ಬೆಂಗಳೂರಿನಲ್ಲಿ 32 ಕೋಟಿ ರೂ. ಬಂಗಲೆ ಖರೀದಿಸಿದ ಫ್ಲಿಪ್ ಕಾರ್ಟ್ ಸಿಇಒ

0
921

ಆನ್ ಲೈನ್ ರಿಟೇಲರ್ ಫ್ಲಿಪ್ ಕಾರ್ಟ್ ನ ಸಹ ಸಂಸ್ಧಾಪಕ ಮತ್ತು ಸಿಇಒ ಬಿನ್ನಿ ಬನ್ಸಾಲ್ ಅವರು ಬೆಂಗಳೂರಿನ ಕೋರಮಂಗಲದಲ್ಲಿ ಬರೋಬ್ಬರಿ 32 ಕೋಟಿ ರೂ. ಗೆ ವೈಭವೋಪೇತ ಬಂಗಲೆ ಖರೀದಿಸಿದ್ದಾರೆ.

ಇನ್ನೂ 32ರ ಹರೆಯದ ಬಿನ್ನಿ ಬನ್ಸಾಲ್ ಕೋರಮಂಗಲದ ಮೂರನೇ ಹಂತದಲ್ಲಿ 10,000 ಚದರ ಅಡಿಯ ಪ್ಪಾಪರ್ಟಿತನ್ನು ತಮ್ಮದಾಗಿಸಿದ್ದಾರೆ. ಕೇವಲ 9 ವರ್ಷಗಳ ಹಿಂದೆ ಫ್ಲಿಪ್ ಕಾರ್ಟ್ ಆರಂಭವಾಗಿತ್ತು. ಇದೀಗ ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಬಹು ದೊಡ್ಡ ಪ್ರಾಪರ್ಟಿ ಡೀಲ್ ಇದಾಗಿದೆ. ಇನ್ಫೋಸಿಸ್ ನ ಸಹ ಸಂಸ್ಧಾಕ ನಂದನ್ ಅವರ ನೆರೆಹೊರೆಯವರಾಗಲಿದ್ದಾರೆ. ಬಿನ್ನಿ ಬನ್ಸಾಲ್ ಅವರು ನೋಂದಣಿ ಪ್ರಕ್ರಿಯೆ ಪೂರ್ಣವಾಗಿದೆ.

ಫ್ಲಿಪ್ ಕಾರ್ಟ್ ನ ಮತ್ತೊಬ್ಬ ಸಹ ಸಂಸ್ಧಾಪಕ ಸಚಿನ್ ಬನ್ಸಾಲ್ ಕೂಡ ಕೋರಮಂಗಲದಲ್ಲಿ ಪ್ರಾಪರ್ಟಿ ಹೊಂದಿದ್ದು, ಸಣ್ಣ ಮಟ್ಟಿನದ್ದಾಗಿದೆ. ಫ್ಲಿಪ್ ಕಾರ್ಟ್ ನಲ್ಲಿರುವ ನಮ್ಮ ಕೆಲ ಷೇರುಗಳನ್ನು ಮಾರಿ ಆಸ್ತಿಯನ್ನು ಖರೀದಿಸಿದ್ದರು.

ಬಿನ್ನಿ ಬನ್ಸಾಲ್ ಅವರು ಕೋರಮಂಗಲದಲ್ಲಿ ದೀರ್ಘಕಾಲದಿಂದ ವಾಸವಾಗಿರುವ ಕುಟುಂಬವೊಂದರಿಂದ ಮನೆಯನ್ನು ಖರೀದಿಸಿದ್ದಾರೆ. ಸ್ಧಳೀಯ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಇತ್ತೀಚೆಗೆ ನಡೆದ ಅತಿ ದೊಡ್ಡ ವಸತಿ ಪ್ರಾಪರ್ಟಿ ವರ್ಗಾವಣೆ ಇದಾಗಿದ್ದು, ಭಾರಿ ಮೊತ್ತದ ಮುದ್ರಾಂಕ ಶುಲ್ಕವನ್ನು ನೀಡಿದ್ದಾರೆ. ರಿಯಾಲ್ಟಿ ವಲಯದ ಜೆಎಲೆ ಎಲ್ ಈ ವರ್ಗಾವಣೆಯನ್ನು ನಿರ್ವಹಿಸಿದೆ ಎನ್ನಲಾಗಿದೆ.