ಬಟನ್ ಬ್ಯಾಟರಿ ಬಗ್ಗೆ ಈ ವಿಡಿಯೋ ನೋಡುದ್ರೆ ನೀವೇ ಭಯ ಬೀಳ್ತಿರಾ…

0
3141
Schmidt Fotografie Am Hellenteich 53 59929 Brilon

ಒಂದು ಸಣ್ಣ ಗಾತ್ರದ ಬಟನ್ ಬ್ಯಾಟರಿ ಒಂದು ಹುಡುಗಿಯ ಜೀವಕ್ಕೆ ಕುತ್ತು ತಂದೊಡ್ಡಿತ್ತು. ಹೌದು ನಿಮಗೆ ಗೊತ್ತಲ್ವಾ ಇತ್ತೀಚಿನ ಮಕ್ಕಳು ಅದೆಷ್ಟು ಫಾಸ್ಟ್ ಅಂತ, ಚಿಕ್ಕ ಮಕ್ಕಳಿಗೂ iOS ಮೊಬೈಲ್ ಹೇಗೆ ಉಪಯೋಗಿಸಬೇಕು ಮತ್ತೆ ಆಂಡ್ರಾಯ್ಡ್ ಮೊಬೈಲ್ ಹೇಗೆ ಆಪರೇಟ್ ಮಾಡಬೇಕು ಅಂತ. ಆದರೆ ಅತಿಯಾದ ಬಳಕೆ ಪ್ರಾಣಕ್ಕೆ ಕುತ್ತು ತಂದೊಡ್ಡುತ್ತದ್ದೆ ಎಂಬುದಕ್ಕೆ Northern ಐರ್ಲೆಂಡ್ ನೆಡೆದ ಘಟನೆಯೇ ಸಾಕ್ಷಿಯಾಗಿದೆ.

ಮೂರು ವರ್ಷದ ಹುಡುಗಿ ವಲೇರಿಯಾ Northern ಐರ್ಲೆಂಡ್ ಗೆ ಸೇರಿದ ಮುದ್ದು ಮಗು, ಹೀಗೆ ಆಟವಾಡುತ್ತಿರುವಾಗ ಕೈಗೆ ಸಿಕ್ಕ ಬಟನ್ ಬ್ಯಾಟರಿಯನ್ನು ಬಾಯಿಗೆ ಹಾಕಿಕೊಂಡಿತು, ಕ್ಷಣ ಮಾತ್ರದಲ್ಲೇ ಅನ್ನನಾಳ ಮತ್ತು ಶ್ವಸನಾಳದ ಮೂಲಕ ಹಾದು ಹೋದ ಬ್ಯಾಟರಿ ಎರಡೂ ನಾಳಗಳನ್ನು ಸುಟ್ಟಿದ್ದೆ.

ಒಳಗೆ ಹೋದ ಬ್ಯಾಟರಿ ಅನ್ನನಾಳದಲ್ಲಿ ಸಿಕ್ಕಿಹಾಕಿಕೊಂಡಿದ್ದು, ತಾಯಿಯ ಗಮನಕ್ಕೆ ತಾರದೆ ಸುಮ್ಮನಾಗಿಬಿಟ್ಟಿದೆ. ಕೆಲವು ದಿನಗಳ ನಂತರ ಪದೇ ಪದೇ ಜ್ವರಕ್ಕೆ ತುತ್ತಾಗುತ್ತಿದ್ದು ಮತ್ತು ಊಟ ಬಿಟ್ಟಿದ್ದನ್ನು ಗಮನಿಸಿ x-ರೇ ಮಾಡಿಸಿದ್ದಾಗ ನಿಜ ಸಂಗತಿ ಬಯಲಿಗೆ ಬಂದಿದೆ.

ಆಕೆಯ ತಾಯಿ “ಆ ಘಟನೆಯಿಂದಾಗಿ ನನ್ನ ಮಗಳು ಈಗಲೂ ಸಹ ಊಟ ಮಾಡುವಾಗ ಮತ್ತೆ ನೀರು ಕುಡಿಯುವಾಗ ತೊಂದರೆ ಅನುಬವವಿಸುತ್ತಾಳೆ, ಕುಟ್ಟಿಗ ಬಾಗದಲ್ಲಿ ರಂದ್ರ ಕೊರೆದು ಚೀಲವನ್ನು ಕಟ್ಟಿದ್ದಾರೆ, ಅವಳ ಏನೇ ಕುಡಿದರು ಕುಡಿದದ್ದು ನೀರ ಚೀಲ ಸೇರುತ್ತದೆ” ಎಂದು ಬೇಸರ ವೆಕ್ತಪಡಿಸುತ್ತಾರೆ.

ವಲೇರಿಯಾ ಸರ್ಜರಿ ಮಾಡಿದ ಕೈಟ್ ಕ್ರಾಸ್ ” ಇತ್ತೀಚೆಗೆ ಈ ತರಹದ ಪ್ರಕರಣಗಳು ಹೆಚ್ಚುತ್ತಿದ್ದು, ಬಟನ್ ಬ್ಯಾಟರಿ ಬಹಳ ವಿಷಕಾರಿಯಾಗಿದ್ದು, ಅವುಗಳನ್ನು ಮಕ್ಕಳಿಂದ ಆದಷ್ಟು ದೂರವಿರಿಸಿ” ಎಂದು ಎಚ್ಚರಿಸುತ್ತಾರೆ.

 

source  : BBC