ಬನ್ನಿ ವೃಕ್ಷದ ಶ್ರೇಷ್ಠತೆ

0
1896

ವೃಕ್ಷಗಳಲ್ಲಿ ಅತೀ ಶ್ರೇಷ್ಠವಾದವು ಅರಳಿ, ಔದುಂಬರ, ತೆಂಗು ಹಾಗೂ ಶಮೀ. ಇದಕ್ಕೆ ಇನ್ನೊಂದು ಹೆಸರು ಬನ್ನಿಮರ. ಇದನ್ನು ದೇವತೆಯ ಸ್ವರೂಪವೆಂದು ಪೂಜಿಸುತ್ತಾರೆ.

ಬನ್ನಿ ವೃಕ್ಷದ ಹಿನ್ನೆಲೆ:

ಮಹಾತಪಸ್ವಿ ಜಾರ್ವ-ಪತ್ನಿ ಸುಮೇಧರಿಗೆ `ಶಮೀಕಾ’ ಎಂಬ ಸುಂದರ ಮಗಳಿದ್ದಳು. ಮುದ್ದಾಗಿ ಬೆಳೆದ ಶಮೀಕಾಳಿಗೆ ಮದುವೆ ವಯಸ್ಸಾಯಿತು. ತಂದೆ-ತಾಯಿಯರು ಧೌಮ್ಯ ಋಷಿ ಪುತ್ರ ಮಂದಾರನಿಗೆ ಕೊಟ್ಟು ಮದುವೆ ಮಾಡಿದರು. ಮಂದಾರ ಕೌಶಿಕ ಮಹರ್ಷಿಯ ಶಿಷ್ಯ. ನವದಂಪತಿಗಳು ಒಮ್ಮೆ ವಾಯುವಿಹಾರಕ್ಕೆ ಹೋದಾಗ ಸೊಂಡಿಲುಗಳಿಂದ ಕೂಡಿದ ಭೃಶುಂಡಿ ಎಂಬ ಮುನಿಯನ್ನು ನೋಡಿದರು. ಅವನನ್ನು ನೋಡಿದ ಇಬ್ಬರಿಗೂ ನಗು ಬಂದಿತು. ಇದನ್ನು ಗªುನಿಸಿದ ಭೃಶುಂಡಿ ಮುನಿ ನನ್ನನ್ನು ನೋಡಿ ಏಕೆ ಅಪಹಾಸ್ಯದ ನಗು ಬೀರಿದೀರಿ ಎಂದು ಕೇಳಿದ. ಆದರೂ ದಂಪತಿ ನಗುತ್ತಲೇ ಇದ್ದರು. ಭೃಶುಂಡಿ ಮುನಿಗೆ ಕೋಪ ತಡೆಯಲಾರದೆ ನೀವಿಬ್ಬರೂ ಯಾವ ಪ್ರಯೋಜನಕ್ಕೂ ಬಾರದ ಮರಗಳಾಗಿ ಜನಿಸಿ ಎಂದು ಶಾಪವಿತ್ತ. ದಂಪತಿಗಳು ಹೆದರಿ ಮುನಿಯ ಪಾದಕ್ಕೆರಗಿ ಕ್ಷಮೆ ಕೋರಿ ಶಾಪ ವಿಮೋಚನೆ ಯಾವಾಗ ಎಂದು ಕೇಳಿದರು. ಆಗ ಮರುಗಿದ ಭೃಶುಂಡಿ ಗಣಪತಿ ಪ್ರಸನ್ನನಾದಾಗ ಶಾಪವಿಮೋಚನೆ ಎಂದ. ಮುನಿಯ ಶಾಪದಂತೆ ಶಮೀಕ ಶಮೀ ವೃಕ್ಷವಾಗಿ, ಮಂದಾರ ಮಂದಾರ ವೃಕ್ಷವಾಗಿ ಜನಿಸಿದರು. ಇತ್ತ ದಂಪತಿಗಳು ಮನೆಗೆ ಬಾರದ್ದರಿಂದ ತಂದೆತಾಯಿ ಅವರನ್ನರಸುತ್ತಾ ಕಾಡಿಗೆ ಹೋದರು. ಅಲ್ಲಿ ಎರಡು ವಿಚಿತ್ರ ಮರಗಳನ್ನು ಕಂಡು, ಅಲ್ಲಿದ್ದ ಋಷಿಯನ್ನು ಕೇಳಲು ನಡೆದ ಸಂಗತಿ ತಿಳಿಸಿದರು. ಆಗ ಅವರು ದೂರ್ವಾಸ ಮುನಿ ಹೇಳಿಕೊಟ್ಟಿದ ಗಣೇಶ ಮಂತ್ರ ಹೇಳತೊಡಗಿದರು. ಮಂತ್ರ ಜಪಿಸುತ್ತಿದ್ದಂತೆ ಗಣಪತಿ ದರ್ಶನ ನೀಡಿದ. ಅವನ ದರ್ಶನದಿಂದ ಶಾಪವಿಮೋಚನೆಯಾಯಿತು. ದಂಪತಿಗಳು ಮತ್ತೆ ಮೊದಲಿನಂತಾದರು.

ಬನ್ನಿ ವೃಕ್ಷದ ಉಪಯೋಗ:

ಶಮೀ ವೃಕ್ಷದ ಕೆಳಗೆ ಕುಳಿತು ಅರ್ಧ ಗಂಟೆ ಧ್ಯಾನ ಮಾಡಿದರೆ ದೀರ್ಘಾವಧಿ ರೋಗಗಳು ಗುಣವಾಗುವವು.ಇದರ ಗಾಳಿ ಸೇವನೆಯಿಂದ ಹೃದಯ ಸಂಬಂಧಿ ತೊಂದರೆ ನಿವಾರಣೆ. ಜೊತೆಗೆ ಇದರ ಚಕ್ಕೆಯ ಕಷಾಯ ಸೇವನೆಯಿಂದ ದೀರ್ಘಕಾಲೀನ ಕೆಮ್ಮು ನಿವಾರಣೆ.ಈ ವೃಕ್ಷದೆಲೆಯನ್ನು ದೇವರ ಮನೆಯಲ್ಲಿಟ್ಟರೆ ಅಂಥ ಮನೆಯಲ್ಲಿನ ವಾಸ್ತು ದೋಷ ಪರಿಹಾರ. ಪ್ರತಿದಿನ ಬೆಳಗ್ಗೆ ಶಮಿವೃಕ್ಷಕ್ಕೆ ಪ್ರದಕ್ಷಿಣೆ ಹಾಕುವುದರಿಂದ ವಿವಾಹ ತಡೆ ಸಮಸ್ಯೆ ನೀಗುವದಲ್ಲದೇ ಸಂತಾನ ಭಾಗ್ಯ ದೊರೆಯುವುದು. ಮಾಟ-ಮಂತ್ರ ಪ್ರಯೋಗವಾಗಿದ್ದರೆ ಮರಕ್ಕೆ 21 ದಿನ ಪೂಜೆ ಮಾಡಿದರೆ ಪ್ರಯೋಗದಿಂದ ಹೊರ ಬರಬಹುದು.