ದ್ರಾಕ್ಷಿ ತಿನ್ನಲಷ್ಟೆ ರುಚಿಯಲ್ಲ, ಆರೋಗ್ಯಕಾರಿ ಗುಣಗಳನ್ನು ಹೊಂದಿದೆ.

0
1456

ಬಗೆಬಗೆ ದ್ರಾಕ್ಷಿ ಬಾಯಲ್ಲಿ ನೀರೂರಿಸುವಂತಿವೆ. ಋತುಮಾನಕ್ಕೆ ಅನುಗುಣವಾಗಿ ಸಿಗುವ ಹಸಿರು, ಕಪ್ಪು, ಕೆಂಪು ದ್ರಾಕ್ಷಿ  ಜೊತೆಗೇ ಯಾವಾಗಲೂ ಸಿಗುವುದು ಒಣದ್ರಾಕ್ಷಿ. ಇವೆಲ್ಲ ಬಾಯಿಗೆ ರುಚಿ ನೀಡುವುದು ಮಾತ್ರವಲ್ಲದೇ ಆರೋಗ್ಯವರ್ಧಕವೂ ಆಗಿವೆ.

* ಒಂದು ಬಟ್ಟಲು ಕಪ್ಪು ದ್ರಾಕ್ಷಿ ರಸದೊಂದಿಗೆ ಒಂದು ಚಮಚ ಜೇನುತುಪ್ಪ ಸೇರಿಸಿ ದಿನವೂ ಕುಡಿಯುತ್ತಿದ್ದರೆ ರಕ್ತವೃದ್ಧಿಯಾಗುವುದು.

* ಕಪ್ಪುದ್ರಾಕ್ಷಿಯನ್ನು ಸೇವಿಸುವುದರಿಂದ ಹುಳಿತೇಗು, ಅಜೀರ್ಣ, ಹೊಟ್ಟೆ ಉಬ್ಬರ ಸಮಸ್ಯೆ ಹೋಗುವುದು.

* ಕಪ್ಪು ದ್ರಾಕ್ಷಿಯಲ್ಲಿರುವ ವಿಟಮಿನ್, ಬಿ ಕಾಂಪ್ಲೆಕ್ಸ್, ತಾಮ್ರಾಂಶ, ಕಬ್ಬಿಣಾಂಶ ಮತ್ತು ಸೆಲೆನಿಯಂ ಅಂಶಗಳು ರೋಗನಿರೋಧಕ ಶಕ್ತಿ ಹೆಚ್ಚಿಸಿ ರಕ್ತಕ್ಕೆ ಕಬ್ಬಿಣಾಂಶ ನೀಡಿ ದೇಹಕ್ಕೆ ಯಾವುದೇ ಸೋಂಕು ತಗುಲದಂತೆ ತಡೆಯುತ್ತದೆ.

* ಈ ದ್ರಾಕ್ಷಿ ರಸದಲ್ಲಿ ಆ್ಯಂಟಿಯಾಕ್ಸಿಡೆಂಟ್‌ ಗುಣವಿದೆ. ಇದು ತ್ವಚೆಯಲ್ಲಿರುವ ಕಲ್ಮಶಗಳನ್ನು ಹೊರಹಾಕಲು ಸಹಕಾರಿಯಾಗಿದೆ.

* ಈ ಹಣ್ಣಿನಲ್ಲಿನ ನೀಲಿ ಅಂಶ ದೇಹದಲ್ಲಿನ ಅನೇಕ ಬ್ಯಾಕ್ಟೀರಿಯಾಗಳ ಜೊತೆ ಹೋರಾಡಿ ದೇಹವನ್ನು ಆರೋಗ್ಯವಾಗಿಡುವುದಷ್ಟೇ ಅಲ್ಲ, ಬೇಗನೆ ಚರ್ಮಕ್ಕೆ ಸುಕ್ಕು ಬರುವುದನ್ನೂ ತಡೆಗಟ್ಟುತ್ತದೆ.

* ಮಧುಮೇಹ ರೋಗಿಗಳು ಕಪ್ಪುದ್ರಾಕ್ಷಿ ಹಣ್ಣಿನ ರಸ ಕುಡಿದರೆ ನರಗಳಲ್ಲಿ ಹೊಸ ಚೈತನ್ಯ ಉಂಟಾಗಿ ಸುಸ್ತು, ಆಲಸ್ಯ ದೂರವಾಗುತ್ತವೆ.

* ಈ ದ್ರಾಕ್ಷಿ ರಕ್ತದಲ್ಲಿನ ಕೊಬ್ಬಿನ ಅಂಶವನ್ನು ಕಡಿಮೆಗೊಳಿಸಿ ಗ್ಲೂಕೋಸ್ ಮತ್ತು ಇನ್ಸುಲಿನ್ ಅಂಶವನ್ನು ನಿಯಂತ್ರಿಸುತ್ತದೆ. ಆದ್ದರಿಂದ ಇದು ಹೃದಯಕ್ಕೆ ಅತಿ ಅವಶ್ಯಕ.

* ಕಪ್ಪು ದ್ರಾಕ್ಷಿ ಸೇವನೆಯಿಂದ ದೇಹದ ಬೊಜ್ಜು ಕರಗಿಸಿ ಉತ್ತಮ ಆರೋಗ್ಯ ಹೊಂದಲು ಸಾಧ್ಯ ಎಂದು ಮಿಚಿಗನ್ ವಿಶ್ವವಿದ್ಯಾಲಯ ನಡೆಸಿರುವ ಅಧ್ಯಯನದಿಂದ ದೃಢಪಟ್ಟಿದೆ.

* ಕಪ್ಪುದ್ರಾಕ್ಷಿ ಮೂತ್ರ ಸಂಬಂಧಿ ಸೋಂಕುಗಳನ್ನು ತಡೆಗಟ್ಟಿ, ಮೂತ್ರ ಸೋಂಕನ್ನು ಉಂಟು ಮಾಡುವ ಬ್ಯಾಕ್ಟೀರಿಯಾ ವಿರುದ್ಧ ಹೋರಾಡುತ್ತದೆ. ಇದಲ್ಲದೆ ಸೋಂಕಿನಿಂದ ಉಂಟಾಗುವ ತುರಿಕೆ, ಉರಿಮೂತ್ರವನ್ನೂ ನಿಗ್ರಹಿಸುವಲ್ಲಿ ಪರಿಣಾಮಕಾರಿ.

* ದ್ರಾಕ್ಷಿ ಮಾಸ್ಕ್‌ ಮುಖಕ್ಕೆ ಹಾಕಿದರೆ ಇದು ಮುಖವನ್ನು ಸ್ವಚ್ಛ ಮತ್ತು ಸುಂದರವನ್ನಾಗಿಸುತ್ತದೆ.

* ಕಣ್ಣುಗಳ ಕೆಳಗೆ ಕಪ್ಪು ಕಲೆ ಇದ್ದರೆ ಬೀಜವಿಲ್ಲದ ದ್ರಾಕ್ಷಿಯನ್ನು ಕತ್ತರಿಸಿ ಕಣ್ಣಿನ ಸುತ್ತ ಸವರಿದರೆ ಉತ್ತಮ ಫಲಿತಾಂಶ ದೊರಕುತ್ತದೆ.