ಬಿಎಸ್‌ಎನ್‌ಎಲ್‌ ಗ್ರಾಹಕರಿಗೆ ಬಂಪರ್‌ ಆಫರ್

0
2348

ಕಳೆದ ವಾರ ಎಲ್ಲರ ಬಾಯಲ್ಲೂ Jio ಸಿಮ್ ಮತ್ತು LYE ಮೊಬೈಲ್ ದೇ ಮಾತು. ರಿಲಯನ್ಸ್‌ ಕಂಪನಿ ಆರಂಭಿಸಿರುವ ಮೊಬೈಲ್‌ ಡಾಟಾ ಮತ್ತು ಕಾಲಿಂಗ್‌ ಟಾರಿಫ್ ಸಮರದಿಂದ ಗ್ರಾಹಕರಿಗೆ ನಿಜಕ್ಕೂ ಭಾರೀ ದೊಡ್ಡ ಗಾತ್ರದಲ್ಲಿ ಲಾಭವಾಗುತ್ತಿದೆ ಎನ್ನುವುದರಲ್ಲಿ ತಪ್ಪಿಲ್ಲ. ಯಾರು ಕಡಿಮೆ ಬೆಲೆಯಲ್ಲಿ ಉತ್ತಮ ಸೇವೆಯನ್ನು ನೀಡುತ್ತಾರೋ ಆ ಕಂಪೆನಿಗೆ ಗ್ರಾಹಕ ಹೋಗುವುದು ಸಾಮಾನ್ಯ. ಈ ಕಾನ್ಸೆಪ್ಟ್ ಇಟ್ಟುಕೊಂಡು ರಿಲಯನ್ಸ್‌ ಕಂಪನಿ ಕಳೆದ ಕೆಲ ದಿನಗಳ ಹಿಂದೆ ಉತ್ತಮ ಆಫರ್ ಗಳನ್ನೂ ಪರಿಚಯಿಸಿತ್ತು. ಈಗ ಬಿಎಸ್‌ಎನ್‌ಎಲ್‌ ಕಂಪನಿಯೂ ಕೂಡ ಜಿಯೋ ಮಾದರಿಯಲ್ಲಿ ಗ್ರಾಹಕರಿಗೆ ಬಂಪರ್‌ ಕೊಡುಗೆಯನ್ನು ನೀಡಲು ಮುಂದಾಗಿ ಈ ಸಮರದಲ್ಲಿ ಕಾಲಿಟ್ಟಿದೆ.

ಗ್ರಾಹಕರಿಗೆ ನೀಡಿದ ರಿಲಯನ್ಸ್‌ ಮಾಲೀಕತ್ವದ ಜಿಯೋದೊಂದಿಗೆ ಇತರ ಎಲ್ಲಾ ಟೆಲಿಕಾಂ ಕಂಪನಿಗಳು ಸಮರಕ್ಕೆ ನಿಂತಿವೆ. ಆದರೆ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಜಿದ್ದಿಗೆ ಬಿದ್ದ ಬಿಎಸ್ಎನ್ಎಲ್ ಗ್ರಾಹಕರಿಗೆ ಉಚಿತ ಕೊಡುಗೆಗಳ ಸುರಿಮಳೆಯನ್ನು ಸುರಿಸಿದೆ. ಇದರಿಂದಾಗಿ ಗ್ರಾಹಕರು ಅನ್‌ಲಿಮಿಟೆಡ್‌ ಕಾಲ್‌ ಮತ್ತು ಡಾಟಾ ಸೌಕರ್ಯವನ್ನು ಪಡೆಯಬಹುದಾಗಿದೆ.

ಬಿಎಸ್‌ಎನ್‌ಎಲ್‌ ಗ್ರಾಹಕರು ಈ ಕೆಳಗೆ ಕೊಡಲಾಗಿರುವ ಪೂರ್ಣ ಟಾರಿಫ್ ಚಾರ್ಟ್‌ ನೋಡಬಹುದಾಗಿದೆ :

comment_599601_attachment_images_1

1,199 ರೂ. ಬೆಲೆಗೆ ಲಭ್ಯವಿರುವ ಬಿಬಿಜಿ ಕಾಂಬೋ ಪ್ಲಾನ್‌ ಅಡಿ ಬಿಎಸ್‌ಎನ್‌ಎಲ್‌ ಗ್ರಾಹಕರು 24 ತಾಸುಗಳ ಅನ್‌ಲಿಮಿಟೆಡ್‌ ಡಾಟಾ ಮತ್ತು ಫೀ ಕಾಲ್‌ (ಲೋಕಲ್‌ + ಎಸ್‌ಟಿಡಿ) ಸೌಕರ್ಯವನ್ನು ಭಾರತದಲ್ಲಿನ ಎಲ್ಲ ವರ್ತುಲಗಳಲ್ಲಿ ಚಾಲ್ತಿಯಲ್ಲಿರುವ ಇತರ ಯಾವುದೇ ನೆಟ್‌ವರ್ಕ್‌ನೊಂದಿಗೆ ಪಡೆಯಬಹುದಾಗಿದೆ.

ಜಿಯೋ ಮಾದರಿಯಲ್ಲ ಉಚಿತ ಕಾಲ್‌ ಮತ್ತು ಉಚಿತ ಡಾಟಾ ಸೇವೆಯನ್ನು ನೀಡಲಿದೆ. ಇದರ ಜೊತೆ ಜೊತೆಗೆ ಬಿಬಿಜಿ ಕಾಂಬಿ ಪ್ಲಾನ್ ಘೋಷಿಸಿರುವ ಬಿಎಸ್ಎನ್ಎಲ್ ಡೇಟಾ ಮತ್ತು ಕರೆಯ ಬಳಕೆಗೆ ಯಾವುದೇ ಮಿತಿಯನ್ನು ವಿಧಿಸಿಲ್ಲ.