`ನಮ್ಮ ಮೆಟ್ರೋ’ ದಲ್ಲಿ ಉದ್ಯೋಗವಕಾಶ : ಅರ್ಹ ಕನ್ನಡಿಗ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ……..

0
11744

` ನಮ್ಮ ಮೆಟ್ರೋ’ ದಲ್ಲಿ ಕನ್ನಡಿಗರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು ಎಂಬ ಸಾಮಾನ್ಯ ಕನ್ನಡಿಗನ ಕೂಗಿಗೆ ಕಡೆಗೂ ಮಾನ್ಯತೆ ಲಭಿಸಿದೆ. ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದ್ದು ಅರ್ಜಿ ಸಲ್ಲಿಸುವ ಆಸಕ್ತರಿಗೆ ಕನ್ನಡ ಜ್ಞಾನ ಅವಶ್ಯಕ ಎಂದು ನಿಬ್ಬಂಧನೆ ವಿಧಿಸಿರುವುದು ವಿಶೇಷ.

ಸೆಕ್ಷನ್ ಇಂಜಿನಿಯರ್ 11 ಹುದ್ದೆ , ಮೆಂಟೇನರ್ 72 ಹುದ್ದೆ ಮತ್ತು 225 ಟ್ರೈನ್ ಆಪರೇಟರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜುಲೈ 11, 2016. ಅರ್ಜಿ ಶುಲ್ಕ 700 ರೂ.ಗಳನ್ನು ಜುಲೈ 12ರೊಳಗೆ ಪಾವತಿ ಮಾಡಬೇಕು.

Nammaಹುದ್ದೆಗೆ ಅರ್ಜಿಸಲ್ಲಿಸ ಬಯಸುವ ಅಭ್ಯರ್ಥಿಗಳಿಗೆ ಕನ್ನಡ ಓದಲು, ಬರೆಯಲು ಹಾಗೂ ಮಾತನಾಡಲು ಬರಬೇಕು ಎಂಬ ನಿರ್ಬಂಧ ವಿಧಿಸಲಾಗಿದೆ. ಜತೆಗೆ ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ವಿಶೇಷವಾಗಿ ಕೆಲ ಹುದ್ದೆಗಳನ್ನು ಮೀಸಲಾಗಿಡಲಾಗಿದೆ.
ಬೆಂಗಳೂರು, ಮೈಸೂರು, ಬೆಳಗಾವಿ, ಕಲಬುರಗಿಯಲ್ಲಿ ಪರೀಕ್ಷೆಗಳು ನಡೆಯಲಿವೆ. ಹೆಚ್ಚಿನ ಮಾಹಿತಿಗಾಗಿ 080-22969200/22969400 ಸಂಖ್ಯೆಗೆ ಕರೆ ಮಾಡಬಹುದಾಗಿದೆ.

 

ಹುದ್ದೆ ವಿವರ ಹೀಗಿದೆ……

ಮೆಂಟೇನರ್ :

ಎಲೆಕ್ಟ್ರೀಷಿಯನ್, ಇನ್‌ಸ್ಟ್ರುಮೆಂಟ್ ಮೆಕಾನಿಕ್, ಮೆಕಾನಿಕ್ ರೆಡಿಯೋ ಮತ್ತು ಟಿವಿ, ವೈರ್‌ಮೆನ್ ಇತ್ಯಾದಿ ಇಂಜಿನಿಯರಿಂಗ್ ಟ್ರೇಡ್‌ಗಳಲ್ಲಿ 2 ವರ್ಷಗಳ ಐಟಿಐ ಪಡೆದವರು ಸಹ ಅರ್ಜಿ ಸಲ್ಲಿಸಬಹುದು.

ಟ್ರೈನ್ ಆಪರೇಟರ್ :

ಎಲೆಕ್ಟ್ರಿಕಲ್ ಇಂಜಿನಿಯರಿಂಗ್/ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್, ಟೆಲಿ ಕಮ್ಯೂನಿಕೇಷನ್ ಇತ್ಯಾದಿಗಳಲ್ಲಿ ಮೂರು ವರ್ಷದ ಡಿಪ್ಲೊಮಾ ಮಾಡಿದವರು ಅರ್ಜಿ ಸಲ್ಲಿಸಬಹುದು.

ಸೆಕ್ಷನ್ ಇಂಜಿನಿಯರ್ :

ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿಂಗ್, ಮೆಕಾನಿಕಲ್, ಟೆಲಿ ಕಮ್ಯುನಿಕೇಷನ್, ಕಂಪ್ಯೂಟರ್‌ ಸೈನ್ಸ್ ಮತ್ತು ಇಂಜಿನಿಯರಿಂಗ್, ಸಿವಿಎಲ್ ಇಂಜಿನಿಯರಿಂಗ್ ಇತ್ಯಾದಿಗಳಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿರಬೇಕು.

 

ವಯೋಮಿತಿ : 
ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 35 ವರ್ಷ, ಎಸ್‌ಸಿ/ಎಸ್‌ಟಿಗೆ 40 ವರ್ಷ ಮತ್ತು ಒಬಿಸಿಗೆ 38 ವರ್ಷಗಳು. http://bmrc.co.in/careers.htm ವೆಬ್‌ಸೈಟ್‌ಗೆ ಭೇಟಿ ನೀಡಿ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