ಪದಕದ ಖಾತೆ ತೆರೆಸಿದ ಕುಸ್ತಿಪಟು ಸಾಕ್ಷಿ ಮಾಲಿಕ್ ಐತಿಹಾಸಿಕ ಸಾಧನೆ

0
1150

ರಿಯೋ ಡಿ ಜನೈರೋ: ಕಡೆಗೂ ಭಾರತದ ಪದಕದ ಕೊರತೆ ನೀಗಿಸುವಲ್ಲಿ ಮಹಿಳಾ ಕುಸ್ತಿಪಟು ಸಾಕ್ಷಿ ಮಾಲಿಕ್ ಯಶಸ್ವಿಯಾಗಿದ್ದಾರೆ. ರಿಯೋ ಒಲಿಂಪಿಕ್ ಕ್ರೀಡಾಕೂಟದ ಪದಕ ಗೆದ್ದ ರಾಷ್ಟ್ರಗಳ ಪಟ್ಟಿಯಲ್ಲಿ ಈಗ ಭಾರತದ ಹೆಸರೂ ಸೇರ್ಪಡೆಗೊಂಡಿದೆ. ಮಹಿಳೆಯರ 58 ಕೆ.ಜಿ. ವಿಭಾಗದ ಫ್ರೀ ಸ್ಟೈಲ್ ಕುಸ್ತಿಯಲ್ಲಿ ಸಾಕ್ಷಿ ಮಾಲಿಕ್ ಕಂಚಿನ ಪದಕ ಗೆದ್ದು ದೇಶವೇ ಸಂಭ್ರಮಿಸುವಂತೆ ಮಾಡಿದ್ದಾರೆ.

ಕೆಚ್ಚೆದೆಯಿಂದ ಕಾದಾಡಿದ ಸಾಕ್ಷಿ ರ್ಕಿಗಿಸ್ತಾನದ ಐಸುಲು ಟಿನಿಬೇಕೋವಾ ವಿರುದ್ಧ 8-5ರಿಂದ ಗೆಲುವು ಸಾಧಿಸಿ ಕಂಚಿನ ಪದಕಕ್ಕೆ ಕೊರಳೊಡ್ಡಿದರು. ಪೋಡಿಯಂ ನಿಂತು ಸಂಭ್ರಮಿಸಿದರು.

ಒಲಂಪಿಕ್ಸ್ ಮಹಾ ಕೂಟ ಆರಂಭವಾಗಿ ಹನ್ನೆರಡು ದಿನಗಳು ಕಳೆದು, ಬಹುತೇಕ ಕ್ರೀಡಾ ಪ್ರಕಾರಗಳ ಸ್ಪರ್ಧೆ ಮುಗಿದರೂ ಒಂದೇ ಒಂದು ಪದಕ ಗೆಲ್ಲಲು ಸಾಧ್ಯವಾಗಲಿಲ್ಲವಲ್ಲ ಎಂದು ಕೊರಗುತ್ತಿದ್ದ ಕ್ರೀಡಾಭಿಮಾನಿಗಳಲ್ಲಿ ಸಂತಸ ಮೂಡಿಸುವಲ್ಲಿ ಸಾಕ್ಷಿ ಕಾರಣರಾಗಿದ್ದಾರೆ. ಸಾಕ್ಷಿಗೆ ದೇಶದ ಮೂಲೆ ಮೂಲೆಗಳಿಂದ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ.

Sakshi-Malik-Web

23ರ ಹರೆಯದ ಹರಿಯಾಣದ ಸಾಕ್ಷಿ ಮಾಲಿಕ್ ಈ ಪದಕ ಗೆಲ್ಲುವ ಮೂಲಕ ಹೊಸದೊಂದು ಇತಿಹಾಸ ನಿರ್ಮಿಸಿದ್ದಾರೆ. ವನಿತೆಯರ ಕುಸ್ತಿ ವಿಭಾಗದಲ್ಲಿ ಭಾರತಕ್ಕೆ ಚೊಚ್ಚಲ ಒಲಿಂಪಿಕ್ಸ್ ಪದಕ ಗೆದ್ದುಕೊಟ್ಟ ಕೀರ್ತಿಗೆ ಸಾಕ್ಷಿ ಸಾಕ್ಷ್ಯಾಗಿದ್ದಾರೆ. ಕುಸ್ತಿಯಲ್ಲಿಯೇ ಒಟ್ಟಾರೆ 5ನೇ ಪದಕ ಇದಾಗಿದ್ದರೂ, ಈ ಮೊದಲು ವನಿತೆಯರು ಗೆದ್ದಿರಲಿಲ್ಲ. ಈ ಸಾಧನೆ ಮಾಡಿದ ಹೆಮ್ಮೆ ಈಗ ಸಾಕ್ಷಿಯದ್ದಾಗಿದೆ.

