ನಾಯಿಯ ನಿಯತ್ತು: ಈ ವಿಶ್ವಾಸ ಗುಣ ನೋಡಿ

0
4268

ಮನುಷ್ಯ ಮನುಷ್ಯರ ನಡುವೆ ನಂಬಿಕೆ ವಿಶ್ವಾಸ ಇಲ್ಲದ ಇಂದಿನ ದಿನಗಳಲ್ಲಿ ಸಾಕಿದ ನಾಯಿ ಮಾತ್ರ ವಿಶ್ವಾಸವನ್ನು ಕಳೆದುಕೊಂಡಿಲ್ಲ ಎಂಬುದಕ್ಕೆ ಕೆಳಗಿನ ಸ್ಟೊರಿಯೇ ಉದಾಹರಣೆ. ಭುವನೇಶ್ವರದಲ್ಲಿನ ರಾಯಘಡ ಅರಣ್ಯ ಪ್ರದೇಶದಲ್ಲಿ ಮನುಷ್ಯ ಕೂಡ ಮಾಡದ ಸಾಹಸವನ್ನು ಒಂದು ನಾಯಿ ಮಾಡಿದೆ. ತನ್ನ ಯಜಮಾನನ ಕುಟುಂಬದ ಎಂಟು ಜನರನ್ನು ನಾಯಿ ಕಾಪಾಡಿದೆ.

ನಾಯಿಯ ನಿಯತ್ತು

ರಾಯಘಡ ಅರಣ್ಯ ಪ್ರದೇಶದಲ್ಲಿ ದಿಬಾಕರ್ ಎಂಬ ವ್ಯಕ್ತಿಯ ಕುಟುಂಬ ವಾಸವಾಗಿತ್ತು. ತನ್ನ ಮನೆಯಗೆ ರಕ್ಷಣೆಯಾಗಿ ಒಂದು ನಾಯಿಯನ್ನು ಸಾಕಿದ್ದರು. ಅರಣ್ಯ ಪ್ರದೇಶವಾದ್ದರಿಂದ ರಾತ್ರಿಸಮಯದಲ್ಲಿ ನಾಯಿಯನ್ನು ಹೊರಗಡೆ ಬಿಟ್ಟಿರುತ್ತಿದ್ದರು. ಒಂದು ರಾತ್ರಿ ಇದ್ದಕ್ಕಿದ್ದಂತೆ ನಾಲ್ಕು ಹಾವುಗಳು ಮನೆಯ ಒಳಗೆ ಪ್ರವೇಶಿಸುವುದನ್ನು ಗಮನಿಸಿದ ನಾಯಿ ಅವುಗಳ ಜೊತೆ ಹೋರಾಟ ನಡೆಸಿದೆ.

ನಾಯಿಯ ನಿಯತ್ತು2

ನಾಲ್ಕು ಹಾವುಗಳು ಮನೆಯ ಒಳಗೆ ಹೋಗದಂತೆ ತಡೆದು ನಾಲ್ಕು ಹಾವುಗಳನ್ನು ಸಾಯಿಸಿ ಕೊನೆಗೆ ನಾಯಿಸಹ ಪ್ರಾಣ ಬಿಟ್ಟಿದೆ. ಬೆಳಗ್ಗೆ ಯಜಮಾನ ನಾಲ್ಕು ಹಾವುಗಳು ಸತ್ತು ಬಿದ್ದಿರುವುದನ್ನು ನೋಡಿ ಆಶ್ಚರ್ಯಗೊಂಡಿದ್ದಾನೆ. ಹಾವುಗಳಿಂದ ನಮ್ಮ ಕುಟುಂಬವನ್ನು ರಕ್ಷಿಸಲು ನಾಯಿ ತನ್ನ ಪ್ರಾಣವನ್ನೆ ತ್ಯಾಗ ಮಾಡಿರುವುದು ದಿಬಾಕರ್ ಅರ್ಥಮಾಡಿಕೊಂಡ. ನಾಯಿಯ ಈ ನಿಯತ್ತು, ವಿಶ್ವಾಸ ಗುಣವನ್ನು ನೋಡಿ ಇಡೀ ಕುಟುಂಬ ಕಣ್ಣಿರಾಕಿತು.