ಬಹುಮಾನಗಳ ಮಹಾಪೂರ, ಭವ್ಯ ಸ್ವಾಗತಕ್ಕೆ ಆಂಧ್ರ, ತೆಲಂಗಾಣ ಸಿದ್ಧತೆ

0
1661

ನವದೆಹಲಿ: ರಿಯೋ ಒಲಿಂಪಿಕ್ ಕ್ರೀಡಾಕೂಟದ ಮಹಿಳಾ ಬ್ಯಾಡ್ಮಿಂಟನ್ ಸಿಂಗಲ್ಸ್?ನಲ್ಲಿ ಬೆಳ್ಳಿ ಪದಕ ಮುಡಿಗೇರಿಸಿಕೊಂಡಿರುವ ಹೈದರಾಬಾದ್?ನ ಪ್ರತಿಭಾನ್ವಿತ ಆಟಗಾರ್ತಿ ಪಿ.ವಿ. ಸಿಂಧು ಅವರಿಗೆ ದೇಶದ ಮೂಲೆ ಮೂಲೆಗಳಿಂದ, ಬಾಲಿವುಡ್ ಸೇರಿ ದೇಶದ ವಿವಿಧ ಚಿತ್ರರಂಗಗಳ ತಾರೆಯರಿಂದ, ವಿವಿಧ ಕಂಪನಿಗಳಿಂದ, ಕೋಟ್ಯಂತರ ಪ್ರೇಮಿಗಳಿಂದ ಶ್ಲಾಘನೆಯ ಮಹಾಪೂರವೇ ಹರಿದುಬಂದಿದೆ. ಅಷ್ಟೇ ಅಲ್ಲ ವಿವಿಧ ಸಂಸ್ಥೆಗಳು, ಕಂಪನಿಗಳು ವಿಶೇಷ ಬಹುಮಾನ ಪ್ರಕಟಿಸಿವೆ.

ಇವೆಲ್ಲದರ ಜತೆ ಜೊತೆಗೇ ತೆಲಂಗಾಣ ಮತ್ತು ಆಂಧ್ರಪ್ರದೇಶ ಸರ್ಕಾರ, ಇಲ್ಲಿನ ಸಂಘ ಸಂಸ್ಥೆಗಳು, ಉದ್ಯಮಿಗಳು, ವಿವಿಧ ಕಂಪನಿಗಳು, ಆಭರಣ ಮಳಿಗೆಗಳು ಸಿಂಧು ಅವರನ್ನು ಅದ್ದೂರಿಯಾಗಿ ಸ್ವಾಗತಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ.

ಬಿ‌ಎಂಡಬ್ಲ್ಯೂ ಕಾರು ಬಹುಮಾನ

೨೦೧೨ರಲ್ಲಿ ಸೈನಾ ನೆಹ್ವಾಲ್ ಒಲಿಂಪಿಕ್ಸ್ ಕಂಚಿನ ಪದಕ ಗೆದ್ದುಕೊಂಡಾಗ ಬಿ‌ಎಂಡಬ್ಲ್ಯು ಕಾರನ್ನು ಬಹುಮಾನವಾಗಿ ನೀಡಿದ್ದ ಹೈದರಾಬಾದ್ ಜಿಲ್ಲಾ ಬ್ಯಾಡ್ಮಿಂಟನ್ ಸಂಸ್ಥೆಯ ಅಧ್ಯಕ್ಷ, ಸಚಿನ್ ತೆಂಡುಲ್ಕರ್ ಅವರ ಆಪ್ತ ಸ್ನೇಹಿತರೂ ಆದ ವಿ. ಚಾಮುಂಡೇಶ್ವರನಾಥ ಅವರು ಸಿಂಧು ಅವರಿಗೂ ಬಿ‌ಎಂಡಬ್ಲ್ಯು ಕಾರನ್ನು ಬಹುಮಾನ ನೀಡುವುದಾಗಿ ಪ್ರಕಟಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಒಲಿಂಪಿಕ್ಸ್ ಕ್ರೀಡಾಕೂಟಕ್ಕೂ ಮೊದಲೇ ತೆಲಂಗಾಣ ಮತ್ತು ಆಂಧ್ರಪ್ರದೇಶದ ಯಾವುದೇ ಕ್ರೀಡಾಪಟು ಪದಕ ಗೆದ್ದಲ್ಲಿ ಬಿ‌ಎಂಡಬ್ಲ್ಯು ಕಾರು ನೀಡುವುದಾಗಿ ಪ್ರಕಟಿಸಿದ್ದೆ. ಅದರ ಪ್ರಕಾರ ಸಿಂಧು ಅವರಿಗೆ ಬಿ‌ಎಂಡಬ್ಲ್ಯು ಕಾರನ್ನು ನೀಡುತ್ತಿದ್ದೇನೆ ಎಂದಿದ್ದಾರೆ.

