ಬಂಕ್ ನಲ್ಲಿ ಪೆಟ್ರೊಲ್ ತುಂಬಿಸುವಾಗ ಹುಷಾರ್!!

0
4877

ಅಪಾಯಕಾರಿ ಸ್ಥಳಗಳಲ್ಲಿ ಅಪಾಯ ಎದುರಾದರೆ ಪರಿಸ್ಥಿತಿ ಹೇಗಿರಬೇಡ. ಪೆಟ್ರೋಲ್ ಬಂಕ್ ನಲ್ಲಿ ಬೈಕ್ ಗೆ ಪೆಟ್ರೋಲ್ ಹಾಕಿಸಿಕೊಳ್ಳುವ ಸಂದರ್ಭದಲ್ಲಿಯೇ ಆಕಸ್ಮಿಕವಾಗಿ ಬೆಂಕಿ ತಗುಲಿದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

© kannadadunia
© kannadadunia

ಚಿಕ್ಕಬಳ್ಳಾಪುರದ ಪ್ರಮುಖ ರಸ್ತೆಯಲ್ಲಿನ ಪೆಟ್ರೋಲ್ ಬಂಕ್ ಒಂದಕ್ಕೆ ಪೆಟ್ರೋಲ್ ಹಾಕಿಸಿಕೊಳ್ಳಲು ಮಂಚೇನಹಳ್ಳಿ ಗ್ರಾಮದ ಮೆಕಾನಿಕ್ ಆಗಿರುವ ಅಶೋಕ್ ತನ್ನ ಬೈಕ್ ಗೆ ಪೆಟ್ರೋಲ್ ತುಂಬಿಸಿ ಕೊಳ್ಳಲು ಬಂದಿದ್ದಾನೆ, ಬಂಕ್’ನಲ್ಲೇ ಸ್ಟಾಟ್ ಮಾಡಲು ಕಿಕ್ ಒಡೆಯುವಾಗ ಪೆಟ್ರೋಲ್ ಸೋರಿಕೆಯಾಗಿದ್ದರಿಂದ ಬೆಂಕಿ ಹೊತ್ತಿಕೊಂಡಿದೆ. ಅಲ್ಲಿದ್ದವರೆಲ್ಲಾ ಪರಾರಿಯಾಗಿದ್ದಾರೆ.

ನೋಡ ನೋಡುತ್ತಿದ್ದಂತೆ ಬೆಂಕಿಯ ಹೆಚ್ಚಾಗಿದ್ದರಿಂದ ಅಲ್ಲಿದ್ದವರು ಬೆಂಕಿ ನಂದಿಸಲು ಪ್ರಯತ್ನಿಸಿದರಾದರೂ, ಹತೋಟಿಕೆಗೆ ಬರಲಿಲ್ಲ. ಕೂಡಲೇ ಎಚ್ಚೆತ್ತ ಜನ ಬೈಕ್ ಗೆ ಪೈಪ್ ಕಟ್ಟಿ ಬಂಕ್ ನಿಂದ ದೂರ ಎಳೆಯುವ ಮೂಲಕ ಭಾರಿ ಅನಾಹುತವನ್ನು ತಪ್ಪಿಸಿದ್ದಾರೆ. ಕೆಲವರ ಸಮಯ ಪ್ರಜ್ಞೆಯಿಂದ ಅಪಾಯ ತಪ್ಪಿದೆ.

ಘಟನೆಯಲ್ಲಿ ಬೈಕ್ ಸಂಪೂರ್ಣ ಭಸ್ಮವಾಗಿದ್ದು, ಸ್ಥಳಕ್ಕಾಗಮಿಸಿದ್ದ ಅಗ್ನಿಶಾಮಕ ದಳ ಬೆಂಕಿ ನಂದಿಸಿತು.