ನಿಮಗೆ ಗೊತ್ತೇ? ಕೆಲವು ಸಾರಿಗೆ ವಿಷಯಗಳು!

0
1430

1) 1903ರಲ್ಲಿ ಹಾರಾಟ ನಡೆಸಿದ ಮೊದಲ ವಿಮಾನದ ಹಾರಾಟ ಕೇವಲ 12 ಸೆಕೆಂಡುಗಳಷ್ಟು ಮಾತ್ರ ಹಾರಾಟ ನಡೆಸಿತ್ತು.

2) ಟೈಟನಿಕ್ ಎಂಬ ಅತಿ ದೊಡ್ಡ ವೈಭೋವೋಪೇತ ಪ್ರಯಾಣಿಕರ ಹಡುಗು 1912ರಲ್ಲಿ ಪ್ರಯಾಣದ ನಡುವೆ ದೊಡ್ಡ ಹಿಮಗೆಡ್ಡೆಗೆ ಅಪ್ಪಳಿಸಿ ದುರಂತಕ್ಕೀಡಾದ ಪ್ರಪಂಚದ ಅತಿ ದೊಡ್ಡ ಹಡಗು.

3) ಪ್ರಪಂಚದ ಅತಿ ದೊಡ್ಡ ಕಾರು ‘ಲಿಮೋಸಿನ್’ ಇದರ ಉದ್ದ ಎಷ್ಟು ಗೊತ್ತೆ? 30.5 ಮೀಟರ್‍ಗಳು!

4) ಲಂಡನ್‍ನಲ್ಲಿ ಸುರಂಗದಲ್ಲಿ ಹಾದು ಹೋಗುವ ರೈಲು ಮಾರ್ಗವನ್ನು “ದಿ ಟ್ಯೂಬ್” ಎಂದು ಕರೆಯುತ್ತಾರೆ.

5) ಪ್ರಪಂಚದಲ್ಲಿ ಅತಿ ಎತ್ತರದ ಭೂಭಾಗದಲ್ಲಿರುವ ರೈಲು ನಿಲ್ದಾಣ “ಬೊಲಿವಿಯಾ”ದಲ್ಲಿದೆ.

6) ಮೊದಲ “ಸೈಕಲ್‍ನ್ನು” 1816 ರಲ್ಲಿ ಜರ್ಮನಿಯಲ್ಲಿ ಕಂಡುಹಿಡಿಯಲಾಗಿತ್ತು. ಆದರೆ ಇದಕ್ಕೆ ಪೆಡಲ್‍ಗಳು ಇರಲಿಲ್ಲ ಇದನ್ನು ನಮ್ಮ ಪಾದಗಳಿಂದ ಮುಂದೆ ದಬ್ಬಿ ನಡೆಸಬೇಕಿತ್ತು.

7) ಅತ್ಯಂತ ಕಡಿಮೆ ಬೆಲೆಯ ಕಾರನ್ನು “ಪೆÇೀರ್ವ್” ಕಂಪನಿ ತಾಯಾರಿಸಿತ್ತು. ಅದರ ಹೆಸರು “ಮಾಡೆಲ್-ಟಿ”.

8) ಅತ್ಯಂತ ಉದ್ದದ ರೈಲು ಸುರಂಗಮಾರ್ಗ ಜಪಾನಿನಲ್ಲಿದೆ.

9) ಬಿಸಿಗಾಳಿ ಬಲೂನ್ (ಊಔಖಿ ಃಂಐಔಔಓ) ನಲ್ಲಿ ಕುಳಿತು ಪ್ರಪಂಚವನ್ನು ಸುತ್ತಲು “ವಿಕಾಡೇ” 14 ದಿನ, 9 ಗಂಟೆ ಹಾಗೂ 51 ನಿಮಿಷ ತೆಗೆದುಕೊಂಡನು.

10) ತೇಲುವ ದೋಣಿಯಲ್ಲಿ ಕುಳಿತು 2001 ರಲ್ಲಿ ಪ್ರಪಂಚವನ್ನು ಮೊದಲ ಬಾರಿಗೆ ಸುತಿದ ವೇಗದ ಮಹಿಳೆ ಎಂಬ ಬಿರುದಿಗೆ ಪಾತ್ರಳಾದವಳು “ಎಲೆನ್ ಮ್ಲಾಕ್ ಆರ್ಫರ್”.

ಪ್ರಕಾಶ್ ಕೆ.ನಾಡಿಗ್, ಶಿವಮೊಗ್ಗ.