ಬೆಂಗಳೂರಿನಲ್ಲಿ ಮತ್ತೆ ಬೀದಿ ನಾಯಿಗಳ ಹಾವಳಿ .

0
1414

ಬೆಂಗಳೂರು : ನಗರದ ಮಾಗಡಿ ರಸ್ತೆಯ ಅಂಜನಾ ನಗರದಲ್ಲಿ ಆಟವಾಡುತ್ತಿದ್ದ 6 ವರ್ಷದ ಬಾಲಕಿಯ ಮೇಲೆ 10ಕ್ಕೂ ಹೆಚ್ಚು ಬೀದಿ ನಾಯಿಗಳು ದಾಳಿ ನಡೆಸಿದ ಆತಂಕಕಾರಿ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ. ಬಾಲಕಿಯನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಆಕೆಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.dog bite

ಇನ್ನೊಬ್ಬ ಬಾಲಕಿಯೊಂದಿಗೆ ಆಟವಾಡುತ್ತಿದ್ದ ವೇಳೆ 10ಕ್ಕೂ ಹೆಚ್ಚು ಬೀದಿ ನಾಯಿಗಳು ಬಾಲಕಿ ರಮ್ಯಾ ಮೇಲೆ ಎರಗಿವೆ. ಕೈ ,ಕಾಲು ,ಮುಖ ಮತ್ತು ಕುತ್ತಿಗೆ ಭಾಗಕ್ಕೆ ಸಿಕ್ಕಲೆಲ್ಲಾ ಕಚ್ಚಿ ಗಂಭೀರ ಸ್ವರೂಪದ ಗಾಯಗೊಳಿಸಿವೆ. ಈ ವೇಳೆ ಇನ್ನೊರ್ವ ಬಾಲಕಿ ಓಡಿ ಹೋಗಿ ತನ್ನನ್ನು ರಕ್ಷಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾಳೆ.

ಈ ಸಂಬಂಧ ಬಿಬಿಎಂಪಿಗೆ ಬಾಲಕಿಯ ಪೋಷಕರು ಮತ್ತು ಸ್ಥಳೀಯರು ದೂರು ನೀಡಿದರೂ ಯಾರೊಬ್ಬರು ಸ್ಥಳಕ್ಕಾಗಮಿಸದೆ ಬೇಜವಾಬ್ದಾರಿ ತೋರಿದ್ದಾರೆ. ಇದರ ವಿರುದ್ದ ನಾಗರಿಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.