ರಂಜಾನ್: ಇಂದಲ್ಲ, ನಾಳೆ ರಜೆ

0
1683

ರಂಜಾನ್ ಹಬ್ಬದ ಪ್ರಯುಕ್ತ ಜು.7 ರಂದು ಶಾಲಾ ಕಾಲೇಜು ಸೇರಿದಂತೆ ರಾಜ್ಯದಲ್ಲಿ ಅಧಿಕೃತ ಸರಕಾರಿ ರಜೆ ಘೋಷಿಸಲಾಗಿದದೆ.

8410234F-C91C-470F-A975-8ACB20DEC5E9_L_styvpf

ಈ ಮೊದಲು ಜು.6 ರಂದು (ಬುಧುವಾರ) ರಜೆ ಘೋಷಿಸಿಲಾಗಿತ್ತು ಅದನ್ನು ಈಗ ಹಿಂಪಡೆಯಲಾಗಿದೆ. ಚಂದ್ರ ದರ್ಶನದ ವೇಳೆಯಲ್ಲಿ ವ್ಯತ್ಯಯವಾದ ಹಿನ್ನೆಲೆಯಲ್ಲಿ ಈ ಬದಲಾವಣೆ ಮಾಡಲಾಗಿದೆ. ಸೆಂಟ್ರಲ್ ಮೂನ್ ಕಮಿಟಿ ನಿರ್ದೇಶನದ ಅನುಸಾರ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಸರಕಾರ ಅಧಿಕೃತ ಪ್ರಕಟಣೆ ಹೊರಡಿಸಿದೆ. ಅದರಂತೆ ಶಾಲಾ, ಕಾಲೇಜು ಹಾಗೂ ಸರಕಾರಿ ಕಚೇರಿಗಳು ಬುಧವಾರ ಕಾರ್ಯ ನಿರ್ವಹಿಸಬೇಕೆಂದು ಸೂಚಿಸಲಾಗಿದೆ. ಗುರುವಾರ ರಜೆ ನೀಡಲಾಗಿದೆ.

ಈ ಮಧ್ಯೆ, ಮಂಗಳೂರು ಮತ್ತು ಉಡುಪಿ ಜಿಲ್ಲಿಗಳಲ್ಲಿ ಬುಧವಾರವೇ ರಂಜಾನ್ ಆಚರಿಸಲು ನಿರ್ಧರಿಸಲಾಗಿದೆ. ಹಾಗಾಗಿ

ಅಲ್ಲಿಶಾಲಾ, ಕಾಲೇಜುಗಳಿಗೆ ರಜೆ ನೀಡುವ ಸಂಬಂಧ ಸ್ಥಳೀಯ ಆಡಳಿತ ಮತ್ತು ಶಿಕ್ಷಣ ಇಲಾಖೆಯ ಸ್ಥಳೀಯ ಅಧಿಕಾರಿಗಳಿಗೆ

ಅಧಿಕಾರ ನೀಡಲಾಗಿದೆ.