ನೀರು ಬಿಡುವುದು ಬೇಡ ಎಂದು ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಿದ ಸಿದ್ದಣ್ಣ ಮಂತ್ರಿಮಂಡಲದ ಸಚಿವ ಯಾರು?

0
3806

ಕಾವೇರಿ ಮಧ್ಯಂತರ ಆದೇಶದ ನಂತರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮುಖ್ಯ ಮಂತ್ರಿಗೆ ಸೆಡ್ಡು ಹೊಡೆದು ಅತ್ಯಂತ ಗಟ್ಟಿಯಾದ, ಸಮರ್ಪಕವಾದ ವಾದ ಮಾಡಿ, ನ್ಯಾಯಾಂಗ ನಿಂದನೆ ಆದರೂ ಪರವಾಗಿಲ್ಲ, ಅದನ್ನು ದಿಟ್ಟವಾಗಿ ಎದುರಿಸೋಣ ಬನ್ನಿ ಎಂದು ಸಿದ್ಧಣ್ಣನ ಸಚಿವ ಸಂಪುಟದ ಇಬ್ಬರು ಸಚಿವರು ಹೇಳುವ ಮೂಲಕ ತಮ್ಮ ರಾಜಕೀಯ ಮುತ್ಸದಿತನ, ಇಚ್ಛಾಶಕ್ತಿ, ನಾಡಿನ ಪ್ರೇಮ ಮತ್ತೆ ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ದಿಕ್ಕರಿಸುವ ಮೂಲಕ ಅದರ Poltical fallout ಅನ್ನು ಎದುರಿಸೋಣವೆಂದು ಹೇಳಿರುವುದು ಈಗ ಧೃಡಪಟ್ಟಿದೆ.

ಅವರು ರಮೇಶ್ ಕುಮಾರ್ !

ramesh-kumar

ಕೋಲಾರದ ಸೋಲಿಲ್ಲದ ಸರದಾರ, ಬಡವರ ಬಂಧು, ಅದ್ಭುತವಾದ clarity of thought ಹೊಂದಿರುವ ಅರೋಗ್ಯ ಮಂತ್ರಿಗಳಾದ ರಮೇಶ್ ಕುಮಾರ್ ರವರು ಸಚಿವ ಸಂಪುಟ ಸಭೆಯಲ್ಲಿ ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಪಾಲಿಸದೆ ಸರ್ಕಾರದ ಒಂದು ಐತಿಹಾಸಿಕ ನಿರ್ಣಯವನ್ನು ಕೈಗೊಳ್ಳೋಣ ವೆಂದು ಮುಖ್ಯ ಮಂತ್ರಿಗೆ ಮನವರಿಕೆ ಮಾಡಿದ್ದರು. ಇವರ ವಾದಕ್ಕೆ, ಹಿರಿಯ ಸಚಿವರಾದ ಎಚ್.ಕೆ.ಪಾಟೀಲ್ ರವರು ‘ಸಾಥ್’ ನೀಡಿದರು.

ಹೋಂ ವರ್ಕ್ ಮಾಡಿಕೊಂಡು ಬಂದಿದ್ದ ರಮೇಶ್ ಕುಮಾರ್ !

ಸಂಪುಟ ಸಭೆಗೆ ಬರುವುದಕ್ಕೂ ಮುನ್ನ ಅರೋಗ್ಯ ಸಚಿವರಾದ ರಮೇಶ್ ಕುಮಾರರು ನಿವೃತ್ತ ಲೋಕಾಯುಕ್ತ ನ್ಯಾಯಾಧೀಶರಾದ ವೆಂಕಟಾಚಲಯ್ಯ ರವರನ್ನು ಭೇಟಿ ಮಾಡಿ, ಸರ್ವೋಚ್ಚ ನ್ಯಾಯಾಲಯದ ಮಧ್ಯಂತರ ತೀರ್ಪಿನ ಕುರಿತು, ಇದನ್ನು ಉಲ್ಲಂಘಿಸಿದಲ್ಲಾಗುವ implicationsಗಳ ಬಗ್ಗೆ ಸುಧೀರ್ಘವಾಗಿ ಸಮಾಲೋಚಿಸಿದ್ದರು. ವೆಂಕಟಾಚಲಯ್ಯ ನವರ ಜೊತೆ ಮಾತುಕತೆಯನಂತರ; ನೀರು ತಮಿಳು ನಾಡಿಗೆ ಬಿಡದೆ ಇದ್ದಲ್ಲಿ ಆಗುವ ಕಾನೂನಿನ ಒಡಕು ತೊಡಕುಗಳನ್ನು ಚರ್ಚಿಸಿದ ನಂತರ ರಮೇಶ್ ಕುಮಾರ್ ರವರು ಸಂಪುಟ ಸಭೆಯಲ್ಲಿ ತಮ್ಮ ಸಲಹೆಯನ್ನು ಮಂಡಿಸಿದ್ದು ಈಗ ಬೆಳಕಿಗೆ ಬಂದಿದೆ.

