ಪ್ರತಿದಿನ ೩ ಸಾವಿರ ಕ್ಯೂಸೆಕ್ಸ್ ಬಿಡಿ: ಮೇಲುಸ್ತುವರಿ ಸಭೆಯಲ್ಲೂ ಕರ್ನಾಟಕಕ್ಕೆ ಮುಖಭಂಗ

0
596

ನವದೆಹಲಿ: ಕಾವೇರಿ ಮೇಲುಸ್ತುವಾರಿ ಸಮಿತಿ ಸಭೆ ಯಲ್ಲೂ ಕರ್ನಾಟಕಕ್ಕೆ ಮುಖಭಂಗವಾಗಿದೆ. ಸ್ವಲ್ಪ ಸಮಧಾನಕರ ಅಂಶ ಅಂದರೆ ಈ ಬಾರಿ ಸೆ.೩೦ರವರೆಗೆ ೩ ಸಾವಿರವ ಕ್ಯೂಸೆಕ್ಸ್ ನೀರು ಬಿಡಲು ಸೂಚಿಸಲಾಗಿದೆ. ಆದರೆ ಕರ್ನಾಟಕ ಈ ಆದೇಶವನ್ನು ಮಂಗಳವಾರ ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲು ನಿರ್ಧರಿಸುವ ಬಗ್ಗೆ ಚಿಂತನೆ ನಡೆಸಿದೆ.
ಶನಿವಾರ ನಡೆದ ಮೇಲುಸ್ತುವಾರಿ ಸಮಿತಿ ಸಭೆಯಲ್ಲಿ ಕರ್ನಾಟಕದ ಪರ ಸರಕಾರದ ಮುಖ್ಯ ಕಾರ್ಯದರ್ಶಿ ಅರವಿಂದ್ ಜಾಧವ ರಾಜ್ಯದ ವಾಸ್ತವ ಸನ್ನಿವೇಶ ವಿವರಿಸಿದರು.

ಈಗಿನ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ. ಏಕೆಂದರೆ ನೀರು ಬಿಟ್ಟರೆ ಕುಡಿಯುವ ನೀರಿಗೂ ಸಮಸ್ಯೆ ಆಗುತ್ತದೆ ಎಂದು ವಿವರಿಸಿದರು.
ಕರ್ನಾಟಕದ ವಾದ ತಳ್ಳಿ ಹಾಕದೇ ಇದ್ದರೂ ಸಮಿತಿ ಸಭೆ ಯಲ್ಲಿ ೩ ಸಾವಿರ ಕ್ಯೂಸೆಕ್ಸ್ ನೀರು ಬಿಡಲು ಸೂಚಿಸಿತು.
ಇದರಿಂದ ಕರ್ನಾಟಕ ಸೆ.೨೧ರಿಂದ ೩೦ ರವರೆಗೆ ಪ್ರತಿದಿನ ೩ ಸಾವಿರ ಕ್ಯೂಸೆಕ್ಸ್ ನಂತೆ ಸುಮಾರು ೩೦ ಸಾವಿರ ಕ್ಯೂಸೆಕ್ಸ್ ನೀರು ಬಿಡಬೇಕಾಗಿದೆ. ಒಂದು ವೇಳೆ ಈ ಅವಧಿಯಲ್ಲಿ ಮಳೆ ಬಂದರೆ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ದೊರೆಯಬಹುದಾಗಿದೆ.

ಮೇಲುಸ್ತುವಾರಿ ಸಮಿತಿ ಯಾವ ಆಧಾರದ ಮೇಲೆ ೩ ಸಾವಿರ ಕ್ಯೂಸೆಕ್ಸ್ ನೀರು ಬಿಡಲು ಹೇಳಿದೆ ಎಂಬುದು ತಿಳಿದಿಲ್ಲ. ವರದಿ ಪ್ರತಿ ಕೈ ಸೇರಿದ ನಂತರ ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ರಾಜ್ಯ ಜಲಸಂಪನ್ಮೂಲ ಸಚಿವ ಎಚ್.ಬಿ. ಪಾಟೀಲ್ ಪ್ರತಿಕ್ರಿಯಿಸಿದ್ದಾರೆ.

ಕರ್ನಾಟಕದ ವಾದ

* ಕಾವೇರಿ ಕಣಿವೆಯಲ್ಲಿ ಪ್ರಸ್ತುತ ೨೭ ಟಿಎಂಸಿ ನೀರು ಮಾತ್ರ ಲಭ್ಯ

*ಬೆಂಗಳೂರು, ಮಂಡ್ಯ ಸೇರಿದಂತೆ ೪೩ ಪಟ್ಟಣದ ೬೩೦ ಗ್ರಾಮಗಳಿಗೆ ಕುಡಿಯುವ ನೀರಿಗೆ ಇಷ್ಟು ಅತ್ಯಗತ್ಯ

* ಕೇವಲ ನೈಋತ್ಯ ಮುಂಗಾರು ಮಾತ್ರ ಪರಿಗಣಿಸಲಾಗುತ್ತಿದೆ. ಹಿಂಗಾರು ಕೂಡ ಗಮನಿಸಬೇಕು.

*ಪ್ರಸ್ತುತ ತಮಿಳುನಾಡಿಗೆ ಸಾಕಷ್ಟು ಪ್ರಮಾಣದಲ್ಲಿ ನೀರು ಬಿಡಲಾಗಿದೆ.

* ಮೇಲುಸ್ತುವಾರಿ ಸಮಿತಿ ಸಭೆ ೨ ವರ್ಷದಿಂದ ಸೇರಿಲ್ಲ. ೨ ವರ್ಷದಿಂದ ಬರಗಾಲ ಪರಿಸ್ಥಿತಿ ಇದೆ ಅದನ್ನೂ ಗಮನಿಸಬೇಕು

 

ಕೃಪೆ :ಅಂತರ್ಮುಖಿ