ಬೇಡ ಬಿಳಿ ಬ್ರೆಡ್ ಸಂಗ!!!

0
4757

ಇಂದು ಪ್ರಪಂಚದಾದ್ಯಂತ ಕೋಟ್ಯಾಂತರ ಜನ ಬ್ರೆಡ್ ತಿನ್ನುವುದನ್ನು ಇಷ್ಟಪಡುತ್ತಾರೆ. ಕೆಲವರಿಗಂತು ಬೆಳಗಿನ ಉಪಹಾರಕ್ಕೆ ಬ್ರೆಡ್ ಬೇಕೇ ಬೇಕು. ಬ್ರೆಡ್‍ದು ಕೋಟ್ಯಾಂತರ ರೂಪಾಯಿಯ ವಹಿವಾಟು, ನೀವು ಬ್ರೆಡ್ ಇಷ್ಟ ಪಡುತ್ತೀರಾ?ನೀವು ಬ್ರೆಡ್ ಇಷ್ಟ ಪಡುವವರ ಪಟ್ಟಿಯಲ್ಲಿದ್ದರೆ ಈ ಕೆಳಗಿನ ವಿವರಗಳನ್ನು ನೋಡಿ, ಬೆಚ್ಚಿಬೀಳುವ ಸರದಿ ನಿಮ್ಮದಾಗಬಹುದು.ನೀವು ತಿನ್ನುವ ಬಿಳಿ ಬ್ರೆಡ್ ಅದು ಸ್ವೀಟ್ ಅಥವಾ ಸಾಲ್ಟ್ ಬ್ರೆಡ್ ಆಗಿರಲಿ ಅದು ನಿಮ್ಮ ಆರೋಗ್ಯವನ್ನು ಹಾಳು ಮಾಡುವುದಷ್ಟೇ ಅಲ್ಲ ! ನೀವು ನಿಯಮಿತವಾಗಿ ಈ ಬಿಳಿ ಬ್ರೆಡ್ ತಿನ್ನುತ್ತಿದ್ದರೆ ಈ ಬಿಳಿ ಬ್ರೆಡ್ ನಿಮ್ಮ ಜೀವಕ್ಕೆ ಮಾರಕವಾಗಬಹುದು.

images_cms-image-000023976-nzM01

ಹಲವು ವರ್ಷಗಳಿಂದ ಈ ಬಿಳಿ ಬ್ರೆಡ್ ತಿನ್ನುವುದರಿಂದ ದೇಹದ ಮೇಲಾಗುವ ಮಾರಕ ಪರಿಣಾಮಗಳ ಬಗ್ಗೆ ಅರಿತಿದ್ದ ಸ್ವಿಸ್ಸ್ ಸರ್ಕಾರ ದೇಶದ ಪ್ರಜೆಗಳು ಈ ಬಿಳಿ ಬ್ರೆಡ್‍ನ್ನು ತಿನ್ನದಿರಲೆಂದು ಬಿಳಿ ಬ್ರೆಡ್‍ನ ಮಾರಾಟದ ಮೇಲೆ ತೆರಿಗೆ ವಿಧಿಸಿದೆ.ಈ ತೆರಿಗೆ ಹಣವನ್ನು ಸರ್ಕಾರ ಬೇಕರಿಯ ಮಾಲೀಕರಿಗೆ ಕೊಡುವ ಮೂಲಕ ಬೇಕರಿಯವರು ತಾವು ತಯಾರಿಸುವ ಇಡಿಗೋದಿಹಿಟ್ಟಿನಿಂದ ತಯಾರಿಸುವ ಬ್ರೆಡ್‍ನ ಬೆಲೆಯನ್ನು ತಗ್ಗಿಸುವುದರಿಂದ ಜನರು ಈಗ ಇಡಿಗೋದಿಯಿಂದಾದ ಬ್ರೆಡ್‍ನ್ನು ತಿನ್ನಲಾರಂಭಿಸಿದ್ದಾರೆ.ಕೆನಡಾ ಸರ್ಕಾರ ಕೃತಕ ಜೀವಸತ್ವಗಳನ್ನು ಬ್ರೆಡ್ ನಲ್ಲಿ ಉಪಯೋಗಿಸದಿರುವಂತೆ ನಿಷೇದ ಹೇರಿದ್ದು ನೈಸರ್ಗಿಕ ಸತ್ವಯುತ ಅಂಶಗಳು ಮಾತ್ರ ಬ್ರೆಡ್‍ನಲ್ಲಿ ಇರಬೇಕೆಂದು ಆದೇಶ ಹೊರಡಿಸಿದೆ.ಇದಕ್ಕೆ ಕಾರಣ ಏನು ಗೊತ್ತೆ? ವೈಟ್ ಬ್ರೆಡ್ಡನ್ನು “ಡೆಡ್” ಬ್ರೆಡ್ ಎಂದೇ ಪಾಶ್ಚಾತ್ಯರು ಕರೆಯುತ್ತಿದ್ದಾರೆ. ಕಾರಣ ಇದರಲ್ಲಿ ನೈಸರ್ಗಿಕ ಅಂಶಕ್ಕಿಂತ ಹಾನಿಕಾರಕ ರಾಸಾಯನಿಕಗಳೆ ಹೆಚ್ಚಾಗಿ ಇರುವುದೆ ಇದಕ್ಕೆ ಕಾರಣ.!!

