ಭಾರತದಲ್ಲಿ ‘ಪೋಕೆಮಾನ್ ಗೋ’ ತಂದ ಮೊದಲ ದುರಂತ

0
1340

ಮುಂಬೈ: ಈ ಹಿಂದೆ ಅಪಾರ ಜನಪ್ರಿಯತೆ ಗಳಿಸಿದ್ದFarmville Candy Crushಗಳಂತೆ ಸದ್ಯ ಸುದ್ದಿಯಲ್ಲಿರುವುದು ’ಪೋಕೆಮಾನ್ ಗೋ’ ಎನ್ನುವ ಆಟ. ಇದು ಸೃಷ್ಟಿಸಿರುವ ಸೆಳೆತದ ಅಲೆ ಎಂತಹುದೆಂದರೆ ಈ ಆಟದಲ್ಲಿ ಮೈಮರೆತು ಮುಳುಗಿದ್ದವರು ಅಪಘಾತಗಳಿಗೆ ಗುರಿಯಾಗಿದ್ದಾರೆ.

ಈಗಾಗಲೇ ವಿಶ್ವದ ಅನೇಕ ದೇಶಗಳಲ್ಲಿ ಅವಾಂತರಗಳಿಗೆ ಕಾರಣವಾಗಿರುವ ಪೋಕೆಮಾನ್ ಗೋ ಆಟದಿಂದ ಭಾರತದಲ್ಲಿ ಮೊದಲ ಅಪಘಾತ ಸಂಭವಿಸಿದೆ. ಆಟವಾಡುತ್ತಾ ಕಾರು ಚಾಲನೆ ಮಾಡಿದ್ದರಿಂದ ಈ ಘಟನೆ ನಡೆದಿದೆ.

ಪೋಕೆಮಾನ್ ಗೋ‘ ಎಂಬ ಮೊಬೈಲ್ ಫೋನಿನ ಆಟ ವಿಶ್ವದೆಲ್ಲೆಡೆ ಜನಪ್ರಿಯವಾಗಿದ್ದು, ಅಪಘಾತಗಳಿಗೆ ಎಡೆಮಾಡಿಕೊಡುತ್ತಿದೆ. ವಾಹನಗಳೆಡೆಗೆ ನುಗ್ಗುತ್ತಿರವುದು, ನಿಷೇಧಿತ ಜಾಗಗಳಲ್ಲಿ ಸಂಚರಿಸುತ್ತಿರುವುದು, ಎಚ್ಚರಿಕೆಯಿಲ್ಲದೆ ವಾಹನ ಚಾಲನೆ ಹೀಗೆ ಅಪರಾಧಗಳ ಪಟ್ಟಿ ಬೆಳೆಯುತ್ತಿರುವ ಹಿನ್ನಲೆಯಲ್ಲಿ, ಈ ಆಟ ಆಡುವ ಮಂದಿಯನ್ನು ನಗರ ಟ್ರಾಫಿಕ್ ಪೊಲೀಸರು ಎಚ್ಚರಿಸಿದ್ದಾರೆ.

ಜಪಾನ್ ನಲ್ಲಿ ಪೋಕೆ ಮಾನ್ ಬಿಡುಗಡೆಯಾದ 3 ದಿನದಲ್ಲೇ 36 ಅಪಘಾತ ಪ್ರಕರಣ ನಡೆದಿವೆ. ಇದರ ಮೇಲೆಯೇ ಗಮನ ಕೇಂದ್ರೀಕರಿಸುವುದರಿಂದ ಅನೇಕ ಅವಘಡ ಸಂಭವಿಸುತ್ತವೆ. ಭಾರತದಲ್ಲಿ ಪೋಕೆಮಾನ್ ಇನ್ನೂ ರಿಲೀಸ್ ಆಗಿಲ್ಲವಾದರೂ, ಇಂಟರ್ ನೆಟ್ ಮೂಲಗಳಿಂದ ಸುಲಭವಾಗಿ ಸಿಗುತ್ತದೆ. ಇದನ್ನೇ ಡೌನ್ ಲೋಡ್ ಮಾಡಿಕೊಂಡು ಆಟವಾಡಲಾಗುತ್ತಿದೆ. ಮುಂಬೈ ಬಾಂದ್ರಾ ನಿವಾಸಿ 26 ವರ್ಷದ ಜಬ್ಬೀರ್ ಆಲಿ ಎಂಬಾತ ಪೋಕೆಮಾನ್ ಆಟವಾಡುತ್ತಾ ಕಾರ್ ಚಾಲನೆ ಮಾಡಿದ್ದು, ನಿಯಂತ್ರಣ ತಪ್ಪಿ ಅಪಘಾತಕ್ಕೆ ಈಡಾಗಿದೆ.

ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜಬ್ಬೀರ್ ಆಲಿ ಅಪಘಾತಕ್ಕೀಡಾದ ತಮ್ಮ ಕಾರಿನ ಚಿತ್ರವನ್ನು ಪೋಸ್ಟ್ ಮಾಡಿದ್ದು, ಪೋಕೆಮಾನ್ ಆಡುವಾಗ ಎಚ್ಚರಿಕೆ ವಹಿಸಿ ಎಂದು ಸಲಹೆ ನೀಡಿದ್ದಾರೆ.

