ಬರೋಬ್ಬರಿ 240 ಅಡಿ ಎತ್ತರದಲ್ಲಿ ತೂಗುತ್ತಿದೆ ಈ ಹ್ಯಾಂಗಿಂಗ್ ದೇವಾಲಯ

0
3080

ಚೀನಾದಲ್ಲಿ ನಾವು ಪ್ರಪಂಚದ ಹಲವಾರು ಅದ್ಭುತಗಳನ್ನು ನೋಡಬಹುದು. ಅವುಗಳಲ್ಲಿ ಒಂದು ಶಾಂಜಿಯಲ್ಲಿರುವ. ಈ ವಿಶಿಷ್ಟವಾದ ದೇವಾಲಯ ನೆಲದ ಮೇಲಿಂದ 50 ಮೀಟರ್ ಎತ್ತರದಲ್ಲಿದೆ. ಕನ್‍ಫ್ಯೂಶಿಯಾನಿಸಂ, ತವೋನಿಸಂ ಮತ್ತು ಬೌದ್ಧ ಧರ್ಮ.. ಹೀಗೆ ಒಟ್ಟು ಮೂರು ಧರ್ಮಗಳಿಗೆ ಜೊತೆಯಾಗಿ ಆಸರೆ ಕಲ್ಪಿಸುವ ಚೀನಾದ ಒಂದೇ ಒಂದು ದೇವಾಲಯ ಇದಾಗಿದೆ. ಹೆಂಗ್ ಶಾನ್ ಅಥವಾ ಹೆಂಗ್ ಬೆಟ್ಟದ ಮೇಲೆ ತೇಲಾಡುತ್ತಿರುವ ಈ ದೇವಾಲಯವನ್ನು ವೀಕ್ಷಣೆ ಮಾಡಲು ಗುಂಡಿಗೆ ಖಂಡಿತವಾಗಿಯೂ ಗಟ್ಟಿಯಾಗಿರಬೇಕು.

53AEB64F-A433-4C01-B871-87E2C53BBF22_L_styvpf

ಈ ವಿಶಿಷ್ಟವಾದ ದೇವಾಲಯವನ್ನು ಮೌಂಟ್ ಹೆಂಗ್ ಪರ್ವತದ ಮೇಲೆ, ದಟೋಂಗ್ ಹತ್ತಿರ 1,500 ವರ್ಷಗಳ ಹಿಂದೆ ನಿರ್ಮಾಣ ಮಾಡಲಾಗಿದೆ. 240 ಫೀಟ್ ಎತ್ತರದಲ್ಲಿ ಪರ್ವತ ತುತ್ತ ತುದಿಯಲ್ಲಿ ಜೋರಾಗಿ ಬೀಸುವ ಗಾಳಿಯ ಜೊತೆ ತೇಲಾಡುವ ಈ ಪ್ರದೇಶವನ್ನು ಹ್ಯಾಂಗಿಂಗ್ ಮೋನೆಸ್ಟ್ರಿ ಎಂದು ಸಹ ಕರೆಯುತ್ತಾರೆ. ಈ ಬೆಟ್ಟದ ಕೆಳಗೆ ಗೋಲ್ಡನ್ ಡ್ರ್ಯಾಗನ್ ನದಿ ಹರಿಯುತ್ತದೆ.

© kannada.eenaduindia
© kannada.eenaduindia

ಪ್ರವಾಹದ ಸಂದರ್ಭದಲ್ಲಿ ಏನೂ ಆಪಾಯವಾಗಬಾರದು ಎಂಬ ದೃಷ್ಟಿಯಿಂದ ಮನೆಗಳನ್ನು ಪರ್ವತದ ಮೇಲೆ ಸೃಷ್ಟಿಸಲಾಗಿದೆ. ಆದರೆ ಈ ವಿಶಿಷ್ಟ ಶೈಲಿಯ ಮೊನೆಸ್ಟ್ರಿಗಳು ಮಳೆ, ಚಳಿ, ಹಿಮ ಹಾಗೂ ಸೂರ್ಯನಿಂದಲೂ ರಕ್ಷಣೆ ನೀಡುವ ವಿಶಿಷ್ಟ ಸೌಲಭ್ಯವನ್ನು ಹೊಂದಿದೆ. ಸಾವಿರಾರು ವರ್ಷದ ಹಿಂದೆ ಕಟ್ಟಿದ್ದರೂ ಸಹ ಇಂದಿಗೂ ಸಹ ಇದು ಎಕ್ಸಲೆಂಟ್ ಸಿಚುವೇಶನ್‍ನಲ್ಲಿದೆ.

ಈ ದೇವಾಲಯದಲ್ಲಿ ಸುಮಾರು 40 ರೂಮ್‍ಗಳಿವೆ, ಕೊರಿಡಾರ್‍ಗಳಿವೆ, ಬ್ರಿಡ್ಜ್‍ಗಳು ಹಾಗೂ ನಡೆದಾಡಲು ದಾರಿಗಳು ಸಹ ಇವೆ. ಸುಮಾರು 80 ಕ್ಕೂ ಹೆಚ್ಚಿನ ಕಬ್ಬಿಣ, ಹಿತ್ತಾಳೆ, ತಾಮ್ರ ಮತ್ತು ಕ್ಲೇ ಮೂರ್ತಿಗಳನ್ನು ಈ ದೇವಾಲಯದಲ್ಲಿ ನೀವಿಂದು ಕಾಣಬಹುದು.