ನೀವು ಸಸ್ಯಹಾರಿಗಳೇ ಅಥವಾ ಮಾಂಸಸ್ಯಹಾರಿಗಳೇ!!!

0
2728

ಮಾಂಸಸ್ಯಹಾರಿಗಳು!!

ಬಹಳ ಜನ ತಾವು ಅಪ್ಪಟ ಸಸ್ಯಹಾರಿಗಳೆಂದು ಹೇಳುತ್ತಾರೆ, ಅದರೆ ತಮಗರಿವಿಲ್ಲದಂತೆಯೆ ಮಾಂಸಹಾರವನ್ನು ತಿಂದಿರುತ್ತಾರೆ, ಅದು ಅವರ ತಪ್ಪಲ್ಲಾ! ಇತ್ತೀಚಿನ ದಿನಗಳಲ್ಲಿ ಆಹಾರದ ಲೇಬಲ್‍ಗಳ ಮೇಲೆ ಬಳಸುವ ಪಧಾರ್ಥಗಳ ಪಟ್ಟಿ ಬಹಳ ಗೊಂದಲವನ್ನುಂಟುಮಾಡುತ್ತದೆ, ಸಸ್ಯಹಾರಿಗಳಿಗೆ ಸೂಕ್ತ ಎಂದು ಹಣೆಪಟ್ಟಿಹೊಂದಿರುವ ಹಲವಾರು ಆಹಾರಗಳಲ್ಲಿ ಮಾಂಸಹಾರದ ಅಂಶಗಳು ಇರುತ್ತದೆ ಗೊತ್ತೇ? ಮಾಂಸಹಾರ ತಿನ್ನುವುದು ತಪ್ಪೆಂದು ನಾನು ಹೇಳುತ್ತಿಲ್ಲಾ!! ಅದರೆ ಸಸ್ಯಹಾರಿಗಳು ತಮಗೆ ಅರಿವಿಲ್ಲದಂತೆ ಮಾಂಸಹಾರ ತಿನ್ನುವಂತೆ ಮಾಡುವ ಆಹಾರ ತಯಾರಿಕ ಕಂಪೆನಿಗಳ ಕೆಲಸ ತಪ್ಪು, ಸಸ್ಯಹಾರಿಗಳಲ್ಲಿ ಎರಡು ವಿಧವಿದೆ, ಕೆಲವರು ಮಾಂಸ, ಮೀನು ಮುಂತಾದವನ್ನು ತಿನ್ನುವುದಿಲ್ಲಾ ಅದರೆ ಮೊಟ್ಟೆ ಹಾಗೂ ಡ್ಯೆರಿ ಪದಾರ್ಥವನ್ನು ತಿನ್ನುತ್ತಾರೆ ಇಂಥವರಿಗೆ “ಲ್ಯಾಕ್ಟೋ ಒವೊ ವೆಜಿಟೇರಿಯನ್” ಎನ್ನುತ್ತಾರೆ, ( ಲ್ಯಾಕ್ಟೋ ಎಂದರೆ ಹಾಲು, ಒವೋ ಎಂದರೆ ಮೊಟ್ಟೆ), ಇನ್ನೊಂದು ಗುಂಪು “ಲ್ಯಾಕ್ಟೋ ವೆಜಿಟೇರಿಯನ್” ಅಂದರೆ ಇವರು ಮೊಟ್ಟೆಯನ್ನು ಸಹ ತಿನ್ನುವುದಿಲ್ಲಾ! ಅದರೆ ಹಾಲಿನ ಪದಾರ್ಥವನ್ನು ತಿನ್ನುತ್ತಾರೆ, ಏರಡನೆ ರೀತಿಯವರು ಹೆಚ್ಚಾಗೆ ದಕ್ಷಿಣ ಏಷ್ಯಾದಲ್ಲಿ ಇದ್ದಾರೆ, ನೀವು ಸಸ್ಯಹಾರಿಗಳಾಗಿದ್ದು, ನೀವು ತಿನ್ನುತ್ತಿರುವ ಕೆಲವೊಂದು ಆಹಾರಗಳ ಶುದ್ದ ಸಸ್ಯಹಾರವೆಂದು ತಿನ್ನುತ್ತಿದ್ದರೆ! ನಿಮಗೆ ಗೊತ್ತಿಲ್ಲದಂತೆ ನೀವು ಮಾಂಸಹಾರವನ್ನು ಸೇವಿಸುತ್ತಿರಬಹುದೆಂದರೆ ನಿಮಗೆ ಅಶ್ಚರ್ಯವಾಗಬಹುದು, ಅದರೆ ಇದು ಸತ್ಯ!! ಏರಡನೆ ರೀತಿಯವರಿಗೆ ಅಂದರೆ ಶುದ್ದ ಸಸ್ಯಹಾರಿಗಳಿಗೆ ಆಹಾರವನ್ನು ತಯಾರಿಸುವ ಕಂಪೆನಿಗಳು ನಿಗದಿತ ಪ್ರಮಾಣದಲ್ಲಿ ಮೀನು ಹಾಗೂ ಮೊಟ್ಟೆಯ ಅಂಶವನ್ನು ಬಳಸುತ್ತಾರೆ, ಹಾಗಾಗಿ ಆಹಾರ ಪದಾರ್ಥಗಳನ್ನು ಕೊಂಡುಕೊಳ್ಳುವಾಗ ಲೇಬಲ್ ಮೇಲೆ ಕಣ್ಣಾಡಿಸುವುದು ಸೂಕ್ತ,ಕೆಲವೊಂದು ಮಾಂಸಹಾರ ಪದಾರ್ಥಗಳ ಬಗ್ಗೆ ಸಸ್ಯಹಾರಿಗಳಿಗೆ ಅರಿವಿಲ್ಲದಿರುವುದು ಸಸ್ಯಹಾರಿಗಳನ್ನು ಮೋಸಹೊಗುವಂತೆ ಮಾಡುತ್ತದೆ.

