ನಾಳೆ ದೇಶವ್ಯಾಪಿ 3 ಪ್ರತ್ಯೇಕ ಮುಷ್ಕರ ಜನರಿಗೆ ತಟ್ಟಲಿದೆ ಬಿಸಿ

0
1113

 

ಬೆಂಗಳೂರು:ಕೇಂದ್ರ ಸರಕಾರದ ಉದ್ದೇಶಿತ ಕಾರ್ಮಿಕ ಕಾಯ್ದೆಗಳ ತಿದ್ದುಪಡಿ ವಿರೋಧಿಸಿ ನಾನಾ ಕಾರ್ಮಿಕ ಸಂಘಟನೆಗಳು (ಸೆ.2) ಕರೆ ನೀಡಿರುವ ರಾಷ್ಟ್ರವ್ಯಾಪಿ ಮುಷ್ಕರ ಅಪಾರ ಬೆಂಬಲ ವ್ಯಕ್ತವಾಗುತ್ತಿದ್ದು, ಆಟೋ ಸಂಚಾರ, ಬ್ಯಾಂಕ್ ವ್ಯವಹಾರ ವ್ಯತ್ಯಯವಾಗುವ ಸಾಧ್ಯತೆಯಿದೆ.

ಎಐಟಿಯುಸಿ ನೇತೃತ್ವದಲ್ಲಿ ನಡೆಯಲಿರುವ ಒಂದು ದಿನದ ಮುಷ್ಕರಕ್ಕೆ ಕೆಎಸ್ಆರ್ಟಿಸಿ ಸಿಬ್ಬಂದಿ ಮತ್ತು ನಾಕರರ ಸಂಘ, ಆಟೋ ರಿಕ್ಷಾ ಚಾಲಕರ ಸಂಘಟನೆಗಳ ಐಕ್ಯ ಹೋರಾಟ ಸಮಿತಿ, ಅಖಿಲ ಭಾರತ ನೌಕರರ ಸಂಘ, ಭಾರತೀಯ ಜೀವವಿಮಾ ನಿಗಮದ ನೌಕರರ ಸಂಘ, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸಂಘ ಸೇರಿದಂತೆ ಹಲವು ಸಂಘಟನೆಗಳು ಬೆಂಬಲ ಸೂಚಿಸಿವೆ.

ಸಾರಿಗೆ ನೀತಿ ಸಹಿತ ಕೇಂದ್ರ ಸರ್ಕಾರದ ಕಾರ್ಮಿಕ ನೀತಿಗಳ ವಿರುದ್ಧ ಸಿಡಿದೆದ್ದು ಶುಕ್ರವಾರ 10ಕ್ಕೂ ಹೆಚ್ಚು ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ದೇಶವ್ಯಾಪಿ ಮುಷ್ಕರಕ್ಕೆ ರಾಜ್ಯದಲ್ಲಿ ಮತ್ತೆರಡು ಮುಷ್ಕರಗಳು ಸೇರ್ಪಡೆಯಾಗಲಿವೆ. ಕೇಂದ್ರೀಕೃತ ಅಡುಗೆ ಮನೆಗಳ ಮೂಲಕ ಬಿಸಿಯೂಟ ತಯಾರಿಸಲು ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಸೆ.2ರಿಂದ ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ ತೀರ್ಮಾನಿಸಿದ್ದರೆ, ಭ್ರೂಣ ಲಿಂಗ ಪತ್ತೆ ತಡೆ ಕಾಯ್ದೆ ಹೆಸರಿನಲ್ಲಿ ವೈದ್ಯರಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿ ಶುಕ್ರವಾರದಿಂದ ಅನಿರ್ದಿಷ್ಟಾವಧಿವರೆಗೆ ಸ್ಕ್ಯಾನಿಂಗ್ ಹಾಗೂ ಡಯಗ್ನಾಸ್ಟಿಕ್ ಕೇಂದ್ರಗಳಲ್ಲಿ ಅಲ್ಟ್ರಾಸೋನಾಗ್ರಫಿ ಯಂತ್ರ ಬಳಕೆ ಸ್ಥಗಿತಗೊಳಿಸಲು ಇಂಡಿಯನ್ ರೇಡಿಯಾಲಾಜಿಕಲ್ ಆಂಡ್ ಇಮೇ ಜಿಂಗ್ ಅಸೋಸಿಯೇಷನ್ ನಿರ್ಧರಿಸಿದೆ. ಈ 3 ಪ್ರತ್ಯೇಕ ಮುಷ್ಕರದಿಂದಾಗಿ ರಾಜ್ಯಾದ್ಯಂತ ಜನ ಜೀವನದ ಮೇಲೆ ಬೇರೆ ಬೇರೆ ರೀತಿಯಲ್ಲಿ ಪರಿಣಾಮ ಉಂಟಾಗುವುದು ನಿಶ್ಚಿತ.

ಏನಿರಲ್ಲ?

ಸರ್ಕಾರಿ, ಖಾಸಗಿ ಬಸ್, ಆಟೋ, ಟ್ಯಾಕ್ಸಿ, ಬ್ಯಾಂಕ್ ಸೇವೆ, ಅಂಗಡಿ ಮುಂಗಟ್ಟುಗಳು, ಹೋಟೆಲ್, ರೆಸ್ಟೋರೆಂಟ್

ಏನೇನಿರುತ್ತೆ?

