ಬಿಗ್ ಬಾಸ್-೪ ಮನೆಗೆ ಬರಲು ಯಾರಿಗೆ ಆಹ್ವಾನ ಹೋಗಿದೆ ಗೊತ್ತಾ?

0
1498

ಬಿಗ್ ಬಾಸ್ ೪ ಅಕ್ಟೋಬರ್ ನಿಂದ ನಿಮ್ಮ ಮನೆಗಳಿಗೆ ಪ್ರವೇಶಿಸಲು ರೆಡಿಯಾಗಿದ್ದಾನೆ. ಸೆಲೆಬ್ರೆಟಿಗಳ ನಿಜವಾದ ರೂಪ ನೋಡೋ ಕುತೂಹಲ ಇರೋರು ಈ ಬಾರಿ ಯಾರು ಬರ್ತಾರೆ ಅನ್ನೋ ಕುತೂಹಲದಿಂದ ಕಾಯ್ತಿ ದ್ದಾರೆ. ಈ ಕುತೂಹಲ ತಣಿಸೋಕೆ ಅಂತಲೇ ರಿಯಾಲಿಟಿ ಶೋ ಪ್ರಸಾರ ಮಾಡುತ್ತಿರುವ ಕಲರ್ಸ್ ಸಂಭಾವ್ಯರ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಕಾರ್ಯಕ್ರಮವನ್ನು ಈ ಹಿಂದಿನಂತೆ ಕಿಚ್ಚ ಸುದೀಪ್ ಅವರೇ ನಿರ್ವಹಿ ಸಲಿದ್ದು, ಕಲರ್ಸ್ ಅಥವಾ ಕಲರ್ಸ್ ಸೂಪರ್ ನಲ್ಲಿ ಪ್ರಸಾರ ಆಗುವ ಬಗ್ಗೆ ಚರ್ಚೆ ನಡೆದಿದೆ.

ವಿಭಿನ್ನ ಸಿನಿಮಾಗಳ ಮೂಲಕ ಗುರುತಿಸ್ಕೊಂಡಿರುವ ನವೀನ್ ಕೃಷ್ಣಗೆ ಬಿಗ್ ಬಾಸ್ 4ನಿಂದ ಕರೆಹೋಗೋ ಸಾಧ್ಯತೆಯಿದೆ.

ತುಪ್ಪದ ಹುಡುಗಿ ರಾಗಿಣಿಗೆ ಕೂಡ ಕರೆ ಹೋಗಿದ್ದು, ಅವರು ಭಾಗವಹಿಸಲಿದ್ದಾರೆಯೇ ಎನ್ನುವುದು ಸದ್ಯ ದಲ್ಲೇ ಗೊತ್ತಾಗಲಿದೆ.

ಲೂಸ್ ಮಾದ ಯೋಗಿಯ ಸಿನಿಮಾಗಳು ಅಷ್ಟೊಂದು ಸದ್ದು ಮಾಡ್ತಿಲ್ಲ. ಇದ್ನೆ ಎನ್ ಕ್ಯಾಶ್ ಮಾಡೋದಿಕ್ಕೆ ಹೊರಟಿರೋ ಬಿಗ್ ಬಾಸ್ ಟೀಂ ಯೋಗಿಯನ್ನು ಮನೆ aಯಲ್ಲಿ ಕೂರಿಸೋದಿಕ್ಕೆ ಪ್ಲಾನ್ ಮಾಡ್ಕೊಂಡಿದೆ. ಬಿಗ್ ಬಾಸ್ ಸೀಸನ್ 1ರಲ್ಲಿ ಯೋಗಿ ಗೆಸ್ಟಾಗಿ ಎಂಟ್ರಿ ಕೊಟ್ಟಿದ್ದರು. ಬಿಗ್ ಬಾಸ್ ಮನೆಗೆ ಕರಿಯೋದಿಕ್ಕೆ ಮಾಡಿರೋ ಮೊದಲ ಲಿಸ್ಟ್ ನಲ್ಲಿ ನಟ ಕೋಮಲ್ ಹೆಸರು ಕೂಡ ಇದೆ.

ಇವರ ಜೊತೆಗೆ ಸುಧಾರಾಣಿ, ಅನು ಪ್ರಭಾಕರ್, ತಾರಾ, ಗಾನಾಬಜಾನ ತರುಣ್ ಮುಂತಾದವರ ಹೆಸರುಗಳು ಕೇಳಿ ಬರುತ್ತಿದೆ. ಎಲ್ಲರಿಗೂ ಗೊತ್ತಿರುವ ಹಾಗೆ ಬಿಗ್ ಬಾಸ್ ಮನೆಗೆ ಕಾಂಟ್ರವರ್ಸಿ ಮಾಡಿಕೊಂಡವರಿಗೆ ಹೆಚ್ಚಿನ ಆದ್ಯತೆ ಇರುತ್ತೆ.

ಈ ಬಾರಿ ಯಾರಿರ್ತಾರೆ ಅನ್ನೋ ಪ್ರಶ್ನೆಗೆ ಅಕ್ಟೋಬರ್ ಕೊನೆಯ ವಾರ ಉತ್ತರ ಸಿಗಲಿದೆ.