ಸ್ವಪಕ್ಷೀಯರಿಗೇ ಬಿಎಸ್.ವೈ ಟಾಂಗ್

0
1336

ಬೆಂಗಳೂರು: ಮುಂದಿನ ಚುನಾವಣೆ ಟಿಕೆಟ್ ಗೆ ಸರ್ವೆ ನಡೆಸೋಣ. ಯಾರು ಉತ್ತಮ ಕೆಲಸ ಮಾಡಿದವರಿಗೆ, ಮತದಾರ ಯಾರು ಬೇಕು ಎನ್ನುತ್ತಾರೆ ಅವರಿಗೆ ಟಿಕೆಟ್ ನೋಡೋಣ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಆ ಮೂಲಕ ಸ್ವಪಕ್ಷೀಯರಿಗೇ ಯಡಿಯೂರಪ್ಪ ಟಾಂಗ್ ನೀಡಿದ್ದಾರೆ.

ಬೆಂಗಳೂರಿನ ಮಲ್ಲೇಶ್ವರಂ ನಲ್ಲಿರುವ ಬಿಜೆಪಿ ಕಚೇರಿಯಲ್ಲಿ ನಡೆದ ರೈತಮೋರ್ಚಾ ರಾಜ್ಯ ಘಟಕದ ಅಧ್ಯಕ್ಷರಾಗಿ ಸಿ.ಎಚ್. ವಿಜಯ್ ಶಂಕರ್ ಪದಗ್ರಹಣ ಸಮಾರಂಭದಲ್ಲಿ ಯಡಿಯೂರಪ್ಪ ಹೇಳಿದ್ದಾರೆ.

ಕರ್ನಾಟಕದಲ್ಲಿ ಮುಂದಿನ ಚುನಾವಣೆಯಲ್ಲಿ 150ಸ್ಥಾನ ಗೆಲ್ಲಲೇಬೇಕು. ಟಿಕೆಟ್ ಆಕಾಕ್ಷಿಗಳು ಹೆಚ್ಚಿದ್ದರೆ ಎಲ್ಲರೂ ಕೆಲಸ ಮಾಡಲಿ. ಮತದಾರರ ಬಳಿ ಸರ್ವೆ ನಡೆಸೋಣ. ಮತದಾರ ಯಾರು ಬೇಕು ಅಂತಾರೆ ಅವರಿಕೆ ಟಿಕೆಟ್ ಕೊಡೋಣ. ಆದ್ರೆ ಕಾಲು ಎಳೆಯೋದ್ರಲ್ಲಿ ಪೈಪೋಟಿ ಬೇಡ. ಕೆಲಸ ಮಾಡುವುದರಲ್ಲಿ ಪೈಪೋಟಿ ಮಾಡಿ. ಆ ಮೂಲಕ ಕೆಲಸ ಮಾಡಿ ಜನಮಾನಸದಲ್ಲಿ ನೆಲೆ ಕಂಡುಕೊಂಡು ಟಿಕೆಟ್ ಪಡೆಯಿರಿ ಎಂದು ಯಡಿಯೂರಪ್ಪ ಹೇಳಿದ್ದಾರೆ

ಅರಣ್ಯ ಒತ್ತುವರಿ ಭೂಮಿ ಪರ ನಾನು ಹೋರಾಟ ಮಾಡುತ್ತ ಬಂದವನು ನಾನು. ನಾನು ಹೋರಾಟ ಮಾಡದೆ ಇದ್ದಿದ್ದರೆ ಇಷ್ಟೊತ್ತಿಗೆ ರೈತರನ್ನು ಒಕ್ಕಲೆಬ್ಬಿಸಲಾಗಿರುತ್ತಿತ್ತು. ಆದರೆ ಹಿಂದೆ ಬಗರ್ ಹುಕುಂ ಜಮೀನು ಖಾತೆಗೆ ಅರ್ಜಿ ಸಲ್ಲಿಸಲು ಇನ್ನೂ ಕಾಗೋಡು ತಿಮ್ಮಪ್ಪ ಕಾಲಾವಕಾಶ ನೀಡಿದ್ದಾರೆ. ಅದರ ಬಗ್ಗೆ ಜಾಗೃತಿ ಮೂಡಿ ಅರ್ಜಿ ಸಲ್ಲಿಸಿ. ಬಿಜೆಪಿ ಕೇಂದ್ರ ಸರ್ಕಾರ ಅತಿ ಹೆಚ್ಚು ರೈತರ ಪರ ಯೋಜನೆ ರೂಪಿಸಿದ್ದಾರೆ. ಅವೆಲ್ಲ ಇಟ್ಟುಕೊಂಡು ರೈತರ ವಿಶ್ವಾಸ ಗಳಿಸಿ ಎಂದು ಯಡಿಯೂರಪ್ಪ ಹೇಳಿದ್ದಾರೆ.

ಫಸಲ್ ಭಿಮಾ ಯೋಜನೆಯನ್ನು ಪ್ರತಿ ರೈತನಿಗೆ ಮುಟ್ಟಬೇಕು. ರೈತನ ಏಳಿಗೆಗೆ ನಾವೆಲ್ಲ ಶ್ರಮಿಸಬೇಕು. ಸಾಮಾನ್ಯ ಒಬ್ಬ ರೈತನ ಬೆಳೆ ನಾಶವಾದ್ರೂ ಅದಕ್ಕೆ ಸೆಟಲೈಟ್ ಮೂಲಕ ಹುಡುಕಿ ಪರಿಹಾರ ವಿತರಿಸುವುದು ಕೇಂದ್ರ ಸರ್ಕಾರದ ಉದ್ದೇಶ. ರಸಗೊಬ್ಬರಗಳ ದರ ಇಳಿಕೆಯಾಗಿದೆ. ರಸಗೊಬ್ಬರ ಪೂರೈಕೆ ಮಾಡಲಾಗುತ್ತಿದೆ. ಈಗ ಎಲ್ಲೂ ಗೊಬ್ಬರ ಸಮಸ್ಯೆಯಾಗಿಲ್ಲ ಎಂದು ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.