ಸಸ್ಯಹಾರವೆಂದು ಹಣೆಪಟ್ಟಿ ಹೊಂದಿರುವ ಕೆಲವೋಂದು ಆಹಾರಗಳಲ್ಲಿ ಮಾಂಸಹಾರದ ಅಂಶಗಳು ಇರುತ್ತದೆ, ಅದರೆ ಇದನ್ನು ಉದ್ದೇಶಪೂರ್ವಕವಾಗಿ ಹಾಕಿದ್ದಲ್ಲಾ!! ಸಸ್ಯಹಾರದ ರುಚಿಯನ್ನು ಹೆಚ್ಚಿಸಲೋ ಅಥವಾ ಅದರ ಶುದ್ದತೆಯನ್ನು ಕಾಪಾಡಲು, ಅಥವಾ ಅದರ ಪೌಷ್ಟಿಕತೆಯನ್ನು ಹೆಚ್ಚಿಸಲು ಕೆಲವೊಮ್ಮೆ ಇದರ ಬಳಕೆ ಅನಿವಾರ್ಯ!! ಶುದ್ದ ಸಸ್ಯಹಾರಿಗಳೆಂದು ಹೇಳಿಕೊಳ್ಳುವ ಮೊದಲು ಓಮ್ಮೆ ನೀವು ತಿನ್ನುವ ಆಹಾರದ ಮೇಲೆ ಕಣ್ಣಾಡಿಸಿ, ಕೆಳಗಿನ ಕೆಲವು ಆಹಾರಗಳನ್ನು ನೀವು ತಿನ್ನುತ್ತಿದ್ದರೆ ಖಂಡಿತ ನೀವು ಸಸ್ಯಹಾರಿಗಳಲ್ಲ!! ಸುಮಾರು ಇಪ್ಪತ್ತು ರೀತಿಯ ಮಾಂಸಜನಿತ ಅಂಶಗಳನ್ನು ಕೆಲವೊಂದು ಸಸ್ಯಹಾರ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ

