ಪಾಯಿಂಟ್ಸ್ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದ ಭಾರತ…

0
1341

ಕ್ರಿಕೆಟ್ ಅಂತರಾಷ್ಟ್ರೀಯ ಸಂಸ್ಥೆ ಐ.ಸಿ.ಸಿ ಇತ್ತೀಚೆಗೆ ಏಕದಿನ ಕ್ರಿಕೆಟ್ ರಾಂಕಿಂಗ್ ಅನ್ನು ಬಿಡುಗಡೆ ಮಾಡಿದ್ದು, ಭಾರತವು ಮೂರನೇ ಸ್ಥಾನದಲ್ಲಿ ಮುಂದುವರಿದಿದೆ, ವರ್ಲ್ಡ್ ಚಾಂಪಿಯನ್ ಆದ ಆಸ್ಟ್ರೇಲಿಯಾ ಮೊದಲನೇ ಸ್ಥಾನದಲ್ಲಿ ಭದ್ರವಾಗಿದೆ.

ಭಾರತಕ್ಕಿಂತ ಆಸ್ಟ್ರೇಲಿಯಾ 13 ಪಾಯಿಂಟ್ಸ್(123) ಹೆಚ್ಚು ಅಂಕ ಪಡೆದು ಅಗ್ರ ಸ್ಥಾನ ಹೊಂದಿದೆ, ಭಾರತವು 110 ಪಾಯಿಂಟ್ಸ್ ಹೊಂದಿದ್ದು, ನ್ಯೂಜಿಲ್ಯಾಂಡ್ 113 ಪಾಯಿಂಟ್ಸ್ ಪಡೆದು ಎರಡನೇ ಸ್ಥಾನ ಪಡೆದಿದೆ.

ದುರದೃಷ್ಟವೆಂಬಂತೆ ಯಾವ ಬೌಲರ್ ಕೂಡ ಐ.ಸಿ.ಸಿ ಬೌಲಿಂಗ್ ರಾಂಕಿಂಗ್ ನಲ್ಲಿ ಸ್ಥಾನ ಪಡೆದಿಲ್ಲ, ಆದರೆ ರವಿಚಂದ್ರನ್ ಅಶ್ವಿನ್ ರವರು 11 ನೇ ಸ್ಥಾನ ದಲ್ಲಿ ಮುಂದುವರೆದಿದ್ದಾರೆ.

     ಇನ್ನು ಬ್ಯಾಟಿಂಗ್ ವಿಭಾಗದಲ್ಲಿ ಎ.ಬಿ. ಡೇ ವಿಲಿಯರ್ಸ್ ಅಗ್ರ ಸ್ಥಾನ ಹೊಂದಿದ್ದು.ನಂತರದ ಸ್ಥಾನದಲ್ಲಿ ವಿರಾಟ್ ಕೊಹ್ಲಿ ಮುಂದುವರಿದ್ದಾರೆ.