ನೀವೆಂದಾದರೂ ಯೋಚಿಸಿದ್ದೀರಾ? ಬ್ರೆಡ್ ಗೋದಿಯಿಂದ ತಯಾರಾದರೂ ಅದರ ಬಣ್ಣ ಮಾತ್ರ ಬಿಳಿಯಾಗಿರುತ್ತದೆ. ಗೋದಿಯಿಂದ ತಯಾರಾದ ಬ್ರೆಡ್ ಗೋದಿ ಬಣ್ಣದಿಂದ ಕೂಡಿರಬೇಕಲ್ಲವೇ? ಗೋದಿಯಿಂದ ತಯಾರಾದ ಬ್ರೆಡ್ ಬಿಳಿಯಾಗಿರಲು ಕಾರಣ ಬ್ರೆಡ್ ತಯಾರಿಸುವ ಮುನ್ನ ಗೋದಿಯನ್ನು ‘ಬ್ಲೀಚ್” (ಬಣ್ಣ ತೆಗೆಯುವ ವಿಧಾನ) ಅಥವಾ ಬಿಳಿಯಾಗಿಸುವ ಕ್ರಿಯೆಗೆ ಒಡ್ಡಲಾಗುತ್ತದೆ. ನೀವು ಮನೆಯಲ್ಲಿ ಬಟ್ಟೆ ಬ್ಲೀಚ್ ಮಾಡುವುದಿಲ್ಲವೇ?ಹಾಗೆ. ನೀವು ಪ್ರತಿ ಬಾರಿ ಬ್ರೆಡ್ ತಿನ್ನುವಾಗ ಗೋದಿ ಹಿಟ್ಟನ್ನು ಬ್ಲೀಚ್ ಮಾಡಲು ಬಳಸಿದ ರಾಸಾಯನಿಕದ ಅಳುದುಳಿದ (ಖಿಡಿಚಿಛಿes ) ಅಂಶಗಳು ನಿಮ್ಮ ದೇಹವನ್ನು ಸೇರುತ್ತದೆ. ಹಿಟ್ಟಿನ ಗಿರಣಿಗಳು ಈ ಹಿಟ್ಟನ್ನು ಬ್ಲೀಚ್ ಮಾಡಲು ಅನೇಕ ರಾಸಾಯನಿಕಗಳನ್ನು ಉಪಯೋಗಿಸುತ್ತಾರೆ.ಅವುಗಳಲ್ಲಿ ಮುಖ್ಯವಾದವು ನೈಟ್ರೋಜನ್ ಆಕ್ಸೈಡ್ ಕ್ಲೋರಿನ್, ಕ್ಲೋರಡ್, ನೈಟ್ರೋಸಿಲ್ ಹಾಗೂ ಬೆನ್‍ಜೈಲ್ ಪೆರೊಕ್ಸೈಡ್, ಮುಂತಾದ ರಾಸಾಯನಿಕ ವಸ್ತುಗಳನ್ನು ಉಪಯೋಗಿಸುತ್ತಾರೆ.ಈ ಕ್ಲೋರಿನ್, ಕ್ಲೋರೈಡ್ ರಾಸಾಯನಿಕಗಳು ಹಿಟ್ಟಿನಲ್ಲಿರುವ ಪೋಟೀನ್ ಗಳೊಂದಿಗೆ ಬೇಗ ಬೆರೆತುಬಿಡುವುದರಿಂದ ಅವುಗಳು ಎಷ್ಟು ತೊಳೆದರು ಹೋಗುವುದಿಲ್ಲ. ಈ ಕ್ಲೋರೈಡ್ ಹಿಟ್ಟಿನೊಂದಿಗೆ ಬೆರೆತಾಗ “ಅಲೊಕ್ಸನ್”(ALOXON)ಎಂಬ ರಾಸಾಯನಿಕ ಬಿಡುಗಡೆಯಾಗುತ್ತದೆ. ಈ ಅಲೋಕ್ಸನ್‍ನ್ನು ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡುವ ಸಲುವಾಗಿ ಪ್ರಾಣಿಗಳಲ್ಲಿ ಕೃತಕವಾಗಿ ಮಧುಮೇಹ (ಸಕ್ಕರೆ ಕಾಯಿಲೆ) ಬರುವಂತೆ ಮಾಡಲು ಉಪಯೋಗಿಸುತ್ತಾರೆ ಈ ಅಲೊಕ್ಸನ್ ಗೋದಿಯಲ್ಲಿರುವ ಎಣ್ಣೆಯ ಅಂಶವನ್ನು ಹಾಳು ಮಾಡುತ್ತದೆ ಹಾಗೂ ಗೋದಿ ಹೆಚ್ಚು ದಿನ ಬಾಳಿಕೆ ಬರುವುದಿಲ್ಲ.