ಮೊದಲನೆಯದಾಗಿ ನೀವು ವೀಕೆಂಡ್ ಗಳಲ್ಲಿ ತಿನ್ನಲು ಹೊರಗೆ ಹೋದರೆ ನೀವು ಮೊದಲು ಆರ್ಡರ್ ಮಾಡುವುದು ಸೂಪ್! ಸೂಪ್ ಎಂದರೆ ಎಲ್ಲಾರಿಗೂ ಇಷ್ಟ!!ರುಚಿಯದ, ಸುವಾಸನೆಯಿಂದ ಕೂಡಿದ ಸೂಪ್ ಯಾರಿಗೆ ಬೇಡ, ಅದರಲ್ಲೂ ಮ್ಯಾಕೋಸೂಪ್ ಅಹಾ!! ಅದರೆ ಇದರ ತಯಾರಿಕೆಯಲ್ಲಿ ಬಳಸುವ ಸಾಸ್ ಮೀನಿನಿಂದ ತಯರಾಗಿರುತ್ತದೆ ಗೊತ್ತೇ? ಮುಂದಿನ ಬಾರಿ ರೆಸ್ಟೋರೆಂಟ್‍ಗೆ ಹೋದಾಗ ಕೇಳಿ ಮ್ಯಾಕೋ ಸೂಪ್‍ಗೆ ಎನೇನು ಹಾಕುತ್ತಾರೆಂದು, ಅದಾ! ಟಾಮ್ ಯೊಮ್ ಸೂಪ್ ಉಪಯೋಗಿಸುತ್ತೆವೆಂದು ಹೇಳುತ್ತಾರೆ, ಈ ಟಾಮ್ ಯೊಮ್ ಸೂಪ್ ತಯರಾಗುವುದು ಒಂದುಜಾತಿಯ ಸಿಗಡಿ ಮೀನಿನಿಂದ ಹಾಗಾದರೆ ಈ ಸೂಪ್ ಸಸ್ಯಹಾರವೆಂದು ಹೇಳಲು ಸಾಧ್ಯವೇ?

ಸೂಪ್ ನಂತರ ಕೆಲವರು ಬಹಳ ಮಂದಿ ಲೆಟೂಸ್ ಸಾಲಡ್‍ನ್ನು ಅರ್ಡರ್ ಮಾಡುತ್ತಾರೆ, ಕಾರಣ ಇದು ಶುದ್ದ ಸಸ್ಯಹಾರ, ಸಾಲಡ್ ನಲ್ಲಿರುವ ಸೊಪ್ಪು ತರಕಾರಿ ಏದುರಿಗೆ ಕಾಣುತ್ತದಲ್ಲಾ! ಎಂದು, ಅದರೆ ನಿಮಗೆ ಗೊತ್ತೇ ನಿಮ್ಮ ಸಾಲಡ್ ಅಷ್ಟೊಂದು ರುಚಿಯಾಗಿರಲು ಹೇಗೆ ಸಾಧ್ಯ ಎಂದು! ಸಾಲಡ್ ಅಲಂಕರಿಸಲು ಉಪಯೋಗಿಸುವ ಸಾಸ್‍ಗಳಲ್ಲಿ ಮೊಟ್ಟೆಯ ಬಳಕೆಯಾಗಿರುತ್ತದೆ, ಅದರಲ್ಲೂ ವಿದೇಶದಿಂದ ಅಮದಾದ ಸಾಸ್‍ಗಳು ಪೂರ್ಣ ಸಸ್ಯಹಾರದಿಂದ ಕೂಡಿರಲು ಸಾಧ್ಯವೇ ಇಲ್ಲಾ!

