ಬಾದೂಷಾ ಸಾಧಾರಣ ಸಿಹಿ

0
1463

ಬಾದೂಷಾ ಸಾಧಾರಣ ಸಿಹಿಯಾದರೂ, ತಿನ್ನಲು ಬಲು ಸವಿ. ಬನ್ನಿ ನಾವೂ ಬಾದೂಷಾ ಮಾಡೋಣ.

ಬೇಕಾಗುವ ಸಾಮಾಗ್ರಿಗಳು:

download

  • ಅರ್ಧಕೆ.ಜಿ. ಮೈದಾಹಿಟ್ಟು,
  • ಅರ್ಧ ಕೆ.ಜಿ. ಸಕ್ಕರೆ,
  • ಸ್ವಲ್ಪ ತುಪ್ಪ,
  • ಒಂದು ಸಣ್ಣ ಚಿಟಿಕೆಯಷ್ಟು ಅಡಿಗೆ ಸೋಡಾ,
  • ಒಂದು ಲೋಟದಷ್ಟು ಗಟ್ಟಿ ಮೊಸರು.

ಮಾಡುವ ವಿಧಾನ :

ಒಲೆಯಲ್ಲಿ ಪಾತ್ರೆ ಇಟ್ಟು ಸಕ್ಕರೆ ಮತ್ತು ಒಂದು ಲೀಟರ್ ನೀರು ಹಾಕಿಕೊಂಡು ಸಕ್ಕರೆ ಎಳೆ ಪಾಕವನ್ನು ಮೊದಲು ತಯಾರಿಸಿಟ್ಟುಕೊಳ್ಳಬೇಕು. ಇದು ಜಾಸ್ತಿ ನೀರಾಗದಂತೆ ನೋಡಿಕೊಳ್ಳಿ. ಮೈದಾ ಹಿಟ್ಟಿಗೆ ತುಪ್ಪ, ಮೊಸರು, ಅಡಿ ಸೋಡಾ ಬೆರೆಸಿ ಕಲಸಿ ಚೆನ್ನಾಗಿ ನಾದಿ ಇಟ್ಟುಕೊಳ್ಳಬೇಕು. ಕಲಸಿದ ಹಿಟ್ಟು ಚಪಾತಿ ಹಿಟ್ಟಿನಂತೆ ಇದ್ದರೆ ಒಳ್ಳೆಯದು ಆನಂತರ ಅದನ್ನು ಚಪಾತಿ ಮಣೆಯ ಮೇಲೆ ತಟ್ಟಿ, ಕಲಸಿದ ಹಿಟ್ಟಿನಿಂದ ಸಣ್ಣ ಸಣ್ಣ ಉಂಡೆಗಳನ್ನು ಮಾಡಿ ಆ ಉಂಡೆಗಳನ್ನು ಒಂದೊಂದಾಗಿ ತುಪ್ಪದಲ್ಲಿ ಕರಿದು, ಸಕ್ಕರೆಯ ಪಾಕದಲ್ಲಿ ಐದರಿಂದ ಹತ್ತು ನಿಮಿಷಗಳ ಕಾಲ ನೆನೆಸಿಡಬೇಕು. ಆ ಬಳಿಕ ಪಾಕದಿಂದ ತೆಗೆದರೆ ಬೂದೂಷಾ ಸಿದ್ಧ.