ಬ್ರೇಡ್ ತಯಾರಿಸಲು ಉಪಯೋಗಿಸುವ ಗೋದಿಯನ್ನು ಬಿಳಿಯಾಗಿಸುವ ಪ್ರಕ್ರಿಯೆಯಲ್ಲಿ ಬಳಸುವ ರಾಸಾಯನಿಕಗಳಾದ ನೈಟ್ರೋಜನ್ ಆಕ್ಸೈಡ್ ಕ್ಲೋರಿನ್, ಕ್ಲೋರಡ್, ನೈಟ್ರೋಸಿಲ್ ಹಾಗೂ ಬೆನ್‍ಜೈಲ್ ಪೆರೊಕ್ಸೈಡ್ ಗಳು ದೇಹದ ಮೇಲೆ ವ್ಯತಿರಿಕ್ತವಾದ ಪರಿಣಾಮ ಬೀರಬಲ್ಲವು, ನೈಟ್ರೋಜನ್ ಆಕ್ಸೈಡ್ ಉಸಿರಾಟದ ಪ್ರಕ್ರಿಯೆ ಮೇಲೆ ಪರಿಣಾಮ ಬೀರಿದರೆ, ದೇಹದಲ್ಲಿ ಅಧಿಕ ಕ್ಲೋರಿನ್, ಕ್ಲೋರಡ್ ಸೇರಿದರೆ ಅದು ಮೂತ್ರಕೋಶದ ಹಾಗೂ ಮೂತ್ರನಾಳದ ಕ್ಯಾನ್ಸರ್ ಗೆ ಕಾರಣವಾಗುತ್ತದೆ ಏಂದು ಅಧ್ಯಯನಗಳು ಹೇಳುತ್ತದೆ, ನೈಟ್ರೋಸಿಲ್ ಕೂಡ್ ಕ್ಯಾನ್ಸರ್ ಕಾರಕವಾಗಿದ್ದು ಶ್ವಾಸಕೋಶಕ್ಕೂ ಹಾನಿ ಮಾಡುತ್ತದೆ, ಬೆನ್‍ಜೈಲ್ ಪೆರೊಕ್ಸೈಡ್ ದೇಹದಲ್ಲಿ ಅಲರ್ಜಿಗೆ ಕಾರಣವಾಗುತ್ತದೆ