ಇನ್ನು ಇತ್ತೀಚಿನ ಯುವಜನತೆಗೆ ಚೀಸ್ ಹಾಗೂ ಪಿಜ್ಜಾ ಇಲ್ಲದ್ದಿದ್ದರೆ ಕೆಲವೊಂದು ಅಹಾರವೇ ಏಕೆ ಜೀವನವೇ ಅಪೂರ್ಣ ಎನ್ನಿಸುತ್ತದೆ, ಅದರಲ್ಲೂ ಚೀಸ್” ಅಂದರೆ ಮೀನು ನೀರಿನ ಸಂಭಂದಂತಗಿದೆ, ಚೀಸ್ ಇಲ್ಲಾದ ರೆಸಿಪಿಯೇ ಇಲ್ಲಾ! ಚಿಸ್ ಪಾವ್ ಭಾಜಿ, ಚೀಸ್ ರಜ್ಮಾ, ಚೀಸ್ ಅವಲಕ್ಕಿ, ಚೀಸ್ ದೋಸೆ, ಪರಾಟ ಚೀಸ್‍ನ ಪಟ್ಟಿ ಬೆಳೆಯುತ್ತಲೆ ಹೋಗುತ್ತದೆ, ಅದರೆ ನಿಮಗೆ ಗೊತ್ತೆ ಚೀಸ್‍ಲ್ಲಿ “ರೇನಾಟ್”ಎಂಬ ಪಾಣಿಗಳ ಕರುಳಿನಿಂದ ಶೇಕರಿಸಿದ “ಕಿಣ್ವ” ಇರುತ್ತದೆ, ಅದರೆ ಚೀಸ್ ಪೊಟ್ಟಣದ ಮೇಲೇ ಈ ಕಿಣ್ವ ಏಲ್ಲಿಂದ ಬಂತು ಎಂದು ನಮೂದಿಸಿರುವುದಿಲ್ಲಾ, ಬರಿ “ಕೀಣ್ವ”ಎಂದಷ್ಟೆ ನಮೂದಿಸಿರುತ್ತರೆ, ಈಗ ಇದು ಎಲ್ಲಿಂದ ಹೇಗೆ ಬರುತ್ತದೆ ಎಂದು ಯೋಚಿಸುವ ಸರದಿ ನಿಮ್ಮದು!!

ಈಗ ದಿನಬೆಳಗಾದರೆ ಠೀವಿಗಳಲ್ಲಿ “ಹೃದಯ ಸ್ನೇಹಿ’ ಅಡುಗೆ ಏಣ್ಣೆಗಳ ಜಾಹಿರಾತುಗಳದ್ದೆ ದರ್ಭಾರ್!! ಅದರೆ ಕೆಲವೊಂದು ಆಡುಗೆ ಏಣ್ಣೆಗಳು ಹಾಗೂ ಜ್ಯೂಸ್‍ಗಳಲ್ಲಿ””ಒಮೆಗಾ-ತ್ರಿ-ಪ್ಯಾಟಿ ಆಮ್ಲ””ಗಳಿದೆಯೆಂದು ಅದು ನಿಮ್ಮ ಹೃದಯವನ್ನು ರಕ್ಷಿಸುತ್ತದೆಂದು ಹೇಳುತ್ತಾರೆ, ಈ ಒಮೆಗಾ ತ್ರಿ-ಪ್ಯಾಟಿ ಆಮ್ಲವನ್ನು ಮೀನಿನೆಣ್ಣೆಯಿಂದ ಸಂಸ್ಕರಿಸುತ್ತಾರೆ, ಇದು ಹೇಗೆ ಶುದ್ದ ಸಸ್ಯಹಾರವಾಗಲು ಸಾಧ್ಯ! ಹಾಗೂ ಕೆಲವೊಂದು ಜ್ಯೂಸ್‍ಗಳಲ್ಲಿ “ಲೆನೊಲಿನ್’ನಿಂದ ಸಂಸ್ಕರಿಸಿದ “ಡಿ’ ಜೀವಸತ್ವ ಇದೆ ಎಂದು ನಮೂದಿಸಿರುತ್ತಾರೆ, ಅದರೆ ಈ ಲೆನೊಲಿನ್ ಏಲ್ಲಿಂದ ಬಂತು? ಗೂಗಲ್ನಲ್ಲಿ ಹುಡುಕಿ!!

