ಇನ್ನು ನೀರು ಬಿಡಲು ಸಾಧ್ಯವಿಲ್ಲ: ಸೋಮವಾರದ ಕಾವೇರಿ ಸಭೆಯಲ್ಲಿ ಕರ್ನಾಟಕ ವಾದ

0
854

ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಮೇಲುಸ್ತುವಾರಿ ಸಮಿತಿಯ ಮಹತ್ವದ ಸಭೆ ನಾಳೆ ನಡೆಯಲಿದೆ. ಸುಪ್ರೀಂಕೋರ್ಟ್ ಸೂಚನೆ ಪಾಲಿಸಲಾ ಗಿದ್ದು, ಇನ್ನು ಮುಂದೆ ನೀರು ಬಿಡಲು ಸಾಧ್ಯವಿಲ್ಲ ಎಂಬ ಅಂಶವನ್ನು ಮನದಟ್ಟು ಮಾಡಿಕೊಡಲು ಸರಕಾರ ಸಕಲ ಸಿದ್ಧತೆ ಮಾಡಿಕೊಂಡಿದೆ.

ಈ ಹಿನ್ನೆಲೆ ರಾಜ್ಯ ಸರ್ಕಾರ ಕಾವೇರಿ ಭಾಗದ ಅಂತ ರ್ಜಲ ಸ್ಥಿತಿ, ಜಲಾಶಯಗಳಲ್ಲಿ ನೀರಿನ ಸ್ಥಿತಿ ಮತ್ತು ಮಳೆ ಪ್ರಮಾಣದ ಬಗ್ಗೆ ಸಮಿತಿಯ ಮುಂದೆ ವಾದ ಸಿದ್ದವಾಗಿದೆ.

ಹಾಗೆಯೇ ಇದೇ ವೇಳೆ ತಮಿಳುನಾಡಿನ ವಾಸ್ತವ ಪರಿಸ್ಥಿತಿಯನ್ನೂ ಸಹ ಮೇಲುಸ್ತುವಾರಿ ಸಮಿತಿಗೆ ಮನ ವರಿಕೆ ಮಾಡಿಕೊಡುಲು ಸರ್ಕಾರ ಮುಂದಾಗಲಿದ್ದು, ಕಾವೇರಿ ನದಿಯಿಂದ ತಮಿಳುನಾಡಿಗೆ ನೀರು ಬಿಡುವು ದರಿಂದ ಕರ್ನಾಟಕ ಎದುರಿಸುವ ಸಂಕಷ್ಟವನ್ನು ಬಗ್ಗೆ ಮನವರೆಕೆ ಮಾಡಿಕೊಡಲಿದೆ ಎಂದು ತಿಳಿದುಬಂದಿದೆ.

ಈ ನಡುವೆ ಈಗಾಗಲೇ ಸುಪ್ರೀಂಕೋರ್ಟ್ ಸೆ.20 ರವರೆಗೆ ಪ್ರತಿದಿನ 12 ಸಾವಿರ ಕ್ಯೂಸೆಕ್‌ ನೀರು ಬಿಡು ವಂತೆ ಕರ್ನಾಟಕಕ್ಕೆ ಆದೇಶಿಸಿದ್ದು, ಸೆ.20ರಂದು ಮತ್ತೆ ಈ ಬಗ್ಗೆ ವಿಚಾರಣೆ ನಡೆಯಲಿದೆ.ಇಲ್ಲಿಯು ಸಹ ಕರ್ನಾಟಕದ ಕಾವೇರಿ ನದಿ ಭಾಗದ ಜನರ ಸಂಕಷ್ಟ ಹಾಗೂ ಪರಿಸ್ಥಿತಿ ಬಗ್ಗೆ ಮನವರಿಕೆ ಮಾಡಲು ಸರ್ಕಾರ ಸಿದ್ದತೆ ನಡೆಸುತ್ತಿದೆ.

ಕಾವೇರಿ ಕೊಳ್ಳ ವ್ಯಾಪ್ತಿಯ ಕರ್ನಾಟಕದಲ್ಲಿ ಅಂತರ್ಜಲ ಮಟ್ಟ ಪಾತಾಳಕ್ಕೆ ಕುಸಿದಿದೆ. ಇನ್ನೊಂದೆಡೆ ತಮಿಳು ನಾಡಿನಲ್ಲಿ ಅಂತರ್ಜಲ ಮಟ್ಟ ಉತ್ತಮವಾಗಿದೆ ಎಂಬ ಅಂಶವನ್ನು ಮೇಲುಸ್ತುವಾರಿ ಸಮಿತಿಯ ಗಮನಕ್ಕೆ ತರಲು ತೀರ್ಮಾನಿಸಲಾಗಿದೆ.

ಇದರ ಜತೆಗೆ ಕಾವೇರಿ ಕೊಳ್ಳ ವ್ಯಾಪ್ತಿಯಲ್ಲಿ (ಕೇರಳ ಸೇರಿದಂತೆ) ಇದುವರೆಗೆ ಬಿದ್ದಿರುವ ಮಳೆ ಪ್ರಮಾಣ, ಜಲಾಶಯಗಳಲ್ಲಿ ತೀರಾ ಕೆಳಮಟ್ಟದಲ್ಲಿರುವ ನೀರು ಸಂಗ್ರಹ, ಈ ಪೈಕಿ ಕುಡಿಯಲು ಅಗತ್ಯವಿರುವ ನೀರು, ನೀರಾವರಿಗೆ ಬೇಕಾದ ನೀರು ಮುಂತಾದ ಅಂಶಗಳನ್ನು ಅಂಕಿ ಅಂಶಗಳ ಸಹಿತ ಸಮಿತಿಗೆ ತಿಳಿಸಲಿದೆ.