ಒಣದ್ರಾಕ್ಷಿ

0
1941

ಒಣಹಣ್ಣುಗಳ ಪೈಕಿ ಒಂದಾಗಿರುವ ಒಣದ್ರಾಕ್ಷಿ ಕ್ಯಾಲ್ಷಿಯಂ ಮತ್ತು ವಿಟಮಿನ್ ಸಿ ಆಗರ ಎಂದರೆ ತಪ್ಪಾಗಲಾರದು.

100 ಗ್ರಾಂ ಒಣದ್ರಾಕ್ಷಿಯಲ್ಲಿ ಕನಿಷ್ಟ 57 ಮಿ.ಗ್ರಾಂ ವಿಟಮಿನ್ ಸಿ, 50 ಮಿ.ಗ್ರಾಂ ಕ್ಯಾಲ್ಷಿಯಂ ಲಭ್ಯ. ಅಷ್ಟೇ ಅಲ್ಲ, 12 ಮಿ.ಗ್ರಾಂ ಕಬ್ಬಿಣ, 20 ಮಿ.ಗ್ರಾಂ ಫಾಸ್ಪರಸ್, 10.9 ಮಿ.ಗ್ರಾಂ ಕಾರ್ಬೋಹೈಡ್ರೇಟ್ ಇದೆ. ಜೊತೆಗೆ ಸಸಾರಜನಕ, ಮೇದಸ್ಸು, ಖನಿಜಾಂಶ, ಥಿಯಾಮಿನ್, ರಿಬೋಫ್ಲಾವಿನ್ ಮತ್ತು ನಿಯಾಸಿನ್‍ಗಳೂ ಇದರಲ್ಲಿವೆ. ಒಣದ್ರಾಕ್ಷಿಯಿಂದ ಪಾನಕ ಮತ್ತು ಪಾಯಸ ತಯಾರಿಸಿ ತಿನ್ನಬಹುದು. ಅಥವಾ ಪ್ರತಿದಿನ ಊಟದೊಂದಿಗೆ ಐದಾರು ಒಣದ್ರಾಕ್ಷಿಗಳನ್ನು ತಿನ್ನುವುದರಿಂದ ಸೇವಿಸುವ ಆಹಾರ ರುಚಿಕರ ಮತ್ತು ಪುಷ್ಟಿಕರವಾಗುವುದು.

s-img-2016-07-25-1469453712-drygrapes

ಪ್ರಯೋಜನಗಳು

  • ಒಣದ್ರಾಕ್ಷಿಯನ್ನು ನಿಯಮಿತವಾಗಿ ಸೇವಿಸುತ್ತ ಬಂದಲ್ಲಿ ಮೂಳೆಗಳು ದೃಢವಾಗುತ್ತವೆ.
  • ಐದಾರ ಒಣ ದ್ರಾಕ್ಷಿಗಳನ್ನು ಸ್ವಲ್ಪ ನೀರಿನಲ್ಲಿ ಕಿವುಚಿ ಸೇವಿಸಿದರೆ ಅಜೀರ್ಣ ದೂರವಾಗುವುದು.
  • ಕ್ಷಯರೋಗಿಗಳು ನಿಯಮಿತವಾಗಿ ಒಣದ್ರಾಕ್ಷಿ ತಿನ್ನುತ್ತ ಬಂದಲ್ಲಿ ರಕ್ತ ಸಂಚಯವಾಗುವುದು.
  • ಒಣದ್ರಾಕ್ಷಿಯನ್ನು ಸೇವಿಸುವುದರಿಂದ ಶರೀರದಲ್ಲಿ ಲವಲವಿಕೆ ಮೂಡುತ್ತದೆ.
  • ಜೊತೆಗೆ ಮಲಬದ್ಧತೆ ದೂರವಾಗುತ್ತದೆ.
  • ಒಣ ದ್ರಾಕ್ಷಿಯನ್ನು ನಿತ್ಯವೂ ಸೇವಿಸುತ್ತ ಬಂದಲ್ಲಿ ರಕ್ತ ವೃದ್ಧಿಯಾಗುವುದರ ಜೊತೆಗೆ ಶರೀರದಲ್ಲಿ ರೋಗ ನಿರೋಧಕ ಶಕ್ತಿಯೂ ಹೆಚ್ಚುವುದು.
  • ರಾತ್ರಿ ಎಂಟರಿಂದ ಹತ್ತು ಒಣದ್ರಾಕ್ಷಿಗಳನ್ನು ನೀರಿನಲ್ಲಿ ನೆನೆಸಿ ಬೆಳಿಗ್ಗೆ ದ್ರಾಕ್ಷಿಗಳನ್ನು ಕಿವುಚಿ ಸೋಸಿ ಬಂದ ನೀರನ್ನು ಕುಡಿಯುತ್ತಿದ್ದರೆ ಹಳೆಯ ಚರ್ಮ ರೋಗಗಳು ಬಹುಬೇಗ ಗುಣ ಹೊಂದುವವು.
  • ಒಣದ್ರಾಕ್ಷಿಯನ್ನು ರಾತ್ರಿ ಹಾಲಿನಲ್ಲಿ ನೆನೆಸಿ ಬೆಳಿಗ್ಗೆ ಹಾಲಿನ ಸಮೇತ ತಿಂದರೆ ಶರೀರಕ್ಕೆ ಹೆಚ್ಚಿನ ಪೌಷ್ಟಿಕಾಂಶಗಳು ಲಭ್ಯ.