ರೆಸ್ಟೋರೆಂಟ್ಗೆ ಹೋದರೆ “ನಾನ್” ತಿನ್ನದೆ ಊಟ ಕಂಪ್ಲೀಟ್ ಆಗುವುದಿಲ್ಲಾ, ಈ ನಾನ್ ಮೃದುವಾಗಿ, ಏಳೆಏಳೆಯಗಿರಲು ಹೇಗೆ ಸಾಧ್ಯ ಎಂದು ಯೋಚಿಸಿದ್ದಿರಾ? ಈ ನಾನ್ ಮೃದುವಾಗಿರಲು ಹಾಗೂ ಹಿಂಜಲು ಅದಕ್ಕೆ ಮೊಟ್ಟೆಯನ್ನು ಹಾಕುತ್ತಾರೆ, ಅದಕ್ಕಾಗಿಯೆ ಕೆಲ ಜ್ಯೆನ್ ಸಮುದಾಯದವರು “ಜ್ಯೆನ್ ನಾನ್” ಏಂದು ಕೇಳಿ ಅರ್ಡರ್ ಮಾಡುತ್ತಾರೆ, ನೀವು ಮೊಟ್ಟೆ ತಿನ್ನುವವರಾದರೆ ಅದು ಪರವಾಗಿಲ್ಲಾ ಬಿಡಿ, ಶುದ್ದ ಶಾಕಹಾರಿ ಏಂದು ನಾನ್ ತಿಂದರೆ ವೆಜೀಟೆರಿಯನ್ ಹೇಗಾಗುತ್ತಿರಿ?

ಇನ್ನು ಮನೆಯಲ್ಲಿ ಉಪಯೋಗಿಸುವ ಬಿಳಿಯಾದ ಸಕ್ಕರೆ ಅಷ್ಟೋಂದು ಬಿಳಿಯಾಗಿರಲು ಹೇಗೆ ಸಾಧ್ಯ ಎಂದು ಯೋಚಿಸಿದ್ದಿರಾ?ಸಕ್ಕರೆಯನ್ನು ಶುದ್ದಗೊಳಿಸುವ ಪ್ರಕ್ರಿಯೆಯಲ್ಲಿ “ನ್ಯೆಸರ್ಗಿಕ ಇಂಗಾಲವನ್ನು” ಬಳಸುತ್ತರೆ, ಈ ನ್ಯೆಸರ್ಗಿಕ ಇಂಗಾಲ ಎಲ್ಲಿಂದ ಬಂತು? ಮೂಳೆ ಇದ್ದಿಲಿನಿಂದ, ಈ ಮೂಳೆ ಇದ್ದಿಲು? ಇದು ಬಂದದ್ದು ಪ್ರಾಣಿಗಳ ಸುಟ್ಟ ಮೂಳೆಯಿಂದ, ಹಾಗಾಗಿ ನೀವು ಮನೆಗೆ ಸಕ್ಕರೆ ತರುವಾಗ ಕಂದು ಬಣ್ಣದ ರಿಫ್ಯೆನ್ಡ್ ಅಲ್ಲದ ಸಕ್ಕರೆ ತನ್ನಿ, ಅಥವಾ ಬೆಲ್ಲಾ ಬಳಸುವುದೇ ಉತ್ತಮ!!

ಇನ್ನು ಗರಿಗರಿಯಾದ ಅಲೂಗೆಡ್ಡೆ ಚಿಪ್ಸ ಎಂದರೆ ಯಾರಿಗೆ ಇಷ್ಟ ಇಲ್ಲಾ ಹೇಳಿ, ಕೆಲವೊಂದು ಚಿಪ್ಸ ಅದರಲ್ಲೂ “ಬಾರ್ಬಿಕ್ಯೂ” ಪರಿಮಳ ಹೊಂದಿದ ಚಿಪ್ಸನಲ್ಲಿ “ಕುಕ್ಕುಟಕೊಬ್ಬನ್ನು’ ಉಪಯೋಗಿಸುತ್ತಾರೆ,ಚಿಪ್ಸ ತಿನ್ನುವ ಮುನ್ನ ಲೇಬಲ್ ಮೇಲೆ ಕಣ್ಣಾಡಿಸಿ,ಇನ್ನು ಕೇಕ್‍ಗಳಲ್ಲಿ ಮೋಟ್ಟೆಯನ್ನು ಬಳಸುವುದು ಸಾಮಾನ್ಯ, ಅದರೆ ಕೆಲವೊಂದು ಅಮದಾದ ಕೇಕ್‍ಗಳಲ್ಲಿ ಹಂದಿಯ ಕೊಬ್ಬನ್ನು ಬಳಸುತ್ತಾರೆಂದರೆ ನಿಮಗೆ ಅಶ್ಚರ್ಯವಾಗಬಹುದು!! ಎಷ್ಟೆ ಅಲ್ಲಾ, ಕೆಲವೊಂದು ಬೇಕರಿ ಪದಾರ್ಥಗಳಲ್ಲಿ ಮೊಟ್ಟೆಯ ಉಪಯೋಗ ಸಾಮಾನ್ಯ, ಅದನ್ನು ಹಾಕದ್ದಿದ್ದರೆ ಕೆಲವೊಂದು ಬೇಕರಿ ಪದಾರ್ಥಗಳು ಪೂರ್ಣವಾಗುವುದಿಲ್ಲಾ!! ಹಾಗೂ ಕೆಲವೊಂದು ಬೇಕರಿ ಪದಾರ್ಥಗಳಿಗೆ ರುಚಿ ಬರುವುದಿಲ್ಲಾ! ಈ ವಿಷಯ ಬೇಕರಿಯವರು ನಿಮಗೆ ಹೇಳುವುದಿಲ್ಲಾ!ಹಾಗಾಗಿ ಸಸ್ಯಹಾರಿಗಳಿಗೆ ಗೊತ್ತಿಲ್ಲಾ!!