ಸಾಕ್ಷಿ ಕ್ವಾರ್ಟರ್ ಫೈನಲ್?ನಲ್ಲಿ ಫೈನಲ್ ಪ್ರವೇಶಿಸಿದ್ದ ಕೊಬ್ಲೊವಾ ಝೊಲೊಬೋವ ವಿರುದ್ಧ ಸೋಲು ಕಂಡಿದ್ದರಿಂದ ಅವರಿಗೆ ರೆಪಿಚಾಜ್ (ಹೆಚ್ಚುವರಿ ಅವಕಾಶ) ಆಧಾರದ ಮೇಲೆ ಕಂಚಿನ ಪದಕಕ್ಕಾಗಿ ಹೋರಾಡುವ ಮತ್ತೊಂದು ಅವಕಾಶ ದೊರಕಿತು. ಈ ಅವಕಾಶದಲ್ಲಿ ಕೆಚ್ಚೆದೆಯ ಪ್ರದರ್ಶನ ನೀಡಿದ ಸಾಕ್ಷಿ ಕಡೆಗೂ ಕಂಚಿನ ಪದಕವನ್ನು ಕೊರಳಿಗೇರಿಸಿಕೊಂಡರು. ಕಂಚಿಗಾಗಿ ಎರಡು ಸ್ಪರ್ಧಿಗಳನ್ನು ಎದುರಿಸಿದ ಸಾಕ್ಷಿ ಮಾಲಿಕ್, ಕರ್ಗಿಸ್ತಾನದ ಎದುರಾಳಿಗೂ ಮೊದಲು ಮಂಗೋಲಿಯಾದ ಜಾಕ್ರೂನ್?ರನ್ನು 10-3ರಿಂದ ಸೋಲಿಸಿದರು. ಅದೇ ಚಾಮರ್??ನಲ್ಲಿ ಕಣಕ್ಕಿಳಿದ ಸಾಕ್ಷಿ ಪ್ರಬಲ ಸ್ಪರ್ಧಿ ರ್ಕಿಗಿಸ್ತಾನದ ಐಸುಲು ಟಿನಿಬೇಕೋವಾರನ್ನು ಸೋಲಿಸಿ ಪದಕ ತಮ್ಮದಾಗಿಸಿಕೊಂಡರು.

ಯಾರೀಕೆ ಸಾಕ್ಷಿ ಮಾಲಿಕ್?

64 ಕೆಜಿ ಭಾರದ 1.62 ಮೀಟರ್ ಎತ್ತರದ ಸಾಧಾರಣ ಅಥ್ಲೀಟ್ ಮೈಕಟ್ಟು ಹೊಂದಿರುವ ಸಾಕ್ಷಿ ಮಾಲಿಕ್ ಹರಿಯಾಣದ ರೋಹಟಕ್?ನವರು. 1992, ಸೆಪ್ಟೆಂಬರ್ 3 ಸಾಕ್ಷಿ ಹುಟ್ಟುದಿನ. ಸುದೇಶ್ ಮತ್ತು ಸುಕ್ಬೀರ್ ದಂಪತಿಯ ಮಗಳು ಸಾಕ್ಷಿ ಮಾಲಿಕ್. ತಂದೆ-ತಾಯಿ ಪೆÇ್ರೀತ್ಸಾಹದಿಂದ ಸಾಕ್ಷಿ ಇಂದು ಒಲಿಂಪಿಕ್ ಕಂಚಿನ ಪದಕ ಗೆದ್ದುಕೊಂಡಿದ್ದಾರೆ.

12 ವರ್ಷಗಳ ನಿರಂತರ ಅಭ್ಯಾಸದಿಂದ ಸಾಕ್ಷಿ ಈ ಪದಕ ಸಾಧನೆ ಮಾಡಲು ಸಾಧ್ಯವಾಗಿದೆ. ಈಶ್ವರ್ ದಾಹಿಯಾ ಸಾಕ್ಷಿ ಅವರ ಕೋಚ್. ಚೋಟು ರಾಮ್ ಸ್ಟೇಡಿಯಂ ಸಾಕ್ಷಿ ಅವರ ಅಭ್ಯಾಸದ ಅಖಾಡ. ಹೆಣ್ಮಗಳಾಗಿ ಸಾಕ್ಷಿ ಯುವಕರು ಅಭ್ಯಾಸ ನಡೆಸುವಲ್ಲಿ ಬರುವುದು ಸೂಕ್ತವಲ್ಲ ಎನ್ನುವ ಅನೇಕರ ಆಕ್ಷೇಪದ ನಡುವೆಯೂ ಕೋಚ್ ಸಹಕಾರದಿಂದ ಅಭ್ಯಾಸದಿಂದ ಈ ಸಾಧನೆ ಮಾಡಿ ತೋರಿಸಿದ್ದಾರೆ. ಯುವಕರು ನಾಚಿಕೊಳ್ಳುವಂತಹ ಪ್ರದರ್ಶನ ನೀಡಿ ಐತಿಹಾಸಿಕ ಸಾಧನೆಗೆ ಕಾರಣರಾಗಿದ್ದಾರೆ.