ಏನಿದು ಪೋಕೆಮಾನ್ ಗೋ?

ಪೋಕೆಮಾನ್ ಗೋ ಆಟ ಇನ್ನು ಭಾರತದಲ್ಲಿ ಬಿಡುಗಡೆಯಾಗಿಲ್ಲವಾದರೂ ಅನಧಿಕೃತ ಮೂಲಗಳಿಂದ ಇದನ್ನು ಮೊಬೈಲ್ ಗೆ ಇಳಿಸಿಕೊಂಡು ಆಡಬಹುದಾಗಿದ್ದು, ಭಾರತದಲ್ಲೂ ಇದನ್ನು ಆಡುವವರ ಸಂಖ್ಯೆ ದಿನೇ ದಿನೇ ಬೆಳೆಯುತ್ತಿದೆ.

ಈ ಆಟವನ್ನು ಆಡುವಾಗ, ಕ್ಯಾಮರಾ ಚಾಲನೆಯಾಗಿ ಯಾವುದೋ ಒಂದು ಪ್ರದೇಶದಲ್ಲಿ ಪೋಕೆಮಾನ್ ಇರುವಂತೆ ಗೋಚರವಾಗಿ ನಿಮ್ಮ ಮೊಬೈಲ್ ಪರದೆ ಮೇಲೆ ಕಾಣಲಿದ್ದು, ಅದರ ಮೇಲೆ ಬಾಲ್ (ಅಗೋಚರ) ಎಸೆಯುವ ಮೂಲಕ ಹಿಡಿಯುವುದು ಆಟ. ಇದನ್ನು ಆಗಮಂಟೆಡ್ ರಿಯಾಲಿಟಿ ಆಟ ಎನ್ನುವ ತಂತ್ರಜ್ಞಾನದಿಂದ ಸಿದ್ಧಪಡಿಸಿದ್ದು, ಪೆರೇಡ್ ಮೇಲೆ ಮೂಡುವ ನೈಜ ಪ್ರದೇಶಗಳು, ಆಟದಲ್ಲಿ ತಲ್ಲೀನಗೊಳಿಸಿ, ಅಪಘಾತಗಳಿಗೆ ಎಡೆ ಮಾಡಿಕೊಡುವ ಸಂದರ್ಭ ಸೃಷ್ಟಿಸುತ್ತದೆ.

ವಿಶ್ವದಾದ್ಯಂತ ವರದಿಯಾಗಿರುವ ಪೋಕೆಮಾನ್ ಗೋ ಅಪಘಾತಗಳು

ಜುಲೈ 12: ನ್ಯೂಯಾರ್ಕ್ ನಲ್ಲಿ 28 ವರ್ಷದ ಯುವಕ ಚಕ್ರದ ಹಿಂದೆ ಪೋಕೆ ಮಾನ್ ಹಿಡಿಯಲು ಹೋಗಿ ಅಪಘಾತ.

ಜುಲೈ 13: ಇಬ್ಬರು ಕೆನಡಾ ಯುವಕರು ಪೋಕೆಮಾನ್ ಆಡುತ್ತಾ ಕಾರ್ ಚಾಲನೆ ಮಾಡುತ್ತಾ ಪೋಲೀಸರ ವಾಹನಕ್ಕೆ ಗುದ್ದಿ, ಇಬ್ಬರು ಪೊಲೀಸರಿಗೆ ಗಾಯ

ಜುಲೈ 13: ಬ್ಯುಸಿ ರಸ್ತೆಯನ್ನು ದಾಟುವಾಗ ಪೋಕೆಮಾನ್ ಆಡುತ್ತಿದ್ದರಿಂದ ಪೆನ್ಸ್ಲಿವೇನಿಯಾದ ಪಿಟ್ಸ್ ಬರ್ಗ್ ನಲ್ಲಿ ಬಾಲಕಿಯೊಬ್ಬಳಿಗೆ ಗಾಯ

ಜುಲೈ 19: ಇಂಡೋನೇಷಿಯಾದಲ್ಲಿ ಪೋಕೆಮಾನ್ ಆಡುತ್ತಾ ಸೇನಾ ಶಿಬಿರದೊಳಗೆ ನುಗ್ಗಿದ ಫ್ರೆಂಚ್ ಯುವಕ. ಬಂಧನ.

ಜುಲೈ 21: ನ್ಯೂಯಾರ್ಕ್ ನಲ್ಲಿ ಪೋಕೆ ಮಾನ್ ಆಡುತ್ತಾ ಸ್ಮಶಾನವೊಂದರಲ್ಲಿ ಮರ ಹತ್ತಿದ ಮಹಿಳೆ; ಇಳಿಯಲಾಗದೆ ತುರ್ತು ನಿಗಾ ಘಟಕ 911 ಗೆ ಕರೆ.