ನವೋದಯ ವಿದ್ಯಾಲಯದಲ್ಲಿ ಪ್ರಾಂಶುಪಾಲ/ ಶಿಕ್ಷಕ ಹುದ್ದೆಗೆ ಅರ್ಜಿ ಆಹ್ವಾನ

0
910

ಪಿಜಿಟಿ, ಟಿಜಿಟಿ, ಪ್ರಾಂಶುಪಾಲರ ನೇಮಕ/ ಬೆಂಗಳೂರಲ್ಲಿ ಪರೀಕ್ಷಾ ಕೇಂದ್ರ

*ಖಾಲಿ ಹುದ್ದೆಗಳು 2,072 ನವೋದಯ ವಿದ್ಯಾಲಯಗಳಲ್ಲಿ ಶಿಕ್ಷಕರಾಗಬಯಸುವವರಿಗೆ ಸಿಹಿಸುದ್ದಿ ಇಲ್ಲಿದೆ.

ವಿದ್ಯಾಲಯ ಸಮಿತಿ ಭರ್ಜರಿ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಿದ್ದು, ಒಟ್ಟು 2072 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ.

ದೇಶದ 42 ಕೇಂದ್ರಗಳಲ್ಲಿ ಲಿಖಿತ ಪರೀಕ್ಷೆ ನಡೆಯಲಿದ್ದು, ರಾಜ್ಯದ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿಯೇ ಪರೀಕ್ಷೆ ನಡೆಯಲಿದೆ. ಆದರೆ, ಅಸಿಸ್ಟೆಂಟ್ ಕಮೀಷನರ್ ಮತ್ತು ಪ್ರಿನ್ಸಿಪಾಲ್ ಹುದ್ದೆಗಳಿಗೆ ಮಾತ್ರ ದೆಹಲಿಯಲ್ಲಿ ಲಿಖಿತ ಪರೀಕ್ಷೆ ನಡೆಯಲಿದೆ ಎಂದು ವಿದ್ಯಾಲಯ ಸಮಿತಿ ತಿಳಿಸಿದೆ.

ಎಷ್ಟೆಷ್ಟು ಹುದ್ದೆಗಳು?:

ಅಸಿಸ್ಟೆಂಟ್ ಕಮೀಷನರ್-2, ಪ್ರಿನ್ಸಿಪಾಲ್-40, ಪೋಸ್ಟ್ ಗ್ರಾಜುಯೇಟ್ ಟೀಚರ್-880, ಟ್ರೈನ್ಡ್ ಗ್ರಾಜುಯೇಟ್ ಟೀಚರ್-660, ಥರ್ಡ್ ಲಾಂಗ್ವೇಜ್ ಟೀಚರ್ -235 ಮತ್ತು ಇತರೆ-255 ಹುದ್ದೆಗಳು ಖಾಲಿ ಇವೆ.

ಅರ್ಹತೆಗಳೇನು?

ಹ್ಯುಮಾನಿಟೀಸ್, ಸೈನ್ಸ್ ಅಥವಾ ಕಾಮರ್ಸ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರುವ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಪಟ್ಟ ಯಾವುದಾದರೂ ಒಂದು ಹುದ್ದೆಯಲ್ಲಿ ಕನಿಷ್ಠ ಐದು ವರ್ಷ ಸೇವೆ ಸಲ್ಲಿಸಿದ ಅನುಭವ ಇದ್ದವರು ಅಸಿಸ್ಟೆಂಟ್ ಕಮೀಷನರ್ಗಳಾಗಬಹುದು. ಹಾಗೆಯೇ ಬಿಎಡ್ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಹತೆ ಹೊಂದಿರುವ ಹಾಗೂ 12 ವರ್ಷದ ಸೇವಾನುಭವ ಇರುವವರು ಪ್ರಾಂಶುಪಾಲರ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಹಾಗೆಯೇ ಪೋಸ್ಟ್ ಗ್ರಾಜುಯೇಟ್ ಟೀಚರ್ಗಳಾಗಬೇಕಾದರೆ ಎರಡು ವರ್ಷದ ಇಂಟಿಗ್ರೇಟೆಡ್ ಪೋಸ್ಟ್ ಗ್ರಾಜುಯೇಟ್ ಎಂಎಸ್ಸಿ ಕೋರ್ಸ್, ಬಿಎಡ್ ಮತ್ತು ಹಿಂದಿ ಹಾಗೂ ಇಂಗ್ಲಿಷ್ ಭಾಷೆ ತಿಳಿದಿರಬೇಕು.

