ನ್ಯಾಯಾಲಯಗಳ ಮರು ನಾಮಕರಣ ಮಾಡಲು ಕೇಂದ್ರ ಸಂಪುಟ ನಿರ್ಧರಿಸಿದೆ.

0
777

ತೀವೃ ಬೇಡಿಕೆಗಳ ಮಧ್ಯೆ, ಕೇಂದ್ರ ಸರಕಾರ ಸಂಸತ್ ಕಾಯಿದೆ ಮೂಲಕ ಎರಡು ಹೈಕೋರ್ಟ್‌ಗಳ ಹೆಸರನ್ನು ಬದಲಾಯಿಸಲು ಮುಂದಾಗಿದೆ.

ಬಾಂಬೆ ಮತ್ತು ಮದ್ರಾಸ್ ಹೈಕೋರ್ಟ್‌ಗಳ ಹೆಸರನ್ನು ಆ ನಗರಗಳ ಈಗಿನ ಹೆಸರಿಗೆ ಸಂಬಂಧಿಸಿದಂತೆ ಬದಲಾಯಿಸುವ ದಿಶೆಯಲ್ಲಿ ಕಾನೂನು ಸಚಿವಾಲಯ ತಿದ್ದುಪಡಿ ಮಸೂದೆಯನ್ನು ಸಿದ್ಧಪಡಿಸುತ್ತಿದೆ.

ಮುಂದಿನ ಬಜೆಟ್‌ ಅಧಿವೇಶನದಲ್ಲಿ ಈ ಮಸೂದೆ ಮಂಡನೆಯಾಗಲಿದೆ. ಬಳಿಕ ಇವುಗಳ ಹೆಸರು ಮುಂಬೈ ಹೈಕೋರ್ಟ್ ಮತ್ತು ಚೆನ್ನೈ ಹೈಕೋರ್ಟ್ ಎಂದು ಬದಲಾಗಲಿದೆ. 1861ರಲ್ಲಿ ಜಾರಿಗೆ ಬಂದಿದ್ದ ಕಾನೂನಿನಂತೆ ಕೋರ್ಟ್ಗಳ ಹೆಸರನ್ನು ಮುಂದುವರಿಸಿಕೊಂಡು ಬರಲಾಗಿತ್ತು.

1990 ರ ದಶಕದಲ್ಲಿ ಈ ಎರಡು ಮಹಾನಗರಗಳು ಮರುನಾಮಕರಣವಾದ ನಂತರ  ನ್ಯಾಯಾಲಯಗಳ ಹೆಸರನ್ನು ಸಹ ಮುಂಬೈ ಹೈಕೋರ್ಟ್ ಮತ್ತು ಚೆನ್ನೈ ಹೈಕೋರ್ಟ್ ಎಂದು ಬದಲಾಯಿಸುವಂತೆ ಬೇಡಿಕೆಗಳು ಕೇಳಿ ಬರುತ್ತಿವೆ.