ಕನ್ನಡಿಗರ ಒತ್ತಡದ ಮೇರೆಗೆ ಕೊನೆಗೂ ಕನ್ನಡದಲ್ಲಿ ಅಪ್ ಬಿಟ್ಟ ಬೆ.ಮ.ಸಾ.ಸಂ

0
1561

ಬೆಂಗಳೂರು: ಬಿಎಂಟಿಸಿ ಬಸ್ಗಳ ವೇಳಾಪಟ್ಟಿ, ಮಾರ್ಗದ ವಿವರ, ಟಿಕೆಟ್ ದರ ಸೇರಿದಂತೆ ಇನ್ನಿತರೆ ಮಾಹಿತಿಗಳನ್ನು ಪ್ರಯಾಣಿಕರು ಇನ್ನು ಮುಂದೆ ಮೊಬೈಲ್ ಆಯಪ್ನಲ್ಲಿ ಕನ್ನಡ ಭಾಷೆಯಲ್ಲೇ ಪಡೆಯಬಹುದಾಗಿದೆ.

ಪ್ರಯಾಣಿಕರ ಅನುಕೂಲಕ್ಕಾಗಿ ಬಿಎಂಟಿಸಿ ಅಭಿವೃದ್ಧಿಪಡಿಸಿದ್ದ ‘ಬಿಎಂಟಿಸಿ ಆಯಪ್’ ಮೇ 25ರಂದು ಲೋಕಾರ್ಪಣೆ ಆಗಿತ್ತು. ಆದರೆ, ಅದರಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಮಾತ್ರ ಮಾಹಿತಿ ಒದಗಿಸಲಾಗಿತ್ತು. ಕನ್ನಡದಲ್ಲೂ ಮಾಹಿತಿ ನೀಡಬೇಕೆಂದು ಸಾರ್ವಜನಿಕರು ಸಾಮಾಜಿಕ ಜಾಲ ತಾಣಗಳ ಮೂಲಕ ಮನವಿ ಮಾಡಿದ್ದರು. ಇದೀಗ, ಬಿಎಂಟಿಸಿಯು ಆಯಪ್ನಲ್ಲಿದ್ದ ಅಷ್ಟೂ ವಿವರಗಳನ್ನು ಕನ್ನಡಕ್ಕೂ ತರ್ಜುಮೆ ಮಾಡಿದೆ. ಎರಡೂ ಭಾಷೆಗಳಲ್ಲೂ ಪ್ರಯಾಣಿಕರಿಗೆ ಸಮಗ್ರ ಮಾಹಿತಿ ಲಭ್ಯವಾಗಲಿದೆ.

ಸಂಸ್ಥೆಯು ಹೊಸ ವಿನ್ಯಾಸದಲ್ಲಿ ‘BMTC APP’ ಅಭಿವೃದ್ಧಿಪಡಿಸಿದೆ. ಆಸಕ್ತರು, ಆಯಂಡ್ರಾಯ್ಡ್ ಮೊಬೈಲ್ನಲ್ಲಿ ‘ಪ್ಲೇ ಸ್ಟೋರ್’ಗೆ ಹೋಗಿ ಈ ಆಯಪ್ ಡೌನ್ಲೋಡ್ ಮಾಡಿಕೊಳ್ಳಬಹುದು. ಈವರೆಗೆ 30 ಸಾವಿರ ಮಂದಿ ಇದನ್ನು ಡೌನ್ಲೋಡ್ ಮಾಡಿಕೊಂಡಿದ್ದಾರೆ.