೫೦ ಲಕ್ಷ ಪ್ರಕಟಿಸಿದ ಬ್ಯಾಡ್ಮಿಂಟನ್ ಸಂಸ್ಥೆ

ಭಾರತೀಯ ಬ್ಯಾಡ್ಮಿಂಟನ್ ಸಂಸ್ಥೆ ಸಿಂಧು ಅವರಿಗೆ ೫೦ ಲಕ್ಷ ರೂ. ಹಾಗೂ ಕೋಚ್ ಪಿ.ಗೋಪಿಚಂದ್?ಗೆ ೧೦ ಲಕ್ಷ ರೂ. ಬಹುಮಾನ ನೀಡಿ, ಗೌರವಿಸುವುದಾಗಿ ಪ್ರಕಟಿಸಿದೆ.
ಸಿಂಧು ಅವರ ಗುಣಗಾನ ಮಾಡಿ, ಅವರ ಸಾಧನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಬಿ‌ಎ‌ಐ ಅಧ್ಯಕ್ಷ ಡಾ. ಅಖಿಲೇಶ್ ದಾಸ್ ಗುಪ್ತಾ ಸಿಂಧು ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಸವರ ಸಾಧನೆಯಿಂದ ಭಾರತದಲ್ಲಿ ಇನ್ನಷ್ಟು ಮಂದಿ ಯುವ ಆಟಗಾರರು ಸ್ಪೂರ್ತಿ ಪಡೆದುಕೊಳ್ಳುತ್ತಾರೆನ್ನುವ ವಿಶ್ವಾಸ ತಮಗಿದೆ. ಇದು ದೇಶವೇ ಹೆಮ್ಮೆ ಪಡುವ ಸಂಗತಿಯಾಗಿದೆ. ದೇಶದ ಇತಿಹಾಸದಲ್ಲಿಯೇ ಇದೊಂದು ಮೈಲಿಗಲ್ಲು. ಅಂತೆಯೇ ದೇಶದಲ್ಲಿ ಬ್ಯಾಡ್ಮಿಂಟನ್ ಕ್ರೀಡೆಯನ್ನು ಇನ್ನೊಂದು ಹಂತಕ್ಕೆ ಕೊಂಡೊಯ್ಯುವಲ್ಲಿ ಕೋಚ್ ಗೋಪಿಚಂದ್ ಅವರ ಪಾತ್ರ ಗಮನಾರ್ಹ. ಅವರ ಗರಡಿಯಿಂದ ಇನ್ನಷ್ಟು ಮಂದಿ ದೇಶದ ಕೀರ್ತಿಯ ಪತಾಕೆ ಹಾರಿಸುವಂತವರು ಬೆಳಗಲಿ ಎಂದಿದ್ದಾರೆ.

ಆಂಧ್ರ ಸರ್ಕಾರದಿಂದ ೩ ಕೋಟಿ ರೂ.

ಸಿಂಧುಗೆ ಆಂಧ್ರಪ್ರದೇಶದಿಂದ ೩ ಕೋಟಿ ರೂಪಾಯಿ ನಗದು ಬಹುಮಾನ, ರಾಜಧಾನಿಯಲ್ಲಿ ೧೦೦೦ ಚದರ ಯಾರ್ಡ್ ಮನೆ ನಿವೇಶನ ಮತ್ತು ರಾಜ್ಯ ಸರ್ಕಾರದಲ್ಲಿ ಗ್ರೂಪ್ ೧ ನೌಕರಿ, ಕೋಚ್ ಪುಲ್ಲೇಲ ಗೋಪಿ ಚಂದ್ ಅವರಿಗೂ ೫೦ ಲಕ್ಷ ರೂಪಾಯಿಗಳ ನಗದು ಬಹುಮಾನವನ್ನು ಆಂಧ್ರ ಪ್ರದೇಶ ಸಚಿವ ಸಂಪುಟ ಪ್ರಕಟಿಸಿದೆ

ದೆಹಲಿ ಸರ್ಕಾರದಿಂದ ೨ ಕೋಟಿ ರೂ.

