ನೇತಾಜಿ ಸಾವು: ಜಪಾನ್ ದಾಖಲೆ ಬಯಲು ಮತ್ತೂಂದು ಹೊಸ ತಿರುವು

0
770

 

ಲಂಡನ್:  ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಸಾವಿನ ಕುರಿತ ದಾಖಲೆಗಳನ್ನು ಬಹಿರಂಗಗೊಳಿಸಬೇಕು ಎಂಬ ಬಾರತೀಯರ ಕೂಗಿಗೆ ಸ್ಪಂದನೆ ಸಿಕ್ಕಿದೆ.

1956ರ ಜನವರಿಯಲ್ಲಿ ಈ ತನಿಖಾ ವರದಿಯನ್ನು ಜಪಾನ್ ಸರ್ಕಾರದ ವತಿಯಿಂದ ಪೂರ್ಣಗೊಳಿಸಿ ಅಲ್ಲಿನ ಭಾರತೀಯ ರಾಯಭಾರಿ ಕಚೇರಿಗೆ ಸಲ್ಲಿಸಲಾಗಿತ್ತು. ಆದರೆ ಇಲ್ಲಿಯವರೆಗೂ ಅದು ಗೌಪ್ಯ ದಾಖಲೆ ಎಂದು ಪರಿಗಣಿಸಲಾಗಿತ್ತು. ಇದೇ ಮೊದಲ ಬಾರಿಗೆ ಈಗ “ದಿ| ಸುಭಾಷ್ ಚಂದ್ರ ಬೋಸ್ ಅವರ ಸಾವಿನ ಕಾರಣಗಳು ಮತ್ತು ಇತರ ವಿಷಯಗಳು’ ಹೆಸರಿನ ವರದಿಯನ್ನು ಬಹಿರಂಗಪಡಿಸಲಾಗಿದೆ ಎಂದು ನೇತಾಜಿ ದಾಖಲೆಗಳನ್ನು ಬಹಿರಂಗಪಡಿಸಲೆಂದೇ ಇರುವ ಬ್ರಿಟನ್ ಮೂಲದ Bosefiles.info ಎಂಬ ವೆಬ್ಸೈಟ್ ಹೇಳಿದೆ.

ನೇತಾಜಿ ಸುಭಾಷ್ಚಂದ್ರ ಬೋಸ್ ಅವರು 1945ರ ಆಗಸ್ಟ್ 18ರಂದು ತೈವಾನ್ನಲ್ಲಿ ನಡೆದ ವಿಮಾನ ಅವಘಡದಲ್ಲಿ ಅಸುನೀಗಿದರು ಎಂದು ಜಪಾನ್ ಸರ್ಕಾರವು ಬಹಿರಂಗಗೊಳಿಸಿರುವ 60 ವರ್ಷ ಹಳೆಯ ಸರ್ಕಾರಿ ದಾಖಲೆ ತಿಳಿಸಿದೆ. ಇದರಿಂದಾಗಿ ನೇತಾಜಿ ಬದುಕಿದ್ದಾರೆಯೇ ಇಲ್ಲವೇ ಎಂಬ ಚರ್ಚೆ ಮತ್ತೂಂದು ತಿರುವು ಪಡೆದುಕೊಂಡಿದೆ.

ತೈವಾನ್ನಲ್ಲಿ 1945ರ ಆಗಸ್ಟ್ 18ರಂದು ನೇತಾಜಿ ಅವರಿದ್ದ ವಿಮಾನ ಅಪಘಾತಕ್ಕಿಡಾಯಿತು ಅವರು ತೈಪೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಅದೇ ದಿನ ಸಂಜೆ ಅಸುನೀಗಿದರು .  ವರದಿಯು ಜಪಾನಿ ಭಾಷೆಯಲ್ಲಿ 7 ಪುಟ ಹಾಗೂ ಅದರ ಆಂಗ್ಲಭಾಷಾ ತರ್ಜುಮೆ 10 ಪುಟದಷ್ಟಿದೆ. ಎಂದು ಇದರಲ್ಲಿ ತಿಳಿಸಲಾಗಿದೆ.

