ನನ್ನನ್ನು ನಿಮ್ಮ ಮಗನೆಂದು ಭಾವಿಸಿ…

0
4199

FB_IMG_1429697337540

ಈ ಮಾತನ್ನು ಹೇಳಿದವರು ಬೇರೆ ಯಾರು ಅಲ್ಲ ನಮ್ಮ ಕರುನಾಡಿನ ಕಲ್ಪತರು ನಾಡು ತುಮಕೂರಿನ ಐಎಎಸ್ ಅಧಿಕಾರಿ ಕೆ.ಪಿ ಮೋಹನ್ ರಾಜ್… ಡಿ.ಕೆ.ರವಿ ಅವರ ತಾಯಿ ಗೌರಮ್ಮ ಅವರ ನೋವಿಗೆ ಸ್ಪಂದಿಸುವ ಮೂಲಕ ತುಮಕೂರು ಜಿಲ್ಲಾಧಿಕಾರಿ ಕೆ.ಪಿ.ಮೋಹನ್ ರಾಜ್ ಮಾನವೀಯತೆ ಮೆರೆದು ಮಗನಂತೆ ಅವರ ಕಾಳಜಿ ಮಾಡಿದ್ದಾರೆ.

ಕಡು ಬಡತನದಲ್ಲಿ ಹುಟ್ಟಿದ ಡಿ ಕೆ ರವಿ ಅವರು, ಕಡು ಬಡತನದಲ್ಲೂ ಚೆನ್ನಾಗಿ ಓದಿ ಉನ್ನತ ಮಟ್ಟಕ್ಕೆ ಏರಲು ಪಟ್ಟ ಕಷ್ಟ ಅಷ್ಟ್ ಈಸ್ಟ್ ಅಲ್ಲ… ಅವರ ಅಪ್ಪ, ಅಮ್ಮ, ಹಾಗೂ ಅಣ್ಣ ಅವರ ಜೀವನವನ್ನೇ ಸವೆಸಿ ಇವರ ಐಎಎಸ್ ಎಂಬ ಪುಟ್ಟ ಗಿಡಕ್ಕೆ ನೀರೆರೆದು ಬೆಳೆಸಿದರು… ಡಿ ಕೆ ರವಿ ಅವರು ಸಹಾ ಉತ್ತಮವಾಗಿ ಅವರ ಗುರಿ ಸಾದಿಸಿ, ಜನ ಸೇವೆಯೇ ಜನಾರ್ದನ ಜನ ಎಂದು ನಂಬಿ ದುಡಿಯುತ್ತಿದ್ದವರು… ನಮ್ಮ ರಾಜ್ಯದ ಹಲವಾರು ಭ್ರಷ್ಟಾಚಾರ ಮತ್ತು ಹಗರಣ ಬಯಲಿಗೆಳೆದು ಯಾರಿಗೂ ತಲೆಬಾಗದೆ ತಮ್ಮ ಅದಿಕಾರವನ್ನು ಸಮರ್ಪಕವಾಗಿ ಉಪಯೋಗಿಸಿ ಕೋಲಾರದ ಜನತೆ ಮಾಡಿದ ಕಾರ್ಯಗಳನ್ನು ಆ ಜನತೆ ಈಗಲೂ ನೆನೆಯುತ್ತಾರೆ… ಯಾವುದೊ ಕಾಣದ ಕೈಗಳ ಹೊಡೆತಕ್ಕೆ ಸಿಕ್ಕಿ ತಮ್ಮ ಜೀವನವನ್ನೇ ಬಲಿ ಕೊಟ್ಟ ಆದರ್ಶ ವ್ಯಕ್ತಿತ್ವ… ಆದರೆ ಅವರನ್ನು ಕಳೆದುಕೊಂಡ ಈ ಬಡ ಕುಟುಂಬ ಇಂದು ಅವರ ಕಾರ್ಯ ಮಾಡಲು ಸಹಾ ಮಾಡಲು ಆಗದೆ ಕಣ್ಣೀರು ಹಾಕುತಿದ್ದಾರೆ ಅವರ ತಾಯಿ, ಅವರ ಹೆಂಡತಿ ನನಗೂ ಇವರಿಗೂ ಯಾವುದೇ ಸಂಬಂಧ ಇಲ್ಲದೇ ಇರುವ ರೀತಿ ದೇಶ ಬಿಟ್ಟು ಹೋಗಿ ಬದುಕುತ್ತಿದ್ದಾರೆ… ಇತ್ತ ಇವರ ಗೋಳನ್ನು ಕೇಳುವವರು ಯಾರು, ಅವರ ಕಾರ್ಯಕ್ಕೆ ತಂದ ಶಾಮಿಯಾನದ ದುಡ್ಡು ಬರಿಸುವ ಶಕ್ತಿಯು ಅವರಿಗಿಲ್ಲ… ಇದು ನಮ್ಮ ರಾಜ್ಯದ ನಿಷ್ಠಾವಂತ ಅಧಿಕಾರಿ ಮನೆ ಪರಿಸ್ಥಿತಿ.

