ಪತ್ನಿ ತವರಿಗೆ ಶಿಕ್ಷೆ ಹನುಮನಿಗೆ

0
1517

hanumanta

ಹಬ್ಬ ಹರಿದಿನಕ್ಕೆ ಅಥವಾ ಹೆರಿಗೆಗೆ ಅಂತಾ ಪತ್ನಿ ತವರು ಮನೆಗೆ ಹೋದರೆ ಸಾಕು, ಬೆಕ್ಕು ಇಲ್ಲದ ಮನೆಯಲ್ಲಿ ಇಲಿ ಲಾಗ ಹೊಡೀತು ಅನ್ನುವ ಹಾಗೆ ಪಾರ್ಟಿ ಮಾಡಿ ಮಜಾ ಉಡಾಯಿಸುವ ಅದೆಷ್ಟೊ ಗಂಡಂದಿರು ಇದ್ದಾರೆ. ಆದರೆ ಇಂದೋರನಲ್ಲಿ ಪತಿಮಹಾಶಯನೊಬ್ಬ ತವರಿಗೆ ಹೋದ ಪತ್ನಿ ಮರಳಿ ಬರಲಿಲ್ಲ ಎಂದು ಆಜಂನೇಯ ಸ್ವಾಮಿ ವಿಗ್ರಹವನ್ನೇ ಒಡೆದು ಹಾಕಿದು ಹಾಕಿ ರಾದ್ಧಾಂತ ಸೃಷ್ಟಿಸಿ ದ್ದಾನೆ. ನಡೆದದ್ದೇನು?: ಇಂದೋರ್‌ನ ಪಾಲ್ಡಾ ಪ್ರದೇಶದ ಮನೋಜ್ ಬಂಜಾರಾ(37) ಪತ್ನಿ ತವರು ಸೇರಿ ನಾಲ್ಕು ತಿಂಗಳ ಕಳೆದಿತ್ತು. ಮನೋಜ್ ಹಲವು ಬಾರಿ ಮನೆಗೆ ಮರಳುವಂತೆ ಮನವಿ ಮಾಡಿ ಕೊಂಡರು ಆಕೆ ಇತನ ಮಾತಿಗೆ ಸೊಪ್ಪು ಹಾಕಿರಲಿಲ್ಲ.

ಬಳಿಕ ಮನೋಜ್ ಮಾನಸಿಕ ಸ್ಥಿಮಿತ ಕಳೆದುಕೊಂಡವನಂತಾಗಿ, ಪಾಲ್ಡಾದಲ್ಲಿದ್ದ ಆಂಜನೇಯ ಸ್ವಾಮಿ ದೇವಾಲಯಕ್ಕೆ ಹೋಗಿ ಏನಾದರೂ ಪವಾಡ ಮಾಡಿ ಪತ್ನಿಯನ್ನು ಮರಳಿ ಬರುವಂತೆ ಮಾಡು ಎಂದು ಬೇಡಿಕೊಂಡಿದ್ದಾನೆ. ಅದು ಫಲಿಸದೇ ಇದ್ದಾಗ, ಭಾನುವಾರ ಹನುಮಂತನ ವಿಗ್ರಹವನ್ನು ಒಡೆದು ಹಾಕಿದ್ದಾನೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿ ಆರ್‌ಎಸ್‌ಎಸ್ ಧರ್ಮ ಜಾಗರಣ ವೇದಿಕೆಯ ಕಾರ್ಯ ಕರ್ತರು ಮನೋಜನಿಗೆ ಚೆನ್ನಾಗಿ ತದುಕಿ, ಪೊಲೀಸರಿಗೆ ಒಪ್ಪಿಸಿದ್ದಾರೆ.