“ಟೇಕಾಫ್ ಆದ ಕೆಲವೇ ಹೊತ್ತಿನಲ್ಲಿ ಅದು ನೆಲಕ್ಕಪ್ಪಳಿಸಿತು. ಆಗ ನೇತಾಜಿ ಗಂಭೀರವಾಗಿ ಗಾಯಗೊಂಡಿದ್ದರು. ಮಧ್ಯಾಹ್ನ 3 ಗಂಟೆಗೆ ತೈಪೇ ಸೇನಾ ಆಸ್ಪತ್ರೆಯ ನ್ಯಾನ್ಮನ್ ಶಾಖೆಗೆ ಅವರನ್ನು ಚಿಕಿತ್ಸೆಗಾಗಿ ದಾಖಲಿಸಲಾಯಿತು. ಸಂಜೆ 7 ಗಂಟೆಗೆ ಅವರು ಸಾವನ್ನಪ್ಪಿದರು. ಆಗಸ್ಟ್ 22ರಂದು ತೈಪೇ ನಗರಪಾಲಿಕೆ ಚಿತಾಗಾರದಲ್ಲಿ ಅವರ ಅಂತ್ಯಕ್ರಿಯೆ ನೆರವೇರಿಸಲಾಯಿತು’ ಎಂದು ದಾಖಲೆಯಲ್ಲಿ ತಿಳಿಸಲಾಗಿದೆ.

ಬ್ರಿಟನ್ನ ವೆಬ್ಸೈಟ್  ವರದಿಯು 1956ರಲ್ಲಿ ಅಂದಿನ ಪ್ರಧಾನಿ ಜವಾಹರಲಾಲ್ ನೆಹರು ರಚಿಸಿದ್ದ ಶಾ ನವಾಜ್ ಖಾನ್ ನೇತೃತ್ವದ ತನಿಖಾ ಸಮಿತಿಯ ವರದಿಯನ್ನು ಅನುಮೋದಿಸಿದಂತಿದೆ ಎಂದು ಹೇಳಿದೆ.

ವಿಮಾನಾಪಘಾತ, ಸಾವು ಸಂಭವಿಸಿದ್ದು ಹೇಗೆ?: ವಿಮಾನವು ಟೇಕಾಫ್ ಆಗಿ 20 ಮೀ. ಮೇಲಕ್ಕೆ ಹಾರಿತ್ತು. ಆಗ ಅದರ ಎಡ ರೆಕ್ಕೆಯ ನೋದಕದ ಒಂದು ದಳವು ಮುರಿಯಿತು. ಎಂಜಿನ್ ವೈಫಲ್ಯಕ್ಕೀಡಾಯಿತು. ವಿಮಾನವು ಸಮತೋಲನ ಕಳೆದುಕೊಂಡು ಓಲಾಡತೊಡಗಿ ಏರ್ಪೋರ್ಟ್ನ ಒಂದು ಭಾಗದಲ್ಲಿ ಪತನಗೊಂಡಿತು. ಬೋಸ್ ಅವರ ಮೈಗೆಲ್ಲ ಬೆಂಕಿ ತಗುಲಿತ್ತು. ಮೈಗೆ ಬೆಂಕಿ ಹತ್ತಿಕೊಂಡ ಅವಸ್ಥೆಯಲ್ಲೇ ಅವರು ವಿಮಾನದಿಂದ ಹೊರಬಂದರು.  ಹಬೀಬುರ್ ರೆಹಮಾನ್ ಮತ್ತು ಇತರ ಪ್ರಯಾಣಿಕರು ಬೋಸ್ ಅವರ ಸಮವಸ್ತ್ರವನ್ನು ತೆಗೆದರು. ಆದಾಗ್ಯೂ ಅವರ ದೇಹ ಸಂಪೂರ್ಣ ಗಾಯಗಳಿಂದ ಸುಟ್ಟಿತ್ತು.

ಮಧ್ಯಾಹ್ನ 3ಕ್ಕೆ ಆಸ್ಪತ್ರೆಗೆ ಬಂದ ನಂತರ ಅವರಿಗೆ ಪ್ರಜ್ಞೆ ಇತ್ತು. 7 ಗಂಟೆಯವರೆಗೆ ರೆಹಮಾನ್ ಅವರ ಜತೆ ಮಾತನಾಡಿದ್ದರು. ಬಳಿಕ ಅವರ ಪ್ರಜ್ಞೆ ಹೋಯಿತು. ಬಳಿಕ ಹಲವಾರು ಚುಚ್ಚುಮದ್ದುಗಳ, ಎದೆ ಒತ್ತುವಿಕೆ, ಕೃತಕ ಉಸಿರಾಟ ನೀಡಿಕೆ ಯತ್ನದ ಹೊರತಾಗ್ಯೂ ಅವರು ಬದುಕುಳಿಯಲಿಲ್ಲ.

ಅವರ ಸಾವಿನ ಸಂದರ್ಭದಲ್ಲಿ ಮಿಲಿಟರಿ ಸರ್ಜನ್ ತಯೋಶಿ ತ್ಸುರುತಾ,  ರೆಹಮಾನ್, ಭಾಷಾ ಸಂವಹನಕಾರ ನಕಾಮುರಾ ಹಾಗೂ ಒಬ್ಬ ಭದ್ರತಾ ಸಿಬ್ಬಂದಿ ಇದ್ದರು ಎಂದು ವರದಿ ವಿವರಿಸಿದೆ.