ನೀವು ತಿನ್ನುವ ಬಿಳಿ ಬ್ರೆಡ್ ನಲ್ಲಿ ಉತ್ತಮ ಜೀವಸತ್ವಗಳಾಗಲಿ ಅಥವಾ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳಾಗಲಿ ಇರುವುದಿಲ್ಲ! ಹಿಟ್ಟನ್ನು ಬಿಳಿಯಾಗಿಸುವ ಸಂಸ್ಕರಣೆ ಕಾರ್ಯದಲ್ಲಿ ಬಹಳಷ್ಟು ಪೋಷಕಾಂಶಗಳು ನಾಶವಾಗಿ ಹೋಗುತ್ತದೆ.ಗೋದಿ ಸಿಪ್ಪೆಯಲ್ಲಿರುವ “ಇ ಜೀವಸತ್ವ” ಗೋದಿಯ ತವುಡು ಹಾಗೂ ಸಿಪ್ಪೆಯ ಜೊತೆ0iÉು ಹೊರಟುಹೋಗುತ್ತದೆ ನೀವು ತಿನ್ನವ ಬ್ರೆಡ್ ನಲ್ಲಿ ಕೆಲವು ಜೀವ ಸತ್ವಗಳು ಪೋಷಕಾಂಶಗಳು ಹಾಗೂ ಕಳಪೆ ಗುಣಮಟ್ಟದ ಪೋಟೀನ್ ಗಳು ಮಾತ್ರ ಉಳಿದಿರುತ್ತದೆ ಜೊತೆಗೆ ಸ್ವಲ್ಪ ಪಿಷ್ತ ಮಾತ್ರ ಉಳಿದಿರುತ್ತದೆ.