ಟ್ರೈನ್ಡ್ ಗ್ರಾಜುಯೇಟ್ ಟೀಚರ್ ಮತ್ತು ಥರ್ಡ್ ಲಾಂಗ್ವೇಜ್ ಟೀಚರ್ಹುದ್ದೆಗೆ ಅರ್ಜಿ ಸಲ್ಲಿಸಬೇಕಾದರೆ ನಾಲ್ಕು ವರ್ಷದ ಇಂಟಿಗ್ರೇಟೆಡ್ ಡಿಗ್ರಿ ಕೋರ್ಸ್ ಮತ್ತು ಬಿಎಡ್ ಕೋರ್ಸ್ ಪೂರ್ಣಗೊಳಿಸಿರಬೇಕು. ಜೊತೆಗೆ ಸಿಬಿಎಸ್ಇ ನಡೆಸುವ ಸಿಟಿಇಟಿಯಲ್ಲಿ ಅರ್ಹತೆ ಪಡೆದಿರಬೇಕು. ಇತರೆ ವರ್ಗದಲ್ಲಿ ಮ್ಯೂಸಿಕ್, ಗ್ರಂಥಾಲಯ, ಆರ್ಟ್ ಮತ್ತು ಪಿಇಟಿ ವಿಭಾಗದಲ್ಲಿ ನೇಮಕಾತಿ ನಡೆಯಲಿದೆ. ಸಂಬಂಧಪಟ್ಟ ವಿಷಯಗಳಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ಹಾಗೂ ಬಿಎಡ್/ಡಿಪಿಎಡ್ ಕೋರ್ಸ್ ಪೂರ್ಣಗೊಳಿಸಿದ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ.

ಗರಿಷ್ಠ ವಯೋಮಿತಿ: ಅಸಿಸ್ಟೆಂಟ್ ಕಮೀಷನರ್ ಮತ್ತು ಪ್ರಿನ್ಸಿಪಾಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಗರಿಷ್ಠ ವಯಸ್ಸು 45 ವರ್ಷ. ಪಿಜಿಟಿ ಹುದ್ದೆಗಳಿಗೆ 40 ವರ್ಷ ಮತ್ತು ಉಳಿದೆಲ್ಲಾ ಹುದ್ದೆಗಳಿಗೂ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 35 ವರ್ಷ ಮೀರಿರಬಾರದು.

ಅರ್ಜಿ ಶುಲ್ಕ: ಅಸಿಸ್ಟೆಂಟ್ ಕಮೀಷನರ್ ಮತ್ತು ಪ್ರಿನ್ಸಿಪಾಲ್ ಹುದ್ದೆಗಳಿಗೆ-1500 ರೂ., ಪಿಜಿಟಿ, ಟಿಜಿಟಿ, ಥರ್ಡ್ ಲಾಂಗ್ವೇಜ್ ಟೀಚರ್ ಮತ್ತು ಇತರೆ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು 1000 ರೂ. ಕ್ವಿಕ್ ಲುಕ್ -ಅರ್ಜಿ ಸಲ್ಲಿಸಲು ಕೊನೆಯ ದಿನ : ಅಕ್ಟೋಬರ್ 9, 2016 –

ಅರ್ಜಿ ಶುಲ್ಕ ಪಾವತಿಸಲು ಕೊನೆ ದಿನ: ಅಕ್ಟೋಬರ್ 14, 2016

-ಲಿಖಿತ ಪರೀಕ್ಷೆ: ನವೆಂಬರ್/ಡಿಸೆಂಬರ್, 2016 -ವಿವರಗಳಿಗೆ: navodaya.nic.in

ಮೂಲ: ಸಂಗ್ರಹ ಮಾಹಿತಿ