ಬೆಂಗಳೂರಿನಲ್ಲಿ ಕನ್ನಡಿಗನಿಗೆ ಚೂರಿ ಇರಿದ ತಮಿಳು ಯುವಕ ಅರೆಸ್ಟ್‌

0
782

ಕಾವೇರಿ ವಿವಾದ ಜೋರಾಗಿರುವ ವೇಳೆಯಲ್ಲಿ ನಗರದ ರಾಜಾಜಿನಗರದಲ್ಲಿ ಕನ್ನಡ ಮಾತಾಡು ಎಂದಿದ್ದಕ್ಕೆ ಯುವಕನೊಬ್ಬನಿಗೆ ತಮಿಳು ಭಾಷಿಕ ಯುವಕನೊಬ್ಬ ಚೂರಿ ಇರಿದ ಘಟನೆ ನಡೆದ ಬಗ್ಗೆ ಉದಯವಾಣಿಯಲ್ಲಿ ವರದಿ ಮಾಡಿದೆ.

ಗಣೇಶೋತ್ಸವ ವಿಸರ್ಜನೆ ಮೆರವಣಿಗೆ ವೇಳೆ ಈ ಘಟನೆ ನಡೆದಿದ್ದು ದೇವರಾಜ್‌ ಎಂಬ ಯುವಕನಿಗೆ ತಮಿಳು ಭಾಷಿಕ ಧರಣೇಂದ್ರ ಎಂಬಾತ ಚೂರಿ ಇರಿದಿದ್ದಾನೆ.

ಇತರರೊಂದಿಗೆ ತಮಿಳು ಭಾಷೆಯಲ್ಲಿ ಮಾತನಾಡುತ್ತಿದ್ದುದನ್ನು ಆಕ್ಷೇಪಿಸಿ ಇದು ಕರ್ನಾಟಕ ಕನ್ನಡ ಮಾತಾಡು ಎಂದು ಹೇಳಿದ್ದಕ್ಕೆಚೂರಿ ಇರಿದಯಲಾಗಿದೆ ಎಂದು ಹೇಳಲಾಗಿದೆ.

ಗಾಯಾಳು ದೇವರಾಜ್‌ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಧರಣೇಶ್‌ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