ಪ್ರತಿಬಾರಿ ಬಿಳಿ ಬ್ರೆಡ್ ತಯಾರಾಗುವಾಗ ಪೋಷಕಾಂಶಗಳು ಜೀವಸತ್ವಗಳು ಎಷ್ಟು ಶೇಕಡಾ ನಾಶವಾಗುತ್ತದೆ ಗೊತ್ತಾ? ಪ್ರತಿ ಬಾರಿ ಬ್ರೆಡ್ ತಯಾರಾಗುವಾಗ 50 ಶೇಕಡಾ ಕ್ಯಾಲ್ಸಿಯಂ ನಾಶವಾಗುತ್ತದೆ ಶೇ 70 ರಷ್ಟು ರಂಜಕದಂಶ ನಾಶವಾದರೆ 80 ಶೇಕಡಾ ಕಬ್ಬಿಣಾಂಶ ನಾಶವಾಗುತ್ತದೆ 98 ಶೇಕಡಾ ಮಗ್ನಿಷಿಯಂ ನಾಶವಾದರೆ 50 ರಷ್ಟು ಪೋಟಾಷಿಯಂ ಅಂಶ ನಾಶವಾಗುತ್ತದೆ. ಬಿಳಿಬ್ರೆಡ್ ತಯಾರಾಗುವ ಪ್ರಕ್ರಿಯಲ್ಲಿ ಶೇಕಡಾ 65 ರಷ್ಟು ತಾಮ್ರದಂಶ (ಕಾಪರ್) ನಾಶವಾಗುತ್ತದೆ ಇಷ್ಟೇ ಅಲ್ಲ ಜೀವಸತ್ವಗಳಾದ 80 ಶೇಕಡಾ ಥಯಾಮಿನ್ ನಾಶವಾದರೆ ಶೇ 60 ರಷ್ಟು ರೈಬೋಫ್ಲೆಮಿನ್ (ಬಿ2 ಜೀವಸತ್ವ) 75 ಶೇಕಡಾ ನಿಯಾಸಿನಮೈಡ್ 50 ಶೇಕಡಾ ಪೆಂಟೊಥಿಯಾನಿಕ್ ಆಸಿಡ್ ವಿಟಮಿನ್ ನಾಶವಾಗುತ್ತದೆ ಹಾಗೂ 50 ಶೇಕಡಾ ಪಿರಿಡೊಕ್‍ಸಿನ್ (PYRIDOXINE) ಕೂಡ ನಷಿಸಿ ಹೋಗುತ್ತದೆ ಈಗ ನೀವು ತಿನ್ನುತ್ತಿರುವುದೇನನ್ನು?ಸ್ವಿಸ್ ಸರ್ಕಾರ ದಶಕಗಳಿಂದ ಬಿಳಿಬ್ರೆಡ್ ಆರೋಗ್ಯಕ್ಕೆ ಮಾರಕ ಎಂದು ಹೇಳಿದ್ದನ್ನು ಕ್ಯಾಲಿಫೆಪೋರ್ನಿಯಾದ ಕೃಷಿ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಅಧ್ಯಯನಗಳಿಂದ ಧೃಡಪಡಿಸಿದ್ದಾರೆ, ಹಾಗಾಗಿ ಜನತೆಯಲ್ಲಿ ಅವರು ಬಿಳಿಬ್ರೆಡ್ ತಿನ್ನಬೇಡಿರೆಂದು ಮನವಿ ಮಾಡಿದ್ದಾರೆ ಬ್ಲೀಚ್ ಮಾಡದ ಇಡಿ ಗೋದಿ ಹಿಟ್ಟಿನಿಂದ ತಯಾರಾದ ಬ್ರೆಡ್ ಆರೋಗ್ಯಕ್ಕೆ ಅತ್ಯುತ್ತಮ ಎಂದು ಇವರು ಅಭಿಪ್ರಾಯ ಪಟ್ಟಿದ್ದಾರೆ.ಗೋದಿ ಬಣ್ಣದಿಂದ ಕೂಡಿದ ಬ್ರೆಡ್ ಸಿಕ್ಕರೆ ಖರೀದಿಸಿ.ಗೋದಿ ಬಣ್ಣದ ಬ್ರೆಡ್ ಬ್ಲೀಚಿಂಗ್ ಕ್ರಿಯೆಗೆ ಒಳಗಾಗಿರುವುದಿಲ್ಲ. ಇದೇ ರೀತಿ ರಾಗಿ ಬ್ರೆಡ್ ಕೂಡ ಸಿಗುತ್ತದೆ. ನೀವು ಬ್ರೆಡ್ ಖರೀದಿಸುವಾಗ ಅದರ ಲೇಬಲ್ ಮೇಲೆ ಒಮ್ಮೆ ಕಣ್ಣು ಹಾಯಿಸಿ ಕೃತಕ ಬಣ್ಣಗಳು ಜೀವಸತ್ವಗಳು ಕೃತಕ ವಾಸನೆಗಳು ಆಹಾರ ರಕ್ಷಕಗಳು ಹೈಡ್ರೋಜಿನೆಟೆಡ್ ಎಣ್ಣೆಯಂಶದಿಂದ ತಯಾರಿಸಿದ ಬ್ರೆಡ್ ಗಳನ್ನು ಆಹಾರ ಪದಾರ್ಥಗಳನ್ನು ಖರೀದಿಸಲೇಬೇಡಿ ಕೃತಕ ವಸ್ತುಗಳಿಂದ ತಯಾರಾದ ಆಹಾರ ಮಾರಕವಾಗಬಹುದು!!

ಪ್ರಕಾಶ್.ಕೆ.ನಾಡಿಗ್
ಶಿವಮೊಗ್ಗ