಿಗೆ ‘ದೊಡ್ಮನೆ ಹುಡ್ಗ’ ಲಗ್ಗೆ ಇಟ್ಟಿದೆ.

picsart_1470822156669

‘ಬುಕ್ ಮೈ ಶೋ’ ವೆಬ್ ತಾಣದಲ್ಲಿ ‘ದೊಡ್ಮನೆ ಹುಡ್ಗ’ ಚಿತ್ರದ ಟಿಕೆಟ್ ಬುಕ್ಕಿಂಗ್ ಓಪನ್ ಆಗಿದೆ. ಬೆಂಗಳೂರಿನ ತಾವರೆಕೆರೆ ಬಳಿಯ ಬಾಲಾಜಿ ಚಿತ್ರಮಂದಿರದಲ್ಲಿನ ಸೆಪ್ಟೆಂಬರ್ 30 ರ ಬೆಳಗ್ಗೆ 6 ಗಂಟೆ ಶೋ ಬಹುತೇಕ ಫುಲ್ ಆಗಿದೆ.

ಇನ್ನು ಈ ಚಿತ್ರ ನೋಡೋಕೆ ಹೋಗೋರಿಗೆ ಚಿತ್ರಮಂದಿರದಲ್ಲಿ ಒಂದು ಸರ್ ಪ್ರೈಸ್ ಕಾದಿರುತ್ತೆ. ಹೌದು ‘ದೊಡ್ಮನೆ ಹುಡ್ಗ’ ನೋಡಲು ಹೋಗುವ ಸಿನಿ ಪ್ರಿಯರಿಗೆ ‘ರಾಜಕುಮಾರ’ನ ದರ್ಶನ ಕೂಡ ಆಗಲಿದೆ. ಒಂದು ಕೊಂಡರೆ ಇನ್ನೊಂದು ಉಚಿತ ಎನ್ನುವಂತೆ ‘ದೊಡ್ಮನೆ ಹುಡ್ಗ’ ಚಿತ್ರದ ಪ್ರದರ್ಶನ ಸಂದರ್ಭದಲ್ಲಿ ‘ರಾಜಕುಮಾರ’ ಚಿತ್ರದ ಫಸ್ಟ್ ಲುಕ್ ಟೀಸರ್ ಬಿಡುಗಡೆ

bcsuddi-com_-1-858x350_c

ಪುನೀತ್ ರಾಜ್ ಕುಮಾರ್, ರಾಧಿಕಾ ಪಂಡಿತ್, ಅಂಬರೀಶ್, ಸುಮಲತಾ, ಭಾರತಿ ವಿಷ್ಣುವರ್ಧನ್, ರವಿಶಂಕರ್, ಚಿಕ್ಕಣ್ಣ ಸೇರಿದಂತೆ ದೊಡ್ಡ ತಾರಾಬಳಗ ಇರುವ ‘ದೊಡ್ಮನೆ ಹುಡ್ಗ’ ಚಿತ್ರಕ್ಕೆ ದುನಿಯಾ ಸೂರಿ ಆಕ್ಷನ್ ಕಟ್ ಹೇಳಿದ್ದಾರೆ. ವಿ.ಹರಿಕೃಷ್ಣ ಸಂಗೀತ ಚಿತ್ರಕ್ಕಿದೆ.ನೀವು ಅಪ್ಪಟ ಅಪ್ಪು ಅಭಿಮಾನಿಯಾಗಿದ್ದು, ‘ದೊಡ್ಮನೆ ಹುಡ್ಗ’ ಚಿತ್ರವನ್ನ ಮೊದಲ ದಿನವೇ ನೋಡಬೇಕೆನ್ನುವ ಕುತೂಹಲ ನಿಮಗೆ ಇದ್ದರೆ, ಈಗಲೇ ನಿಮ್ಮ ಸೀಟ್ ಕಾಯ್ದಿರಿಸಿ…ತಡ ಮಾಡಿದ್ರೆ, ಎಲ್ಲೂ ಟಿಕೆಟ್ ಸಿಕ್ಕಲ್ಲ.