ಪ್ರತಿನಿತ್ಯ ಸಾವನ್ನು ಗೆದ್ದು ಸ್ಕೂಲ್ ಗೆ ಹೋಗ್ತಾರೆ, ಇವರ ಕಷ್ಟ ಯಾರು ಕೇಳ್ತಾರೆ?

0
2389
These-determined-students
ಮಕ್ಕಳ ನಿತ್ಯದ ಪ್ರಯಾಸ..

ಈ ಫೋಟೋ ನೋಡಿ. ಒಮ್ಮೆ ನೋಡಿದರೆ ಮಕ್ಕಳು ಪ್ರವಾಸಕ್ಕೆಂದು ಬಂದಿರಬೇಕು ಎನಿಸುತ್ತದೆ. ಆದರೆ ಇದು ಇವರಿಗೆ ಪ್ರವಾಸವಲ್ಲ ನಿತ್ಯದ ಪ್ರಯಾಸ..

ಇದು ಚೀನಾದ ಶಿಚುಯಾನ್ ಪ್ರಾಂತ್ಯದಲ್ಲಿರುವ ದೊಡ್ಡ ಪರ್ವತ. ಈ ಹಳ್ಳಿಯ ಮಕ್ಕಳು ಶಾಲೆ ತಲುಪಬೇಕೆಂದರೆ ಬೆಟ್ಟ ಹತ್ತುವ ಸಾಹಸಕ್ಕೆ ಅಣಿಯಾಗಲೇಬೇಕು. ಸುಮಾರು 800 ಮೀಟರ್ ಉದ್ದವಿರುವ ಏಣಿಯನ್ನು ಹತ್ತಿ ಶಾಲೆ ತಲುಪುವ ಇವರ ಧೈರ್ಯ ಎಂಥವರನ್ನೂ ದಂಗಾಗಿಸುತ್ತದೆ.

Worlds riskiest school run
ಪ್ರತಿನಿತ್ಯ ಸಾವನ್ನು ಗೆದ್ದು ಸ್ಕೂಲ್ ಗೆ ಹೋಗಬೇಕು

ಈಗಾಗಲೇ ಈ ಪರ್ವತ ಕೆಲವು ಜನರನ್ನು ಬಲಿ ತೆಗೆದುಕೊಂಡಿದೆ, ಕೆಲವರನ್ನು ಶಾಶ್ವತ ಅಂಗವಿಕಲರನ್ನಾಗಿಸಿದೆ. 6ರಿಂದ 15 ವರ್ಷದ ಮಕ್ಕಳು ಹೀಗೆ ಪರ್ವತವನ್ನು ಏರಿ ಶಾಲೆಗೆ ಹೋಗುತ್ತಾರೆ. ಇಷ್ಟೆಲ್ಲ ಸಾಹಸ ಮಾಡಿ ಶಾಲೆಗೆ ಹೋದರೆ ಅಲ್ಲಿನ ಸ್ಥಿತಿ ಕೂಡ ಹದಗೆಟ್ಟಿದೆ. ಶಾಲೆಯಲ್ಲಿ ಕೊಠಡಿಯ ವ್ಯವಸ್ಥೆಗಳು ಸರಿಯಾಗಿಲ್ಲ. ಅವರ ಈ ನಿತ್ಯದ ಸಂಕಷ್ಟವನ್ನು ಅರಿತು ಸರಕಾರ ಕ್ರಮ ಕೈಗೊಂಡರೆ ಬಾವೀ ಪ್ರಜೆಗಳನ್ನು ಸಾವಿನ ಕೂಪಕ್ಕೆ ನೂಕುವುದನ್ನು ತಪ್ಪಿಸಬಹುದು.