ಆಂಬುಲೆನ್ಸ್, ಹಾಲು ಸರಬರಾಜು ವಾಹನ ಆಸ್ಪತ್ರೆ, ಔಷಧ ಮಳಿಗೆ

ಪರೀಕ್ಷೆ ಮುಂದಕ್ಕೆ

ಮುಷ್ಕರ ಹಿನ್ನೆಲೆಯಲ್ಲಿ ಶುಕ್ರವಾರ ನಡೆಯಬೇಕಿದ್ದ ಬೆಂಗಳೂರು ವಿವಿಯ 2ನೇ ವರ್ಷದ ಬಿಎ ಹಾಗೂ ಬಿಕಾಂ. ಪರೀಕ್ಷೆಯನ್ನು ಸೆ. 6ಕ್ಕೆ ಹಾಗೂ ಎರಡನೇ ವರ್ಷದ ಬಿಬಿಎಂ ಪರೀಕ್ಷೆಯನ್ನು ಸೆ. 7ಕ್ಕೆ ಮುಂದೂಡಲಾಗಿದೆ.

    ಶಾಲೆ, ಕಾಲೇಜು ಅನುಮಾನ

ಶುಕ್ರವಾರ ಶಾಲೆ, ಕಾಲೇಜುಗಳು ನಡೆಯುವುದು ಅನುಮಾನವಾಗಿರುವಂತೆಯೇ ರಾಜ್ಯದ ಶಾಲಾ ವಾಹನಗಳ ಚಾಲಕರ ಸಂಘಗಳೂ ಮುಷ್ಕರಕ್ಕೆ ಬೆಂಬಲ ಸೂಚಿಸಿವೆ.

   ಬ್ಯಾಂಕ್ಗಳೂ ಬಂದ್

ಮುಷ್ಕರಕ್ಕೆ ಅಖಿಲ ಭಾರತ ಬ್ಯಾಂಕ್ ಎಂಪ್ಲಾಯೀಸ್ -ಡರೇಷನ್ ಹಾಗೂ ಬ್ಯಾಂಕ್ ಎಂಪ್ಲಾಯೀಸ್ -ಡರೇಷನ್ ಆಫ್ ಇಂಡಿಯಾ ಬೆಂಬಲ ಘೋಷಿಸಿರುವುದರಿಂದ ಬ್ಯಾಂಕ್ಗಳೂ ಬಂದ್ ಆಗುವುದು ಖಚಿತವಾಗಿದೆ.

ಭ್ರೂಣ ಲಿಂಗ ಪತ್ತೆ ತಡೆ ಕಾಯ್ದೆ ಹೆಸರಿನಲ್ಲಿ ಕಿರುಕುಳ ಆರೋಪ /ನಾಳೆಯಿಂದ ಅಲ್ಟ್ರಾಸೋನಾಗ್ರಫಿ ಸ್ಥಗಿತ

ಸಾರಿಗೆ ಮುಷ್ಕರದ ಬೆನ್ನಲ್ಲೇ ಭ್ರೂಣ ಲಿಂಗ ಪತ್ತೆ ತಡೆ ಕಾಯ್ದೆ(ಪಿಸಿ ಮತ್ತು ಪಿಎನ್ಡಿಟಿ) ಹೆಸರಿನಲ್ಲಿ ಸ್ಕ್ಯಾನಿಂಗ್ ಕೇಂದ್ರಗಳು ಹಾಗೂ ವೈದ್ಯರಿಗೆ ಕಿರುಕುಳ ನೀಡಲಾಗುತ್ತದೆ ಎಂದು ಆರೋಪಿಸಿ ಗುರುವಾರ(ಸೆ. 1) ಡಯಾಗ್ನಾಸ್ಟಿಕ್ ಕೇಂದ್ರಗಳನ್ನು ಮುಚ್ಚಿ ಪ್ರತಿಭಟನೆ ನಡೆಸಲಾಗುತ್ತಿದೆ. ಇಂಡಿಯನ್ ರೇಡಿಯಾಲಾಜಿಕಲ್ ಆಂಡ್ ಇಮೇಜಿಂಗ್ ಅಸೋಸಿಯೇಷನ್ ಮುಷ್ಕರಕ್ಕೆ ಕರ್ನಾಟಕ ಘಟಕವೂ ಬೆಂಬಲ ಸೂಚಿಸಿದೆ.

         ಕೇಂದ್ರೀಕೃತ ಅಡುಗೆ ಕೇಂದ್ರ ಆರಂಭಕ್ಕೆ ವಿರೋಧ

ಕೇಂದ್ರೀಕೃತ ಅಡುಗೆ ಮನೆಗಳ ಮೂಲಕ ಬಿಸಿಯೂಟ ತಯಾರಿಸಿ ವಿತರಿಸಲು ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮವನ್ನು ವಿರೋಧಿಸಿ ಸೆ. 2(ಶುಕ್ರವಾರ)ರಿಂದ ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ ತೀರ್ಮಾನಿಸಿದೆ. ಈ 3 ಪ್ರತ್ಯೇಕ ಮುಷ್ಕರದಿಂದಾಗಿ ರಾಜ್ಯಾದ್ಯಂತ ಜನ ಜೀವನದ ಮೇಲೆ ಬೇರೆ ಬೇರೆ ರೀತಿಯಲ್ಲಿ ಪರಿಣಾಮ ಉಂಟಾಗುವುದು ನಿಶ್ಚಿತ.