K.P.MOHAN RAJ
ಡಿಸಿ ಮೋಹನ್‍ ರಾಜ್

ಶಾಮಿಯಾನದವರ ಕಾಟವನ್ನು ತಾಳದೆ ತುಮಕೂರು ಜಿಲ್ಲಾಧಿಕಾರಿಗಳ ಕಚೇರಿಗೆ ಬಂದ ಗೌರಮ್ಮನವರು ತಮ್ಮ ಕಷ್ಟ ಹೇಳಿಕೊಂಡಾಗ ಅದಕ್ಕೆ ಕೂಡಲೇ ಸ್ಪಂದಿಸಿದ ಜಿಲ್ಲಾಧಿಕಾರಿ ಮೋಹನ್ ರಾಜ್ ಅವರು ನೆರವಿನ ಸಹಾಯ ಹಸ್ತ ಚಾಚಿದ್ದಾರೆ. ಡಿ.ಕೆ.ರವಿ ಅವರು ಸಾವನ್ನಪ್ಪಿದಾಗ ದೊಡ್ಡಕೊಪ್ಪಲಿನಲ್ಲಿ ತಾಲೂಕು ಆಡಳಿತ ಹಾಕಿದ್ದ ಶಾಮಿಯಾನದ ಹಣವನ್ನು ಸರ್ಕಾರದಿಂದ ಮಾಲೀಕರಿಗೆ ಪಾವತಿಸದ ಹಿನ್ನೆಲೆಯಲ್ಲಿ ಮಾಲೀಕ ಗೌರಮ್ಮ ಅವರನ್ನು ಪದೇ ಪದೇ ಪೀಡಿಸುತ್ತಿದ್ದರು.

ಈ ವಿಚಾರವನ್ನು ಜಿಲ್ಲಾಧಿಕಾರಿಗಳಿಗೆ ತಿಳಿಸಲು ಕಚೇರಿಗೆ ಬಂದಿದ್ದ ಗೌರಮ್ಮ ಅವರನ್ನು ಭೇಟಿ ಮಾಡಿದ ಅವರು, ಊಟ ಮಾಡಿದ್ದೀರ ಎಂದು ವಿಚಾರಿಸಿದರಲ್ಲದೆ, ನನ್ನನ್ನು ನಿಮ್ಮ ಮನೆ ಮಗನಂತೆ ತಿಳಿದುಕೊಳ್ಳಿ ಎಂದು ಸಾಂತ್ವನ ಹೇಳಿ ಅವರ ಕಷ್ಟ ವಿಚಾರಿಸಿದರು.

ತಾಲೂಕು ಆಡಳಿತದ ನಿರ್ಲಕ್ಷ್ಯದ ಬಗ್ಗೆ ಅರಿತ ಅವರು ಕೂಡಲೇ ದಂಡಾಧಿಕಾರಿಗಳಿಗೆ ದೂರವಾಣಿ ಮೂಲಕ ಹಣ ಪಾವತಿಸುವ ಸಂಬಂಧ ಸೂಚನೆ ನೀಡಿದರು. ನಂತರ ತಮ್ಮ ಮನೆಗೆ ಬರುವಂತೆ ಗೌರಮ್ಮನವರನ್ನು ಆಹ್ವಾನಿಸಿದರಲ್ಲದೆ, ಎರಡು ದಿನ ನಮ್ಮಲ್ಲೇ ಉಳಿದುಕೊಳ್ಳಿ ಎಂದು ಮನವಿ ಮಾಡಿದರು. ಅವರು ಒಪ್ಪದಿದ್ದಾಗ ತಮ್ಮ ಕಾರಿನಲ್ಲೇ ಮನೆಗೆ ಕರೆದುಕೊಂಡು ಹೋದರು. ಡಿಸಿ ಮೋಹನ್‍ ರಾಜ್ ಅವರು, ಜಿಲ್ಲಾಧಿಕಾರಿಯಾದರೂ ಓರ್ವ ತಾಯಿ ಎದುರು ಅಧಿಕಾರಿಯಾಗಿ ನಡೆದುಕೊಳ್ಳದೆ ಮಗನಂತೆ ವರ್ತಿಸಿದ್ದು, ನೋಡುಗರನ್ನು ಮೂಕವಿಸ್ಮಿತರನ್ನಾಗಿಸಿತ್ತು. ಈ ವಿಷಯ ತಿಳಿದ ಜನತೆ ಸಂತಸ ವ್ಯಕ್ತಪಡಿಸಿದ್ದಾರೆ.

ತುಮಕೂರಿನವರೇ ಆದ ಇಹಲೋಕ ತ್ಯಜಿಸಿರುವ ರವಿ ಅವರ ಬಗ್ಗೆ ಈಗಿನ ತುಮಕೂರು ಜಿಲ್ಲಾಧಿಕಾರಿ ತೋರಿಸಿರುವ ಗೌರವ, ಕಾಳಜಿ ನೋಡಿದರೆ ಮೋಹನ್ ರಾಜ್ ಬಗ್ಗೆ ಇರುವ ಗೌರವ ದುಪ್ಪಟು ಆಗಿರುವುದಂತೂ ನಿಜ…

-ಗಿರೀಶ್ ಗೌಡ