ಸಾಗಿಬಂದ ದಾರಿ

2010ರಲ್ಲಿ ನಡೆದ ಜೂನಿಯರ್ ವಿಶ್ವ ಚಾಂಪಿಯನ್?ಷಿಪ್?ನ 59ಕೆಜಿ ವಿಭಾಗದ ಕುಸ್ತಿಯಲ್ಲಿ ಜಯ ಸಾಧಿಸಿ, ಕಂಚು ಗೆದ್ದುಕೊಂಡಿದ್ದರು. ಆಗ ಸಾಕ್ಷಿಗೆ 18 ವರ್ಷ.

2014ರಲ್ಲಿ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಕುಸ್ತಿಗೆ ಪದಾರ್ಪಣೆ ಮಾಡಿ, ಡೇವ್ ಸುಲ್ತಾಜ್ ಅಂತಾರಾಷ್ಟ್ರೀಯ ಕುಸ್ತಿ ಟೂನಿಯ 60 ಕೆಜಿ ವಿಭಾಗದಲ್ಲಿ ಸ್ವರ್ಣ ಪದಕ ಗೆದ್ದುಕೊಂಡರು.

2014, ಜುಲೈ- ಆಗಸ್ಟ್?ನಲ್ಲಿ ಗ್ಲಾಸ್? ಗೋನಲ್ಲಿ ನಡೆದ ಕಾಮನ್?ವೆಲ್ತ್ ಕ್ರೀಡಾಕೂಟದಲ್ಲಿ ವೃತ್ತಿಪರ ಅಂತಾರಾಷ್ಟ್ರೀಯ ಕುಸ್ತಿಪಟುವಾಗಿ ಪಾಲ್ಗೊಂಡಿದ್ದ ಸಾಕ್ಷಿ ಬೆಳ್ಳಿ ಗೆದ್ದುಕೊಂಡಿದ್ದರು.

ಟಾಷ್ಕೆಂಟ್?ನಲ್ಲಿ 2014, ಸೆಪ್ಟರಂಬರ್?ನಲ್ಲಿ ನಡೆದ ವಿಶ್ವ ಕುಸ್ತಿ ಚಾಂಪಿಯನ್?ಷಿಪ್?ನ ಕ್ವಾರ್ಟರ್ ಫೈನಲ್ ಪ್ರವೇಶಿಸಿ ನಿರ್ಗಮಿಸಿದರು.

2015, ಮೇ ತಿಂಗಳಲ್ಲಿ ದೋಹಾದಲ್ಲಿ ನಡೆದ ಏಷ್ಯನ್ ಹಿರಿಯರ ಕುಸ್ತಿ ಚಾಂಪಿಯನ್?ಷಿಪ್?ನಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದರು.

* 2016ರ ಜುಲೈನಲ್ಲಿ ನಡೆದ ಸ್ಪೇನಿಷ್ ಗ್ರಾಂಡ್ ಪ್ರಿ 60 ಕೆಜಿ ವಿಭಾಗದಲ್ಲಿ ಕಂಚಿನ ಪದಕ ಗೆದ್ದು, ಈಗ ರಿಯೋ ಒಲಿಂಪಿಕ್ಸ್?ನಲ್ಲಿ ಕಂಚು ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ.

12 ವರ್ಷಗಳ ಕಠಿಣ ಶ್ರಮದ ಪ್ರತಿಫಲ ಇದು, ಕನಸು ನನಸಾಗಿಸಿಕೊಂಡಿದ್ದೇನೆ’

Sakshi-Web

ರಿಯೋ ಡಿ ಜನೈರೋ: `ಹನ್ನೆರಡು ವರ್ಷಗಳ ಪರಿಶ್ರಮಕ್ಕೆ ಸಿಕ್ಕ ಪ್ರತಿಫಲ ಇದು. ನನಗಿಂತ ಹಿರಿಯರಾದ ಗೀತಾ ದೀದಿ ಲಂಡನ್ ಒಲಿಂಪಿಕ್ಸ್?ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದರು. ನಾನೀಗ ಪದಕ ಗೆದ್ದಿದ್ದೇನೆ. ಒಲಿಂಪಿಕ್ಸ್ ಮಹಿಳಾ ಕುಸ್ತಿಯಲ್ಲಿ ಪದಕ ಗೆದ್ದ ಮೊದಲ ಭಾರತೀಯೆ ನಾನಾಗುತ್ತೇನೆ ಎಂದು ಕನಸು-ಮನಸಿನಲ್ಲಿಯೂ ಅಂದುಕೊಂಡಿರಲಿಲ್ಲ’ ಹೀಗೆಂದು ಹೇಳಿದ್ದು ರಿಯೋ ಅಂಗಳದಲ್ಲಿ ಕಂಚಿನ ಪದಕ ಗೆದ್ದುಕೊಂಡ ಸಾಕ್ಷಿ ಮಾಲಿಕ್.