ಇನ್ನು ಈ ಬಿಯರ್ ಹಾಗೂ ವ್ಯೆನ್ ಬಣ್ಣಕ್ಕೆ ಮಾರುಹೋಗದ ಪಾನ ಪ್ರಿಯರಿಲ್ಲಾ! ಅದರೆ ಇದಕ್ಕೆ ಈ ಬಣ್ಣಹೇಗೆ ಬಂತು, ಮೀನಿನ ಪಿತ್ತಚೀಲದಿಂದ ಸಂಸ್ಕರಿಸಿದ ಐಸಿನ್ ಗ್ಲಾಸ್ ನ್ನು ಉಪಯೋಗಿಸುತ್ತಾರೆ, ಪ್ರಪಂಚದಲ್ಲಿ ದೊರೆಯುವ ಏಲ್ಲಾ ಪ್ರಸಿದ್ದ ಬ್ರಾಂಡ್ ಗಳ ಬಿಯರ್ ವ್ಯೆನ್ ಗಳಲ್ಲಿ ಇದರ ಉಪಯೋಗವಾಗುತ್ತದೆ.

ಇನ್ನು ಮೇಲಿನ ಜಂಕ್ ಫುಡ್ ಗಳನ್ನೆಲ್ಲಾ ತಿಂದು ಅಕಸ್ಮಾತ್ ಆರೋಗ್ಯ ಹದಗೆಟ್ಟರೆ ಹೋಗುವುದು ವ್ಯೆದ್ಯರ ಬಳಿ, ಮಾತ್ರೆ ಬರೆದು ಕೊಟ್ಟರೆ ಸರಿ!! ಕ್ಯಾಪ್ಸೂಲ್ ಬರೆದುಕೊಟ್ಟು ಅದನ್ನು ನೀವು ತೆಗೆದುಕೊಂಡರೆ ನೀವು ಮಾಂಸಹಾರಿಗಳೆ! ಏಕೆ ಗೊತ್ತೆ? ಕ್ಯಾಪ್ಸೂಲ್‍ಗಳ ಹೊರಗಡೆಯ ಕವಚವನ್ನು ‘ಜಿಲೆಟಿನ್”ನಿಂದ ಮಾಡಿರುತ್ತಾರೆ, ಈ ಜಿಲೆಟಿನನ್ನು ಪ್ರಾಣಿಗಳ ಮೂಳೆ, ಮೃದುವಾದ ಎಲುಬು ಹಾಗೂ ಸ್ನಾಯುಗಳಿಂದ ಹಾಗೂ ಮುಖ್ಯವಾಗಿ ಹಂದಿ ಚರ್ಮದಿಂದ ಸಂಸ್ಕರಿಸಿ ತೆಗೆಯುತ್ತಾರೆ.ಸಸ್ಯಹಾರಿಗಳನ್ನು ಗಮನದಲ್ಲಿಟ್ಟುಕೊಂಡು ಈಗ ಸಸ್ಯಜನಿತ ಕ್ಯಾಪ್ಸೂಲ್‍ಗಳು ಬರುತ್ತಿದೆಯಾದರು ಜಿಲೆಟಿನ್ ಕ್ಯಾಪ್ಸೂಲ್‍ಗಿಂತ ಇದರ ಬೆಲೆ ಜಾಸ್ತಿಯಾಗಿರುವುದರಿಂದ ಔಷದತಯರಿಕಾ ಕಂಪೆನಿಗಳು ಸಸ್ಯಜನಿತ ಕ್ಯಾಪ್ಸೂಲ್‍ಗಳನ್ನು