ನಿದ್ರೆಯಲ್ಲಿ ಹಾವನ್ನು ಕಚ್ಚಿ, ಕತ್ತರಿಸಿ ಹಾಕಿದ ಯುವಕ!

0
891

ಇಂದೋರ್:  ಆಶ್ಚರ್ಯಕಾರಿ ಘಟನೆಯೊಂದರಲ್ಲಿ ಯುವಕನು ನಿದ್ದೆಮಾಡುವಾಗ ಅವನ ಮೈ ಮೇಲೆ ಹಾವು ಹರಿದು ಬಂದಿದೆ ಈ ಕಾರಣಕ್ಕೆ ಕೋಪಗೊಂಡು ಹಾವನ್ನೇ ಕಚ್ಚಿ ಕತ್ತರಿಸಿಹಾಕಿದ ಘಟನೆಯೋಂದು ಇಂದೋರ್ ನಲ್ಲಿ ನಡೆದಿದೆ.

ವಿನೋದ್ ರಘುವಂಶಿ (28) ಹಾವನ್ನೇ ಕಚ್ಚಿದವನು. ಗೊರಕೆ ಹೊಡೆದು ನಿದ್ರಿಸುತ್ತಿದ್ದ ಈತನಿಗೆ ಬಾಯಿ ಮೇಲೆ ಹಾವು ಹರಿದಿದ್ದೂ ಗಮನಕ್ಕೇ ಬಂದಿಲ್ಲ. ಆದರೆ, ಹಾವಿನ ತಲೆಯನ್ನು ಕಚ್ಚಿ, ಕತ್ತರಿಸಿ ಹಾಕಿದ್ದಾನೆ. ಯಾವಾಗ ಈತನ ತಾಯಿ ಕೊಠಡಿಗೆ ಬಂದು, ಮಗನ ಬಾಯಿಯಲ್ಲಿದ್ದ ರಕ್ತ ನೋಡಿ ಚೀರಿಕೊಂಡಳೋ, ಆಗ ವಿನೋದ್ ಎಚ್ಚರಗೊಂಡಿದ್ದಾನೆ. ಆಗಿನ್ನೂ ಹಾವಿನ ಉಳಿದ ಭಾಗ ನೆಲದ ಮೇಲೆ ಇನ್ನೂ ಒತ್ತಾಡುತ್ತಲೇ ಇತ್ತು.

ತಕ್ಷಣವೇ ರಘುವಂಶಿಯನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ವಿಷ ವಿರೋಧಿ ಚುಚ್ಚುಮದ್ದು ನೀಡಿದ್ದು, ಅಪಾಯದಿಂದ ಪಾರಾಗಿದ್ದಾನೆ.

ಇಂಥ ವಿಚಿತ್ರ ಸಾಹಸಕ್ಕೆ ಕೈ ಹಾಕಿರುವುದು ವಿನೋದ್ ಮೊದಲಿಗನೇನಲ್ಲ. ಈ ವರ್ಷದ ಆದಿಯಲ್ಲಿ ಜಾರ್ಖಂಡ್‌ನಲ್ಲಿ ಬುಡಕಟ್ಟು ಜನಾಂಗಕ್ಕೆ ಸೇರಿದವನೊಬ್ಬ ವಿಷಕಾರಿ ಹಾವೊಂದನ್ನು ಕಚ್ಚಿದ್ದು, ಘಟನೆಯ 12 ಗಂಟೆ ತರುವಾಯ ಕೊನೆಯುಸಿರೆಳೆದಿದ್ದ. ಮೂರು ವರ್ಷಗಳ ಹಿಂದೆ ನೇಪಾಳದ ಭತ್ತದ ಗದ್ದೆಯಲ್ಲಿ ಕಾಳಿಂಗ ಸರ್ಪ ಕಚ್ಚಿದ ಆಕ್ರೋಶದಲ್ಲಿ ರೈತನೊಬ್ಬ ಹಾವನ್ನೇ ಜಗಿದಿದ್ದರೂ ಜೀವಕ್ಕೆ ಅಪಾಯವಾಗಿರಲಿಲ್ಲ.

ಹಾವು ಕಚ್ಚಿದ ವ್ಯಕ್ತಿಗಳು ಹಾವಿಗೆ ಕಚ್ಚುವುದು ಜಾರ್ಖಂಡ್ ನಲ್ಲಿ ವಿಶೇಷವೇನಲ್ಲ. ಬುಡಕಟ್ಟು ಜನಾಂಗಗಳು ವಾಸಿಸುವ ಹಳ್ಳಿಗಳಲ್ಲಿ ಹೀಗೆ ಹಾವಿಗೆ ಕಚ್ಚಿದರೆ ಅದರ ವಿಷ ಹೊರ ಹೋಗುವುದೆಂಬ ಭಾವನೆಯಿದೆಯಂತೆ.