ಪ್ರೀತಿ ಪತ್ನಿಯ ಶವ ಹೊತ್ತು 10ಕಿ.ಮೀ. ನಡೆದ ಪತಿಗೆ ಮಾಂಝಿಗೆ ಬಹ್ರೇನ್ ಪ್ರಧಾನಿ ನೆರವು

0
1621

ಮನಾಮ: ದಾನ ಮಜ್ಹಿ ಎಂಬಾತನ ಪತ್ನಿ ಅಮಂಗ್ ದೇಸಾಯ್ ನಿನ್ನೆ ರಾತ್ರಿ ಕ್ಷಯ ರೋಗದಿಂದ ಭವಾನಿ ಪಟ್ನ ಜಿಲ್ಲಾ ಕೇಂದ್ರ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಳು. ಆದರೆ, ಈಕೆಯ ಶವವನ್ನು ಮನೆಗೆ ಕೊಂಡೊಯ್ದು ಅಲ್ಲಿಂದ ಸ್ಮಶಾನಕ್ಕೆ ಸಾಗಿಸಲು ಈತ ಎಷ್ಟೇ ಕಾಡಿ ಬೇಡಿದರೂ ಒಂದೇ ಒಂದು ವಾಹನ ಸಿಗಲಿಲ್ಲ. ಇದರಿಂದ ನೊಂದ ಈತ ತನ್ನ ಹೆಗಲ ಮೇಲೆಯೇ ಮೆಚ್ಚಿನ ಮಡದಿಯ ಶವವನ್ನು ಹೊತ್ತುಕೊಂಡು ಮಗಳೊಂದಿಗೆ 10 ಕಿ.ಮೀ. ದೂರದಲ್ಲಿರುವ ತನ್ನ ಮನೆಯತ್ತ ನಡೆದಿದ್ದಾನೆ.

ಆಂಬುಲೆನ್ಸ್ ಗೆ ನೀಡಲು ಹಣವಿಲ್ಲದೆ, ಸರಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟ ತನ್ನ ಹೆಂಡತಿಯ ಶವವನ್ನು ಹೆಗಲಲ್ಲಿ ಹೊತ್ತುಕೊಡು ಮಗಳೊಂದಿಗೆ 10 ಕಿ. ಮೀ. ನಡೆದುಕೊಂದು ಹೋದ ಗ್ರಾಮೀಣ ಒಡಿಸಾದ ನಿವಾಸಿ ದಾನ ಮಾಂಝಿಯ ಕತೆ ಇಡೀ ಜಗತ್ತಿನ ಅಂತಃಕರಣವನ್ನೇ ಕದಡಿದಂತಿದೆ.

ಈ ಸಿದ್ದಿ ಕೇಳಿ ಮನ ಮಿಡಿದಿರುವ ಬಹ್ರೇನ್ ನ ಪ್ರಧಾನಿ ಖಲೀಫ ಬಿನ್ ಸಲ್ಮಾನ್ ಅಲ್ ಖಲೀಫ ಮಾಂಝಿಗೆ ನೆರವು ನೀಡಲು ಮುಂದೆ ಬಂದಿದ್ದಾರೆ.

ಈ ಸುದ್ದಿ ಕೇಳಿ ಪ್ರಧಾನಿ ಎಷ್ಟು ದುಃಖಿತರಾದರೆಂದರೆ, ಈ ವ್ಯಕ್ತಿಗೆ ತಾನು ಏನಾದರೂ ಸಹಾಯ ಮಾಡಬೇಕು ಎಂದು ನಿರ್ಧರಿಸಿದ್ದಾರೆ ಎಂದು ಬಹ್ರೇನ್ ನ ದೈನಿಕ ಭಾರತೀಯ ರಾಯಭಾರ ಕಛೇರಿಯನ್ನು ಸಂಪರ್ಕಿಸಿದ್ದು. ಮಾಂಝಿಗೆ ನೀಡಲು ಹಣ ನೀಡಿದ್ದಾರೆ ಎಂದು  ಅವರು ತಿಳಿಸಿದೆ.