ರಮೇಶ್ ಕುಮಾರರಿಗೆ ಸಾಥ್ ಕೊಟ್ಟರು ಎಚ್.ಕೆ.ಪಾಟೀಲ್

untitled-1

ಸಂಪುಟದ ಮತ್ತೊಬ್ಬ ಹಿರಿಯ ಸಚಿವರಾದ ಎಚ್.ಕೆ.ಪಾಟೀಲ್ ರವರು ಕೂಡ ರಮೇಶ್ ಕುಮಾರರ ಸಲಹೆಗೆ ‘ಧ್ವನಿ’ ಗೂಡಿಸಿದರು. ನೀರಾವರಿ ಮಂತ್ರಿಗಳಾಗಿ ಕೆಲಸ ಮಾಡಿರುವ ಸುಧೀರ್ಘ ಅನುಭವವಿರುವ ಪಾಟೀಲರು, ಸರ್ವೋಚ್ಚ ನ್ಯಾಯಾಲಯದ ಕೆಲ observations ಗಳನ್ನೂ ಕೂಡ ಸಂಪುಟ ಸಭೆಯಲ್ಲಿ ಪ್ರಸ್ತುತ ಪಡಿಸಿದರು. ನೀರು ನಿಲ್ಲಿಸಿ, ಮೇಲುಸ್ತುವಾರಿ ಸಮಿತಿಯ ಮುಂದೆ ಕರ್ನಾಟಕದ ದಯನೀಯ ಪರಿಸ್ಥಿತಿಯ ಬಗ್ಗೆ ಮನವರಿಕೆ ಮಾಡಿಕೊಡೋಣ, ಕರುನಾಡಿನ ಜಲಾಶಯದ ದುಃ ಸ್ಥಿತಿಯ ಬಗ್ಗೆ ಸರ್ವೋಚ್ಚ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡೋಣವೆಂಬ ರಚನಾತ್ಮಕವಾದಂತ ಸಲಹೆಗಳನ್ನು ಪಾಟೀಲರು ನೀಡಿದರು.

ಬಿಡುವುದು ಸೂಕ್ತ ಅಂದ್ರು ಡಿ.ಕೆ.ಶಿ, ಉಗ್ರಿ; ‘ಬೃಹನ್ನಳೆ’ ನಿಲುವು ಪ್ರದರ್ಶಿಸಿದ ಆಸ್ಕರ್ ಫೆರ್ನಾಂಡೆಜ್

ಕಾಂಗ್ರೆಸ್ ಹೈ ಕಮಾಂಡ್ ಜೊತೆ ‘ನಿಕಟ’ ಸಂಪರ್ಕವಿರುವ ಆಸ್ಕರ್ ಫೆರ್ನಾಂಡೆಜ್ ಯಾವುದೇ ನಿಲುವು ತೆಗೆದು ಕೊಳ್ಳದೆ ಕೇವಲ ಟೀ, ಬಿಸ್ಕತ್ ಮೆಂದು ಹೊರನಡೆದರು. ಡಿ.ಕೆ.ಶಿವಕುಮಾರ್ ಮತ್ತು ಮುಖ್ಯ ಮಂತ್ರಿಗಳ ಆಪ್ತರು ಮತ್ತು ಮೇಲ್ಮನೆ ಸದಸ್ಯ ಉಗ್ರಪ್ಪ, ನೀರು ಬಿಡುವುದು ಸೂಕ್ತ ಎಂದು ಅಭಿಪ್ರಾಯ ನೀಡಿದರು.

ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಂಡು ಕನ್ನಡಿಗರ ಮನಸಿನಲ್ಲಿ ಹೃದಯಗಳಲ್ಲಿ ಇರುವ ಅವಕಾಶವನ್ನು ಸಿದ್ದಣ್ಣ ಕಳೆದುಕೊಂಡಿದ್ದಾರೆ. ನಾವು ಹೈ ಕಮಾಂಡ್ ದಾಸರು, ಹೈ ಕಮಾಂಡ್ ನಿರ್ಧಾರ ಉಲ್ಲಂಘಿಸಿದರೆ ನಮ್ಮ ಉಡಿದಾರ ಲೂಸ್ ಆಗುತ್ತೆ ಅಂತ ಗೊತ್ತಾದ ಮು.ಮಂ. ರಮೇಶ್ ಕುಮಾರ್ ರವರ ಸಲಹೆ ಸ್ವೀಕರಿಸಿದ್ದಲ್ಲಿ ಇಂದು ಈ ಅಂಕಣ ಬರೆಯುವ ಗೋಜಿಗೆ ಅವಕಾಶವಿರುತ್ತಿರಲಿಲ್ಲ. ಟ್ರಿಬ್ಯೂನಲ್ ಆದೇಶಕ್ಕೆ ಕ್ಯಾರೇ ಎನ್ನದ ದಿವಂಗತ ಬಂಗಾರಪ್ಪನವರು ಪ್ರದರ್ಶಿಸಿದ ರಾಜಕೀಯ ಮುತ್ಸದಿತನ, ಇಚ್ಛಾಶಕ್ತಿಯ ಹತ್ತನೇ ಒಂದು ಭಾಗ ಕೂಡ ಲೋಹಿಯಾವಾದಿ ಸಿದ್ದಣ್ಣ ಪ್ರದರ್ಶಿಸಲು ವಿಫಲವಾದದ್ದು, ಕನ್ನಡಿಗರ ದೌರ್ಭಾಗ್ಯವಷ್ಟೇ.

#ಬಿಳಿಕಾಗೆ