ಪುಣೆ ಉದ್ಯಮಿ ‘ಗೋಲ್ಡ್‌ ಮ್ಯಾನ್‌’ ದತ್ತಾ ಫ‌ುಗೆ ಬರ್ಬರ ಹತ್ಯೆ

0
1178

ಪುಣೆ : ಚಿನ್ನದ ಶರ್ಟ್‌ ಧರಿಸಿ ‘ಗೋಲ್ಡ್‌ ಮ್ಯಾನ್‌’ ಎಂದು ಕರೆಸಿಕೊಂಡು ಭಾರೀ ಸುದ್ದಿಯಾಗಿದ್ದ ಇಲ್ಲಿನ ಉದ್ಯಮಿ ದತ್ತಾ ಫ‌ುಗೆ ಅವರನ್ನು ದುಷ್ಕರ್ಮಿಗಳು ಗುರುವಾರ ರಾತ್ರಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ.
48 ರ ಹೆರೆಯದ ಫ‌ುಗೆ ಅವರನ್ನು ಕಾರಿನಿಂದ ಎಳೆದ 12ಕ್ಕೂ ಹೆಚ್ಚು ದುಷ್ಕರ್ಮಿಗಳ ಗುಂಪು ಕತ್ತಿಯಿಂದ ಕಡಿದು, ಕಲ್ಲುಗಳನ್ನು ತಲೆಯ ಮೇಲೆ ಎತ್ತಿ ಹಾಕಿ ಪರಾರಿಯಾಗಿದ್ದಾರೆ. ಈ ವೇಳೆ ಫ‌ುಗೆ ಅವರ 22 ರ ಹರೆಯದ ಪುತ್ರನೂ ಕಾರಿನಲ್ಲಿದ್ದು ಅವನ ಮೇಲೂ ದಾಳಿ ನಡೆಸಿದ್ದಾರೆ.

ಹತ್ಯೆಗೈದಿರುವ ಶಂಕಿತರ ಪೈಕಿ ಒಬ್ಟಾತ ಫ‌ುಗೆ ಅವರನ್ನು ಬರ್ತ್‌ಡೇ ಪಾರ್ಟಿಗೆ ಕರೆದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಹಣಕಾಸು ವ್ಯವಹಾರಕ್ಕಾಗಿ ಕೊಲೆ ನಡೆದಿದೆ ಎಂದು ಹೇಳಲಾಗಿದ್ದು ,ಕೃತ್ಯದ ಹಿಂದೆ ಫ‌ುಗೆ ಅವರ ಸೋದರಳಿಯನ ಕೈವಾಡವಿದೆ ಎಂದೂ ಹೇಳಲಾಗಿದೆ. ಈಗಾಗಲೇ ನಾಲ್ವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ತೀವ್ರಗೊಳಿಸಿದ್ದಾರೆ.

ನಾಲ್ಕು ವರ್ಷಗಳ ಹಿಂದೆ ಫ‌ುಗೆ ಅವರು 1 ಕೋಟಿ ರೂ ಮೌಲ್ಯದ 22 ಕ್ಯಾರೆಟ್‌ ನ 3.5 ಕೆ.ಜಿ.ತೂಕದ ಚಿನ್ನದ ಶರ್ಟ್‌ ಧರಿಸಿ ಮಾಧ್ಯಮಗಳಲ್ಲಿ ಭಾರೀ ಸುದ್ದಿಯಾಗಿದ್ದರು. ಅವರ ಶರ್ಟ್‌ ವಿಶ್ವದ ದುಬಾರಿ ಶರ್ಟ್‌ ಎನಿಸಿಕೊಂಡು ‘ಗೋಲ್ಡ್‌ ಮ್ಯಾನ್‌’ ಎಂಬ ಬಿರುದಿಗೂ ಪಾತ್ರರಾಗಿದ್ದರು.

Source: udayavani