ಪಿ.ವಿ. ಸಿಂಧು ಮತ್ತು ಸಾಕ್ಷಿ ಮಲಿಕ್ ಸಾಧನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿಶೇಷ ಬಹುಮಾನ ಪ್ರಕಟಿಸಿದ್ದಾರೆ. ಬ್ಯಾಡ್ಮಿಂಟನ್?ನಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿರುವ ಸಿಂಧು ಅವರಿಗೆ ದೆಹಲಿ ಸರ್ಕಾರ ೨ ಕೋಟಿ ರೂ. ಪ್ರಕಟಿಸಿದೆ. ಅಂತೆಯೇ ಕಂಚು ಗೆದ್ದುಕೊಂಡಿರುವ ಮಹಿಳಾ ಕುಸ್ತಿಪಟು ಸಾಕ್ಷಿ ಮಲಿಕ್?ಗೆ ಒಂದು ಕೋಟಿ ರೂ. ಪ್ರಕಟಿಸಿದ್ದಾರೆ. ಅಲ್ಲದೆ ಸಾಕ್ಷಿ ಅವರ ತಂದೆಗೆ ದೆಹಲಿ ಸಾರಿಗೆ ಸಂಸ್ಥೆಯಲ್ಲಿ ಉದ್ಯೋಗಾವಕಾಶ ಒದಗಿಸುವುದಾಗಿ ಭರವಸೆ ನೀಡಿದ್ದಾರೆ.

ತೆಲಂಗಾಣ ಸರ್ಕಾರದಿಂದ ೧ ಕೋಟಿ ರೂ.

ಪಿ.ವಿ. ಸಿಂಧು ಅವರ ಸಾಧನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ತೆಲಂಗಾಣ ಸರ್ಕಾರ ಒಂದು ಕೋಟಿ ರೂ. ಬಹುಮಾನ ಪ್ರಕಟಿಸಿದೆ. ಮೂಲಗಳಿಂದ ತಿಳಿದುಬಂದಿರುವಂತೆ ಸಿಂಧು ಅವರಿಗೆ ಸೈಟ್ ಮಂಜೂರು ಮಾಡುವುದಾಗಿಯೂ ಭರವಸೆ ನೀಡಿದೆ ಎಂದು ತಿಳಿದುಬಂದಿದೆ.

ಫುಟ್‌ಬಾಲ್ ಸಂಸ್ಥೆಯಿಂದ ೫ ಲಕ್ಷ ರೂ.

ರಿಯೋ ಒಲಿಂಪಿಕ್ಸ್ ಪದಕ ವಿಜೇತರಾದ ಸಿಂಧು ಮತ್ತು ಸಾಕ್ಷಿ ಮಲಿಕ್?ಗೆ ತಲಾ ಐದು ಲಕ್ಷ ರೂ. ನೀಡುವುದಾಗಿ ಅಖಿಲ ಭಾರತ} ಫುಟ್ಬಾಲ್ ಸಂಸ್ಥೆ ಪ್ರಕಟಿಸಿದೆ.

ಮಧ್ಯಪ್ರದೇಶ ಸರ್ಕಾರದಿಂದ ೫೦ ಲಕ್ಷ ರೂ.

ಸಿಂಧು ಸಾಧನೆಯನ್ನು ಮೆಚ್ಚಿಕೊಂಡಿರುವ ಮಧ್ಯಪ್ರದೇಶ ಸರ್ಕಾರ ಕೂಡ ೫೦ ಲಕ್ಷ ರೂ ಬಹುಮಾನ ಪ್ರಕಟಿಸಿದೆ.