ರ್ಕಿಗಿಸ್ತಾನದ ಎದುರಾಳಿಯನ್ನು ಮಣಿಸಿ ಪದಕ ಗೆದ್ದುಕೊಂಡಿರುವ ಸಾಕ್ಷಿ ಬಳಿಕ ಮಾತನಾಡಿ ತಮ್ಮ ಖುಷಿ ಹಂಚಿಕೊಂಡರು. ಗ್ಲಾಸ್?ಗೋ ಕಾಮನ್ವೆಲ್ತ್ ಕ್ರೀಡಾಕೂಟ ಮತ್ತು ಇಂಚಿಯಾನ್ ಏಷ್ಯನ್ ಕ್ರೀಡಾಕೂಟದಲ್ಲಿ ಪದಕ ಗೆದ್ದಾಗ ತ್ರಿವರ್ಣ ಧ್ವಜ ಹಿಡಿದು ಸಂಭ್ರಮಿಸಬೇಕು ಅಂದು ಕೊಂಡಿದ್ದೆ. ಆದರೆ ಅದು ಸಾಧ್ಯವೇ ಆಗಿರಲಿಲ್ಲ. ಈ ಕೊರಗನ್ನು ರಿಯೋದಲ್ಲಿ ನೀಗಿಸಿಕೊಂಡಿದ್ದೇನೆ. ಪದಕ ಗೆದ್ದಾಗ ಮೊದಲು ನೆನಪಿಗೆ ಬಂದಿದ್ದೇ ನನ್ನ ದೇಶದ ಧ್ವಜ. ನಾನಂದುಕೊಂಡಂತೆ ಸಂಭ್ರಮಿಸಿದ್ದೇನೆ. ಮಹಿಳಾ ವಿಭಾಗದ ಕುಸ್ತಿಯಲ್ಲಿ ಭಾರತಕ್ಕೆ ಒಲಿಂಪಿಕ್ ಪದಕ ಗೆದ್ದು ಕೊಟ್ಟ ಮೊದಲ ಮಹಿಳೆ ನಾನು ಎಂದು ಹೇಳಿಕೊಳ್ಳಲು ಖಂಡಿತಾ ಖುಷಿಯಾಗುತ್ತದೆ ಎಂದಿದ್ದಾರೆ.

ಪಂದ್ಯದ ಆರಂಭದಲ್ಲಿ ಸ್ವಲ್ಪ ಮಟ್ಟಿಗೆ ಒತ್ತಡ ಇತ್ತು. ಆದರೆ ಅಂತಿಮ ಆರು ನಿಮಿಷಗಳ ಕದನದಲ್ಲಿ ನನ್ನ ಸಾಮಥ್ರ್ಯವನ್ನೆಲ್ಲ ಪ್ರಯೋಗಿಸುವ ನಿರ್ಧಾರಕ್ಕೆ ಬಂದೆ. ನನ್ನ ಆತ್ಮವಿಶ್ವಾಸವೂ ಜಾಸ್ತಿಯಾಗಿತ್ತು. ಏಕಾಗ್ರತೆಯಿಂದ ಬೇರೇನೂ ಯೋಚಿಸದೇ ಪ್ರಯತ್ನಿಸಿದೆ. ಅದರಲ್ಲಿ ಯಶಸ್ಸನ್ನೂ ಕಂಡುಕೊಂಡಿದ್ದೇನೆ ಎಂದಿರುವ ಸಾಕ್ಷಿ ಮಾಲಿಕ್, ಪಂದ್ಯದ ನೇರಪ್ರಸಾರ ನೋಡಿ ಸಂಭ್ರಮಿಸಿದ ಪ್ರತಿಯೊಬ್ಬ ಭಾರತೀಯರನ್ನು ಅಭಿನಂದಿಸಲು ಮರೆಯಲಿಲ್ಲ. ನಿಮ್ಮೆಲ್ಲರ ನಿರೀಕ್ಷೆ ಹುಸಿಯಾಗಿಸಲಿಲ್ಲ ಎನ್ನುವ ಖುಷಿ ನನಗಿದೆ ಎಂದಿದ್ದಾರೆ.