ಉಪಯೋಗಿಸುವುದಿಲ್ಲಾ. ನೀವು ಸಸ್ಯಹಾರಿಗಳಾಗಿದ್ದು ವ್ಯೆದ್ಯರ ಬಳಿ ಹೋದಾಗ ಬರಿ ಮಾತ್ರೆಗಳನ್ನು ಮಾತ್ರ ಬರೆಯಲು ಹೇಳಿ. ಔಷದಿಗಳು ಕ್ಯಾಪ್ಸೂಲ್ ಹಾಗೂ ಮಾತ್ರೆ ಏರಡು ರೂಪದಲ್ಲೂ ಸಿಗುತ್ತದೆ, ಈ ಜಿಲೆಟಿನ್‍ನ್ನು ರುಚಿರುಚಿಯಾದ ಬಣ್ಣಬಣ್ಣದ ಮೃದುವಾದ “ಜೆಲ್ಲಿ”ಗಳಲ್ಲೂ ಸಹ ಉಪಯೋಗಿಸುತ್ತಾರೆ, ಮೃದುವಾದ ಜೆಲ್ಲಿಗಳನ್ನು ಅಗೆಯುವುದೆಂದರೆ ಕೆಲವರಿಗೆ ಏಲ್ಲಿಲ್ಲದ ಅನಂದ!! ಅದರೆ ಈಗ ಸಸ್ಯಜನಿತ ಪಿಷ್ಟದಿಂದ ಮಾಡಿದ ಜೆಲ್ಲಿಗಳು ಬರುತ್ತಿದೆ, ಯಾವುದಕ್ಕೂ ಒಮ್ಮೆ ಲೇಬಲ್‍ಗಳ ಮೇಲೆ ಕಣ್ಣಾಡಿಸಿ!!

ಇದೆಲ್ಲಾ ತಿಳಿದಿರುವುದರಿಂದಲೇ ಜ್ಯೆನ್ ಸಮುದಾಯದವರು ರೆಸ್ಟೋರೆಂಟ್‍ಗಳಿಗೆ ಹೋದರೆ, ಆಥವ ವಿಮಾನ ಪ್ರಯಾಣಮಾಡುವಗ ಜ್ಯೆನ್ ಫುಡ್ ಎಂದೇ ಕೇಳಿಪಡೆಯುತ್ತಾರೆ, ಎಕೆಂದರೆ ಅವರು ಅಪ್ಪಟ ಸಸ್ಯಹಾರಿಗಳು. ಹಾಗೂ ಈ ಜ್ಯೆನ್ ಆಹರಗಳಲ್ಲಿ ಮಾಂಸಜನಿತ ಅಂಶಗಳನ್ನು ಉಪಯೋಗಿಸುವುದಿಲ್ಲಾ!! ಸಸ್ಯಹಾರ ಶುದ್ದ ಹಾಗೂ ಸುರಕ್ಷಿತ ಎಂದು ತಿನ್ನುವ ಸಸ್ಯಹಾರ ಪದಾರ್ಥಗಳಲ್ಲಿ ನಮಗೆ ಗೊತ್ತಿಲ್ಲದಂತೆ ಮಾಂಸಹಾರದ ಅಂಶಗಳು ಅಡಗಿ ಕುಳಿತಿರುತ್ತದೆ. ಇಗ ನೀವು ಸಸ್ಯಹಾರಿಗಳೋ, ಮಾಂಸಸ್ಯಹಾರಿಗಳೊ ನೀವೆ ಯೋಚಿಸಿ!!

ಪ್ರಕಾಶ್.ಕೆ.ನಾಡಿಗ್
ಶಿವಮೊಗ್ಗ