ಫಿಡಲ್ ಕ್ಯಾಸ್ಟ್ರೋ ಇನ್ನಿಲ್ಲ: ಕ್ಯೂಬಾದ ಈ ಕ್ರಾಂತಿಕಾರಿಯನ್ನು ಇತಿಹಾಸ ಎಂದೂ ಮರೆಯೊಲ್ಲ

0
613

‘ನನ್ನನ್ನು ಖಂಡಿಸಿ. ಆದರೆ ನನ್ನನ್ನು ಇತಿಹಾಸ ಎಂದೂ ಮರೆಯೋದಿಲ್ಲ’ ಹಾಗಂತ ನ್ಯಾಯಾಲಯದಲ್ಲಿ ೪೫ ವರ್ಷದ ಯುವ ವಕೀಲ ತನ್ನನ್ನು ಸಮರ್ಥಿಸಿಕೊಂಡಿದ್ದ. ಆತ ಹೇಳಿದ ಆ ಮಾತು ಚಿರ ಸತ್ಯವಾಯಿತು.

ವಿಶ್ವದ ದೊಡ್ಡಣ್ಣ ಅಮೆರಿಕದ ವಿರುದ್ಧ ದಶಕಗಳ ಕಾಲ ಹೋರಾಟ ನಡೆಸಿ ಜಗತ್ತಿಗೆ ಕ್ರಾಂತಿಯ ಪಾಠ ಹೇಳಿಕೊಟ್ಟ ಕ್ಯೂಬಾ ಎಂಬ ಸಣ್ಣ ದೇಶವನ್ನು ಸುಮಾರು ೫ ದಶಕಗಳ ಕಾಲ ಅಧ್ಯಕ್ಷನಾಗಿ ಮುನ್ನಡೆಸಿದ ಫೀಡಲ್ ಕ್ಯಾಸ್ಟ್ರೊ (೯೦) ಚಿರನಿದ್ರೆಗೆ ಜಾರಿದ್ದಾರೆ.

೧೯೫೩ರಲ್ಲಿ ೮೨ ಮಂದಿಯೊಂದಿ ಅಮೆರಿಕದ ದೌರ್ಜನ್ಯ ವಿರುದ್ಧ ಕ್ರಾಂತಿ ಘೋಷಿಸಿದ ಪೀಡಲ್ ಕ್ಯಾಸ್ಟ್ರೋಗೆ ಶಕ್ತಿ ತುಂಬಿದ ಮತ್ತೊಂದು ಮಹಾನ್ ಚೇತನ ಅಂದರೆ ಅದು ಚಿಗುವೆರ.

ಫೀಡಲ್ ಕ್ಯಾಸ್ಟ್ರೊ ಅವರನ್ನು ಹತ್ಯೆ ಮಾಡಲು ಸಾವಿರಾರು ಪ್ರಯತ್ನಗಳು ನಡೆದಿದ್ದವು. ಅಮೆರಿಕ ೯ ಅಧ್ಯಕ್ಷರನ್ನು ಕಂಡಿತು. ಆದರೂ ಕ್ಯಾಸ್ಟ್ರೊ ಅವರನ್ನು ಹಿಡಿಯಲು ಸಾಧ್ಯವಾಗಲಿಲ್ಲ. ಇತ್ತೀಚೆಗಷ್ಟೇ ಬರಾಕ್ ಓಬಾಮಾ ಕ್ಯೂಬಾಗೆ ಭೇಟಿ ಕ್ಯಾಸ್ಟ್ರೊ ಅವರನ್ನು ಮಾತನಾಡಿಸಿ, ದಿಗ್ಭಂದನ ಸಡಿಲಿಸುವ ಭರವಸೆ ನೀಡಿದ್ದರು.

೧೯೫೯ರಲ್ಲಿ ಸ್ವತಂತ್ರ್ತಗೊಂಡ ಕ್ಯೂಬಾ ಅಧ್ಯಕ್ಷರಾಗಿ ಕ್ಯಾಸ್ಟ್ರೊ ಅಧಿಕಾರ ಸ್ವೀಕರಿಸಿದರು. ೨೦೦೬ರಲ್ಲಿ ನಡೆದ ಹತ್ಯೆ ಯತ್ನದಲ್ಲಿ ಪಾರಾದ ನಂತರ ಕ್ಯಾಸ್ಟ್ರೊ ಅಧಿಕಾರವನ್ನು ತನ್ನ ಸೋದರ ರೌಲ್ ಕ್ಯಾಸ್ಟ್ರೊಗೆ ಅಧಿಕಾರ ಹಸ್ತಾಂತರಿಸಿದ್ದರು.