‘ದೊಡ್ಮನೆ ಹುಡ್ಗ’ನ ಹವಾ ಹೇಗಿದೆ ಗೊತ್ತಾ?

0
972

ಗಾಂಧಿನಗರದ ಲೆಕ್ಕಚಾರವೇ ಬದಲಾಗಿ ಹೋಗಿದೆ. ಹಿಂದೆ ಶತದಿನ ಪೂರೈಸಿದರೂ ನಿರ್ಮಾಪಕರಿಗೆ ಲಾಭ ಬರುವುದೇ ಅನುಮಾನವಾಗಿತ್ತು. ಈಗ ವಾರದೊಳಗೆ ಲಾಭ ಮಾಡಿಕೊ ಳ್ಳುವ ಆಲೋಚನೆ ನಡೆದಿದೆ.
ಇದೀಗ ಬಿಡುಗಡೆಗೆ ಮುನ್ನವೇ ಭಾರೀ ಸದ್ದು ಮಾಡುತ್ತಿರುವ ಪುನೀತ್ ರಾಜ್ ಕುಮಾರ್ ಮತ್ತು ಸೂರಿ ಅವರ ಹ್ಯಾಟ್ರಿಕ್ ಕಾಂಬಿನೇಷನ್ ನಲ್ಲಿ ಮೂಡಿ ಬರುತ್ತಿರುವ ದೊಡ್ಮನೆ ಹುಡ್ಗ ಚಿತ್ರ ಹವಾ ಸಿಕ್ಕಾಪಟ್ಟೆ ಇದೆ.

ಅಭಿಮಾನಿಗಳನ್ಮು ರಂಜಿಸುವ ಉದ್ದೇಶದಿಂದಲೇ ಈ ಚಿತ್ರ ನಿರ್ಮಿಸಲಾಗಿದೆ ಎಂದು ಹೇಳಿರುವುದು, ಹುಬ್ಬಳ್ಳಿಯಲ್ಲಿ ಹಾಡು ಚಿತ್ರೀಕರಿಸಿದ್ದು ಹಾಗೂ ಒಬ್ಬೊಬ್ಬ ಗಣ್ಯರಿಂದ ಹಾಡು ಬಿಡುಗಡೆ ಮಾಡಿಸಿದ ಗಿಮಿಕ್ ವರ್ಕೌಟ್ ಆಗಿದೆ.

ಇದೆಲ್ಲದರ ಪ್ರಭಾವದಿಂದಲೋ ಏನೋ ಬಿಡುಗಡೆಗೆ ಮುನ್ನವೇ ದೊಡ್ಮನೆ ಹುಡ್ಗ ಲಾಭ ಮಾಡಿಕೊಂಡಿದೆ ಎಂದು ಗಾಂಧಿನಗರ ಮಾತಾಡುತ್ತಿದೆ.
ಬಹುತಾರಾಗದ ಈ ಚಿತ್ರ ದೇಶ-ವಿದೇಶ ಸೇರದಂತೆ ಸುಮಾರು 500 ಥಿಯೇಟರ್ ಗಳಲ್ಲಿ ಏಕಕಾಲದಲ್ಲಿ ಚಿತ್ರ ತೆರೆ ಕಾಣುತ್ತಿದೆ. ಇಷ್ಟೂ ಥಿಯೇಟರ್ ಗಳಲ್ಲಿ ಮುಂಗಡ ಬುಕಿಂಗ್ ನಡೆಯುತ್ತಿದೆ.

ಚಿತ್ರತಂಡದ ಪ್ರಕಾರವೇ ಈಗಾಗಲೇ ಮೊದಲ ಮೂರೂ ದಿನದ ಶೋನ ಎಲ್ಲಾ ಟಿಕೆಟ್ ಗಳು ಮಾರಾಟವಾಗಿವೆ. ಒಂದು ವೇಳೆ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾದರೆ ಕನಿಷ್ಠ ಎರಡು ವಾರ ಹೌಸ್ ಫುಲ್ ಆಗಲಿದೆ.
ಮೊದಲ ಮೂರು ದಿನದ ಆದಾಯದಲ್ಲೇ ಚಿತ್ರದ ಬಂಡ ವಾಳ ವಾಪಸ್ ಆಗುವ ಜೊತೆ ಲಾಭವೂ ಆಗಿದೆ. ಇನ್ನು ಎಷ್ಟು ದಿನ ಓಡಿದೆರೂ ಬೋನಸ್ ಅಷ್ಠೆ ಎನ್ನಲಾಗಿದೆ.
ದೀರ್ಘ ಸಮಯದ ನಂತರ ಈ ಚಿತ್ರ ತೆರೆ ಕಾಣುತ್ತಿದ್ದು, ರೆಬಲ್ ಸ್ಟಾರ್ ಅಂಬರೀಷ್ ಮತ್ತು ಪುನೀತ್ ಮೊದಲ ಬಾರಿ ತೆರೆಯ ಮೇಲೆ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅಲ್ಲದೇ ರಾಧಿಕಾ ಪಂಡಿತ್, ಸುಮಲತಾ, ಭಾರತೀ ವಿಷ್ಣುವರ್ಧನ್, ರವಿಶಂಕರ್ ಮುಂತಾದ ಹಿರಿಯರ ದೊಡ್ಡ ತಾರಾಗಣವೇ ಈ ಚಿತ್ರದಲ್ಲಿದೆ.